Udayavni Special

ಗ್ರಾಮ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ


Team Udayavani, Oct 15, 2020, 6:24 PM IST

ಗ್ರಾಮ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ

ಚಾಮರಾಜನಗರ: ಡಿಸೆಂಬರ್‌ ಒಳಗೆ ಗ್ರಾ.ಪಂ. ಚುನಾವಣೆಗಳನ್ನು ನಡೆಸಬೇಕೆಂದು ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ
ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಾಸ್ತವವಾಗಿ ಆಯೋಗದ ನಿರ್ದೇಶನಕ್ಕೂ ಮುಂಚೆಯೇ ಯಾವುದೇ ಕ್ಷಣದಲ್ಲೂ ಗ್ರಾ.ಪಂ. ಚುನಾವಣೆ ನಡೆಯಬಹುದೆಂದು ಪ್ರಮುಖ ರಾಜಕೀಯ ಪಕ್ಷಗಳು ಚಟುವಟಿಕೆಗಳನ್ನು ನಡೆಸುತ್ತಲೇಬಂದಿವೆ.ಈಗ ಆಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿವೆ.ಕೋವಿಡ್‌ ಕಾರಣದಿಂದ ಜನ ಸಂದಣಿ ಸೇರ ಬಾರದು, ನೂರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಭೆ ನಡೆಸಬಾರದು ಎಂಬ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆ ಸೂಚಿಸಿದರೂ ರಾಜಕೀಯ ಪಕ್ಷಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದು ತಿಂಗಳಹಿಂದೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಭೆ ನಡೆಸಿದ್ದಾರೆ. ಗುಂಡ್ಲು ಪೇಟೆ ಚಾಮರಾಜನಗರ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಅವರು, ಚಾಮರಾಜನಗರದ ನಂದಿ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್‌ ಸಾಂಕ್ರಾಮಿಕ ಹರಡುವ ಆತಂಕದ ನಡುವೆಯೂ ನೂರಾರು
ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಲಾಗಿತ್ತು.

ಇದನ್ನೂ ಓದಿ:ಟಿಆರ್ ಪಿ ಹಗರಣ: ಮುಂಬೈ ಪೊಲೀಸರ ವಿರುದ್ಧದ ರಿಪಬ್ಲಿಕ್ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಮುಂಬರುವ ಗ್ರಾಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಸಭೆಗಳನ್ನು ನಡೆಸಲಾಯಿತು ಎಂಬುದು ರಾಜಕೀಯ
ತಿಳಿದವರಿಗೆ ಗೊತ್ತಿರದ ವಿಷಯವೇನಲ್ಲ. ಇನ್ನು, ಕಾಂಗ್ರೆಸ್‌ ಪಕ್ಷ ಸ್ವಾಮಿ ಕಾರ್ಯ ಸ್ವಕಾರ್ಯ ಎಂಬಂತೆ, ಕೋವಿಡ್‌ ತಪಾಸಣೆ
ಹೆಸರಿನಲ್ಲಿ ಅಭಯ ಹಸ್ತ ಎಂಬ ಕಾರ್ಯಕ್ರಮವನ್ನುಹಳ್ಳಿಹಳ್ಳಿಗಳಲ್ಲಿ ನಡೆಸುತ್ತಿದೆ. ಪಕ್ಷದ ಮುಖಂಡರು, ಗ್ರಾಮಗಳಿಗೆ ತೆರಳಿ ಜನರ ಹಣೆ ಮೇಲೆ ಜ್ವರ ಮಾಪಕ ಹಿಡಿಯುವುದೇ ಕೋವಿಡ್‌ ತಪಾಸಣೆ. ಶಾಸಕರು, ಪಕ್ಷದ ಅಧ್ಯಕ್ಷರು ಗ್ರಾಮಗಳಿಗೆ ತೆರಳಿ, ಜನರ ಗುಂಪು ಸೇರಿಸಿ ತಪಾಸಣೆನಡೆಸಿದ್ದಾರೆ.ಇದುಚುನಾವಣೆ ಉದ್ದೇಶವಿಟ್ಟುಕೊಂಡೇ ನಡೆಸಿದ ಕಾರ್ಯಕ್ರಮ ಎಂಬುದು ತಿಳಿಯದ ಸಂಗತಿಯಲ್ಲ. ಚುನಾವಣೆ ಕಾರಣಕ್ಕೇ ಪ್ರಮುಖ ಪಕ್ಷಗಳು ಕೋವಿಡ್‌ ನಂತಹ ಗಂಭೀರ ಸಮಸ್ಯೆ ನಡುವೆಯೂ ಈ
ಕಾರ್ಯಕ್ರಮಗಳನ್ನು ನಡೆಸಿವೆ.

ಇದನ್ನೂ ಓದಿ: ಡೋಣಿ ನದಿ ಪ್ರವಾಹ: ನಡುಗಡ್ಡೆಯಲ್ಲಿ ಸಿಲುಕಿದ ಕಾರ್ಮಿಕರು! ರಕ್ಷಣಾ ಕಾರ್ಯ ಚುರುಕು

ಗ್ರಾಪಂಗಳ ಅವಧಿ ಮುಗಿದು 3-4 ತಿಂಗಳಾಗಿರುವುದರಿಂದ ಹೊಸ ಪಂಚಾಯ್ತಿಗಳನ್ನು ರಚಿಸಲು ಚುನಾವಣೆ ನಡೆಸಬೇಕೆಂಬುದು ಸ್ಥಳೀಯ ಆಕಾಂಕ್ಷಿಗಳ ಒತ್ತಾಯ. ಇನ್ನು ಕೆಲವರು, ಕೋವಿಡ್‌ ಇದ್ದರೂ ಅನೇಕ ಚಟುವಟಿಕೆ ಅವ್ಯಾಹತವಾಗಿ ಸಾಗಿವೆ. ಚುನಾವಣಾ ಆಯೋಗ ಕೂಡ ಚುನಾವಣೆ ನಡೆಸುವ ಬಗ್ಗೆ ಒಲವು ತೋರುತ್ತಿರುವುದು ಚುನಾವಣೆ ಪರ ಇರುವವರಿಗೆ
ಒತ್ತಾಸೆಯಾಗಿದೆ. ಚುನಾವಣೆ ಖಚಿತವಾದರೆ ಇನ್ನಷ್ಟು ರಾಜಕೀಯ ಬೆಳವಣಿಗೆ ಚುರುಕುಗೊಳ್ಳಲಿವೆ.

ಇಡೀ ಜಿಲ್ಲೆಯಾದ್ಯಂತ ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಮಹಾಶಕ್ತಿ ಕೇಂದ್ರಗಳ ಸಭೆಗಳು ಆರಂಭವಾಗಿವೆ. ಗ್ರಾಮಗಳಲ್ಲಿ ಸಭೆ ಆರಂಭಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಗುರಿ ಹೊಂದಿದ್ದೇವೆ. ಚುನಾವಣಾ ಆಯೋಗದ ಸೂಚನೆ ಪಾಲಿಸಿ ಚುನಾವಣೆ ಎದುರಿಸುತ್ತೇವೆ. ಚುನಾವಣೆಗೆ ತಯಾರಾಗಿದ್ದೇವೆ.
– ಆರ್‌.ಸುಂದರ್‌, ಅಧ್ಯಕ್ಷ, ಜಿಲ್ಲಾ ಬಿಜೆಪಿ

ಗ್ರಾಪಂ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸದಾ ಸಿದ್ಧವಿದೆ. ಹೋಬಳಿ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ. ನಿನ್ನೆ ಸಹ
ಹರವೆ ಭಾಗದ ಸಭೆ ನಡೆಸಿದೆವು. ಅಲ್ಲದೇ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಚುನಾವಣೆಗೆ ಸಂಘಟನೆ ನಡೆಯುತ್ತಿದೆ.
– ಪಿ.ಮರಿಸ್ವಾಮಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger Capture After 21 Days of Operation – issue at chikkaballapur

21 ದಿನ ಕಾರ್ಯಾಚರಣೆ ಬಳಿಕ ಹುಲಿ ಸೆರೆ

ಸದಾಶಿವ ವರದಿಗೆ ವಿರೋಧ

ಸದಾಶಿವ ವರದಿ ಜಾರಿಗೆ ಬೃಹತ್‌ ಪ್ರತಿಭಟನೆ

gftyryt

ಚಾ.ನಗರ:  ಜಿ.ಪಂ. ಸಿಇಒ ಹರ್ಷಲ್ ನಾರಾಯಣರಾವ್ ವರ್ಗಾವಣೆ| ಕೆ.ಎಂ. ಗಾಯತ್ರಿ ನೂತನ ಸಿಇಒ

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಚಾ.ನಗರ ದಸರಾ ಮಹೋತ್ಸವ

ಚಾ.ನಗರ ದಸರಾ ಮಹೋತ್ಸವ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.