Udayavni Special

ಆರೋಗ್ಯ ವೃದ್ಧಿಗೆ ಹೊಸ ಲಸಿಕೆ ಪರಿಚಯ ಅಗತ್ಯ

Team Udayavani, Jul 21, 2019, 3:00 AM IST

arogya-vr

ಚಾಮರಾಜನಗರ: ಆರೋಗ್ಯ ಇಲಾಖೆಯು ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಹೊಸ ಲಸಿಕೆಗಳನ್ನು ಪರಿಚಯಿಸುತ್ತಿರುತ್ತದೆ. ಇದನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಿ, ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವ ಜವಾಬ್ದಾರಿ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಮೇಲ್ವಿಚಾರಕದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ರೋಟಾ ವೈರಸ್‌ ಲಸಿಕೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾರ್ಯಕ್ರಮ ಹಾಗೂ ವೈದ್ಯರು ಹಾಗು ಆರೋಗ್ಯ ಮೇಲ್ವಿಚಾರಕರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ರೋಟಾ ಲಸಿಕೆಯನ್ನು ಮಕ್ಕಳಿಗೆ ಹಾಕುವ ಮೂಲಕ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿರುವ ವೈದ್ಯರು ಮತ್ತು ಆರೋಗ್ಯ ಮೇಲ್ವಿಚಾರಕರು ಚೆನ್ನಾಗಿ ಆರ್ಥೈಯಿಸಿಕೊಂಡು ಲಸಿಕೆ ಹಾಕಿ, ಆರೋಗ್ಯ ಸುಧಾರಣೆಗೆ ತೊಡಗಿಸಿಕೊಳ್ಳಬೇಕು. ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನಿಮ್ಮ ಪಾತ್ರ ಬಹಳ ಇದೆ. ರೋಟಾ ಲಸಿಕೆಯನ್ನು ಮಗು ಹುಟ್ಟಿದ ಆರು ವಾರಗಳ ನಂತರ 14ನೇ ವಾರದ ವರೆಗೆ ನಿಯಮಿತವಾಗಿ ಮಗುವಿನ ಬಾಯಿಗೆ ಹಾಕಲಾಗುವುದು ಎಂದರು.

ಜಿಲ್ಲಾ ಲಸಿಕಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ, ಹೊಸ ಲಸಿಕೆಯಾಗಿರುವ ರೋಟಾ ವೈರಸ್‌ ಲಸಿಕೆಯನ್ನು ಮಗು ಜನನವಾದ 6ನೇ ವಾರ, 10ನೇ ವಾರ ಹಾಗೂ 14ನೇ ವಾರಗಳಲ್ಲಿ ಬಾಯಿಗೆ ಹಾಕುವ ಲಸಿಕೆಯಾಗಿದೆ. ಇದನ್ನು ಮಕ್ಕಳಿಗೆ ಹಾಕುವುದರಿಂದ ತೀವ್ರತರವಾಗಿ ಕಂಡು ಬರುವ ಅತಿಸಾರ ಭೇದಿ ಹತೋಟಿಗೆ ಬರುತ್ತದೆ. ಮಗುವಿನ ಬೆಳೆವಣಿಗೆಯು ಸಹ ತೃಪ್ತಿದಾಯಕವಾಗಿರುತ್ತದೆ.

ಈ ಉಪಯುಕ್ತ ಲಸಿಕೆಯನ್ನು ಜಿಲ್ಲೆಯಲ್ಲಿ ಒಂದು ಮಗುವು ಸಹ ತಪ್ಪದಂತೆ ಗುರಿ ಸಾಧನೆ ಮಾಡಬೇಕು. ಈ ಕಾರ್ಯಾಗಾರದ ಮೂಲಕ ಲಸಿಕೆ ಹಾಕುವ ಕುರಿತು ಪ್ರಾತ್ಯಕ್ಷತೆ ಹಾಗು ಕೈಪಿಡಿಯನ್ನು ನೀಡಲಾಗಿದೆ ಎಂದರು. ಸರ್ವೇಲೈನ್ಸ್‌ ಮೆಡಿಕಲ್‌ ಅಫೀಸರ್‌ ಡಾ. ಸುಧೀರ್‌ ನಾಯಕ್‌ ಹೊಸ ಲಸಿಕೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡುವ ಜೊತೆಗೆ ರೋಟಾ ವೈರಸ್‌ ಲಸಿಕೆ ಸಮಗ್ರ ವಿಚಾರವನ್ನು ಒಳಗೊಂಡ ಕೈಪಿಡಿಯನ್ನು ಪರಿಚಯಿಸಿದರು.

ಡಾ. ರಾಜು, ಡಾ. ಕಾಂತರಾಜು, ಡಾ. ನಾಗರಾಜು, ಡಾ. ಅಂಕಪ್ಪ, ಡಾ. ಮಹದೇವ್‌, ಗುರುಲಿಂಗಯ್ಯ, ತಾಲೂಕು ಆರೋಗ್ಯಾಧಿಕಾರಿಗಳು, ಶಾಂತಮ್ಮ ಸುರೇಶ್‌ ಚಾರ್ಯ, ನಾರಾಯಣಸ್ವಾಮಿ, ಮಂಜು, ದುಷ್ಯಂತ್‌, ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ವೆಸ್ಟ್‌ ಇಂಡೀಸ್‌ ಪ್ರವಾಸ: 23 ಸದಸ್ಯರ ಆಸೀಸ್‌ ತಂಡ ಪ್ರಕಟ

ವೆಸ್ಟ್‌ ಇಂಡೀಸ್‌ ಪ್ರವಾಸ: 23 ಸದಸ್ಯರ ಆಸೀಸ್‌ ತಂಡ ಪ್ರಕಟ

ಇಟಾಲಿಯನ್‌ ಓಪನ್‌ ಫೈನಲ್‌ : ರೋಮ್‌ ಟೆನಿಸ್‌ ಸಾಮ್ರಾಜ್ಯಕ್ಕೆ ನಡಾಲ್‌ ದೊರೆ

ಇಟಾಲಿಯನ್‌ ಓಪನ್‌ ಫೈನಲ್‌ : ರೋಮ್‌ ಟೆನಿಸ್‌ ಸಾಮ್ರಾಜ್ಯಕ್ಕೆ ನಡಾಲ್‌ ದೊರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರನೀಡಲು ಸಿಎಂರಿಂದ ಕ್ರಮ:ಸುರೇಶ್ಕುಮಾರ್

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರನೀಡಲು CMರಿಂದ ಕ್ರಮ:ಸುರೇಶ್‌ ಕುಮಾರ್

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

Persuasion to get vaccinated

ಸೋಲಿಗರು ಲಸಿಕೆ ಪಡೆಯಲು ಮನವೊಲಿಕೆ

basava jayanthi celabration

ಬಸವೇಶ್ವರರ ಅನುಭವ ಮಂಟಪ ವಿಶ್ವಕ್ಕೇ ಮಾದರಿ

covid Center

ಕೋವಿಡ್‌ ಸೆಂಟರ್‌ ತಡವಾಗಿ ತೆರೆದರೂ ಸೌಲಭ್ಯಗಳಿಲ್ಲ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.