
ಮಳಿಗೆಗಳ ಬಳಿ ಶೇ.100 ತ್ಯಾಜ್ಯ ವಿಲೇವಾರಿ ಕಡ್ಡಾಯ
Team Udayavani, Dec 16, 2020, 4:32 PM IST

ಚಿಕ್ಕಬಳ್ಳಾಪುರ: ನಗರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಶೇ.100ರ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಚಿಕ್ಕಬಳ್ಳಾಪುರವನ್ನು ಸ್ವತ್ಛ,ಸುಂದರ ನಗರವನ್ನಾಗಿ ಮಾಡಲು ವರ್ತಕರು ಹಾಗೂವ್ಯಾಪಾರಸ್ಥರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ನಗರದ ವರ್ತಕರು ಹಾಗೂ ವ್ಯಾಪಾರಸ್ಥರಿಗೆ ಸ್ವತ್ಛತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಚ್ಛ ಸರ್ವೇಕ್ಷಣಾ 2020ರ ದಕ್ಷಿಣಾ ವಲಯದಲ್ಲಿ ಚಿಕ್ಕಬಳ್ಳಾಪುರವು 9ನೇ ಸ್ಥಾನದಲ್ಲಿದೆ. ಅದನ್ನು ಪ್ರಥಮ ಸ್ಥಾನಕ್ಕೆ ತರಲು ಎಲ್ಲಾ ವರ್ತಕರು, ವ್ಯಾಪಾರಸ್ಥರುಹಾಗೂ ಸ್ಥಳೀಯ ಎಲ್ಲಾ ನಾಗರಿಕರು ಸಹಕಾರ ನೀಡಬೇಕು. ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಬಿದ್ದ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರತಿಯೊಬ್ಬರೂ ಕಸದ ಬುಟ್ಟಿಯನ್ನು ಇಟ್ಟುಕೊಂಡು, ಪ್ರತಿದಿನವೂ ನಗರಸಭೆ ವಾಹನಕ್ಕೆ ನೀಡಬೇಕು. ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್‌ಅನ್ನು ಯಾವುದೇ ಕಾರ ಣಕ್ಕೂ ಮರುಬಳಕೆ ಮಾಡಬಾರದು ಎಂದರು.
ಖಡಕ್ ಎಚ್ಚರಿಕೆ: ಅಂಗಡಿಗಳ ಮುಂದೆ 2 ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟು, ಹಸಿ ಮತ್ತು ಒಣತ್ಯಾಜ್ಯವಾಗಿ ವಿಂಗಡಣೆ ಮಾಡಬೇಕು. ಈ ನಿಯಮ ಗಳನ್ನು ಉಲ್ಲಂಘಿಸಿ ರಸ್ತೆ ಅಥವಾ ಅಂಗಡಿ ಮುಂಭಾಗ ಕಸ ಹಾಕುವವರ ವಿರುದ್ಧ ದೊಡ್ಡ ಮಟ್ಟದಲ್ಲಿ ದಂಡ ಹಾಕಲಾಗುತ್ತದೆ. ಎರಡನೇ ಬಾರಿಗೂ ಇದು ಮರು ಕಳುಹಿಸಿದರೆ ಅಂಗಡಿಯನ್ನು ಮುಚ್ಚಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು, ಮಂಗಳವಾರದಿಂದಲೇ ನಗರದಲ್ಲಿ ಶೇ.100ರಕಸ ವಿಲೇವಾರಿ ಆಗಬೇಕಿದ್ದು, ಬುಧವಾರದಿಂದನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ದಂಢ ವಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಂದ ದಟ್ಟಣೆ : ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ನಗರದಲ್ಲಿ ಬೀದಿಬದಿಯ ವ್ಯಾಪಾರಿಗಳು ನಗರಸಭೆಯವರು ನಿಗಪಡಿಸಿರುವ ಜಾಗಗಳಲ್ಲಿಮಾತ್ರವೇ ವ್ಯಾಪಾರ ಮಾಡಬೇಕು. ಆದರೆ, ಕೆಲವು ಕಡೆಇದು ಆಗುತ್ತಿಲ್ಲ. ತಳ್ಳುವ ಗಾಡಿಯವರು ರಸ್ತೆಗೆಅಂಟಿಕೊಂಡಂತೆ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು,ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದರು. ನಗರಸಭೆ ಆಯುಕ್ತ ಲೋಹಿತ್ ಕುಮಾರ್ ಮಾತ ನಾಡಿ,ಚಿಕ್ಕಬಳ್ಳಾಪುರ ನಗರದಲ್ಲಿ ಒಟ್ಟು2,240 ವ್ಯಾಪಾರಸ್ಥರು ಇದ್ದು, 14902 ಕುಟುಂಬಗಳಿವೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಸಾರ್ವಜನಿಕರು ಕಸ ಹಾಕದಂತೆ ತಡೆಗಟ್ಟಲು 26 ಮಂದಿ ಸ್ವಚ್ಛತಾ ಕ್ಯಾಪ್ಟನ್‌ಗಳನ್ನು ನೇಮಿಸಲಾಗಿದೆ. ಇವರು ಪ್ರತಿ ನಿತ್ಯ ಬೆಳಗ್ಗೆ 6.30 ರಿಂದ 8.30ಗಂಟೆಯವರೆಗೆ ತಮಗೆ ಹಂಚಿಕೆ ಮಾಡಿರುವ ವಾರ್ಡ್‌ಗಳಲ್ಲಿ ಸಂಚರಿಸಿರಸ್ತೆಗೆ ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಜತೆಗೆ ಉಲ್ಲಂಘಿಸುವವರ ವಿರುದ್ಧದಂಡಹಾಕಲಿದ್ದಾರೆ. ತ್ಯಾಜ್ಯ ಸಮಸ್ಯೆ ದೂರಿಗಳಿದ್ದಲ್ಲಿ 08156-275557 ಸಹಾಯವಾಣಿಗೆ ಸಂಪರ್ಕಿಸಲು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಆನಂದ್‌ರೆಡ್ಡಿ(ಬಾಬು),ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದರೇಣುಕಾ, ಡಿವೈಎಸ್‌ಪಿ ರವಿಶಂಕರ್ ಹಾಗೂ ನಗರದ ವಿವಿಧ ವರ್ತಕರು ಹಾಜರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
