Voters List: ಅಂತಿಮ ಮತದಾರರ ಪಟ್ಟಿ: ಮಹಿಳೆಯರೇ ಮೇಲುಗೈ!

Team Udayavani, Jan 24, 2024, 3:39 PM IST

Voters List: ಅಂತಿಮ ಮತದಾರರ ಪಟ್ಟಿ: ಮಹಿಳೆಯರೇ ಮೇಲುಗೈ!

ಚಿಕ್ಕಬಳ್ಳಾಪುರ: ಕೇಲವೇ ತಿಂಗಳಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಯ ಫ‌ಲಿತಾಂಶ ನಿರ್ಧರಿಸಲಿರುವ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪುರಷರಗಿತಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ.

ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ವರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ಅಂತಿಮ ಪಟ್ಟಿ ಯನ್ನು ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ 10,49,896 ಮಂದಿ ಮತದಾರರು ಇದ್ದಾರೆ. ಆ ಪೈಕಿ 5,18,151 ಪುರುಷ ಮತದಾರರು ಇದ್ದರೆ ಮಹಿಳಾ ಮತದಾರರು ಬರೋಬ್ಬರಿ 5,31,642 ಮಂದಿ ಇದ್ದಾರೆ.

12,286 ಮಂದಿ ಮತದಾರರು ಸೇರ್ಪಡೆ:  ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 18 ವರ್ಷ ತುಂಬಿದ ಬರೋಬ್ಬರಿ 12,286 ಮಂದಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 2,032,ಬಾಗೇಪಲ್ಲಿ ಕ್ಷೇತ್ರದಲ್ಲಿ 2,397, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,593, ಶಿಡ್ಲಘಟ್ಟ ಕ್ಷೇತ್ರದಲ್ಲಿ 2,340 ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 2,924 ಮಂದಿಯು ಸೇರ್ಪಡೆಗೊಂಡಿ ದ್ದಾರೆ. ಬರೋಬ್ಬರಿ 11,691 ತಿದ್ದುಪತಿಗಳು ಆಗಿವೆ. ಚಿಂತಾಮಣಿ ಯಲ್ಲಿ ಹಾಗೂ ಚಿಕ್ಕಬಳ್ಳಾಪುರ, ಗೌರಿಬಿದನೂರಲ್ಲಿ ಹೆಚ್ಚು ತಿದ್ದುಪಡಿಗಳಾಗಿವೆ.

ಸಾವಿರ ಪುರುಷರಿಗೆ 1026 ಮಹಿಳೆಯರು! ಜಿಲ್ಲೆಯ ಮತ ದಾರರ ಲಿಂಗಾನುಪಾತದಲ್ಲಿ ಸಾವಿರ ಪುರುಷರಿಗೆ ಸರಾಸರಿ 1026 ಮಂದಿ ಮಹಿಳೆಯರು ಇದ್ದಾರೆ. ಆ ಪೈಕಿ ಗೌರಿಬಿದ ನೂರಲ್ಲಿ 1,030, ಬಾಗೇಪಲ್ಲಿ ಕ್ಷೇತ್ರದಲ್ಲಿ 1032, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1,036. ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ 1,009, ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 1032 ಲಿಂಗಾನುಪಾತ ಕಂಡುಬಂದಿದೆ.

11,978 ಮಂದಿ ಮತದಾರರ ಪಟ್ಟಿಯಿಂದ ಹೊರಕ್ಕೆ! :

ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11,978 ಮಂದಿ ಮತದಾರರಿಗೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಮೂನೆ-7ರಲ್ಲಿ ಮರಣ ಹೊಂದಿದೆ. ಹಾಗೂ ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು ಹೊಂದಿದ ಕಾರಣಗಳಿಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಗೌರಿಬಿದನೂರಲ್ಲಿ 2,416, ಬಾಗೇಪಲ್ಲಿಯಲ್ಲಿ 2,508, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,795, ಶಿಡ್ಲಘಟ್ಟ ಕ್ಷೇತ್ರದಲ್ಲಿ 1,566 ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ 2,693 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 19.50 ಲಕ್ಷ ಮತದಾರರು :

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 19,50,443 ಮತದಾರರು ಇದ್ದಾರೆ. ಆ ಪೈಕಿ 9,80,641 ಮಹಿಳೆಯರು ಹಾಗೂ 9,69,538 ಪುರುಷರು ಹಾಗೂ ಇತರೇ 264 ಮಂದಿ ಸೇರಿ ಒಟ್ಟು 19,50,443 ಮಂದಿ ಮತದಾರರು ಇದ್ದಾರೆ. ಆ ಪೈಕಿ ಯಲಹಂಕ ಕ್ಷೇತ್ರದಲ್ಲಿ 4,45,861 ಮಂದಿ ಮತದಾರರು ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ 2,16,824, ದೇವನಹಳ್ಳಿ ಕ್ಷೇತ್ರದಲ್ಲಿ 2,13,408, ನೆಲಮಂಗಲದಲ್ಲಿ 2,18,929 ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ 2,35,907, ಗೌರಿಬಿದನೂರು ಕ್ಷೇತ್ರದಲ್ಲಿ 2,09,531, ಬಾಗೇಪಲ್ಲಿ ಕ್ಷೇತ್ರದಲ್ಲಿ 2,01,555 ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,08,428 ಮಂದಿ ಮತದಾರರು ಇದ್ದಾರೆ.

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.