Udayavni Special

ಶಾಸಕರು-ಸಚಿವರ ಗೈರು, ಸಾಹಿತ್ಯಾಭಿಮಾನಿಗಳ ಕೊರತೆ


Team Udayavani, Feb 28, 2021, 12:48 PM IST

ಶಾಸಕರು-ಸಚಿವರ ಗೈರು, ಸಾಹಿತ್ಯಾಭಿಮಾನಿಗಳ ಕೊರತೆ

ಚಿಕ್ಕಬಳ್ಳಾಪುರ: ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ. ಇಲ್ಲಿ ಕನ್ನಡ ಭಾಷೆಗಿಂತಲೂಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿದೆಯೆಂಬ ದೂರು ಸಾಮಾನ್ಯ. ಇಂತಹ ಪ್ರದೇಶದಲ್ಲಿ ನಡೆದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಸಹಿತ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಶಾಸಕರು ಗೈರು ಹಾಜರಾದರು.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಅಥವಾ ಕನ್ನಡ ಅಭಿಮಾನಿಗಳನ್ನು ಸೇರಿಸಬಾರದೆಂದುನಿರ್ಬಂಧ ಹೇರಿದ್ದರಿಂದ ಸಮ್ಮೇಳನದಲ್ಲಿ ಸರಳದ ನೆಪದಲ್ಲಿ ಸಂಪೂರ್ಣವಾಗಿ ಸರಳವಾಗಿ ನಡೆಯಿತು. ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿಲುವುಮತ್ತು ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ವಿಷಯದಲ್ಲಿ ಏನು ಕಾರ್ಯಕ್ರಮರೂಪಿಸಲಾಗಿದೆ ಎಂಬುದು ತಿಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಗೈರು ಹಾಜರಾಗಿದ್ದರು.

ಪ್ರಚಾರ ನಡೆಸಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಜಿಲ್ಲೆಯ ಶಿಡ್ಲಘಟ್ಟ,ಬಾಗೇಪಲ್ಲಿ, ಗೌರಿ ಬಿದನೂರು, ಚಿಂತಾ ಮಣಿಕ್ಷೇತ್ರದ ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗೈರು ಹಾಜರಿ ಎದ್ದುಕಾಣು ತ್ತಿತ್ತು. ಜಿಲ್ಲಾ ಮಟ್ಟದಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ವ್ಯಾಪಕ ವಾಗಿ ಪ್ರಚಾರ ನಡೆಸಿಲ್ಲವೆಂದು ದೂರು ಕೇಳಿಬಂದಿದೆ.

ಭಿನ್ನಮತ: ಜಿಲ್ಲೆಯಲ್ಲಿರುವ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್‌ ಮುಖಂಡರು ಮತ್ತು ಸದಸ್ಯರನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್‌ ವಿಶ್ವಾಸಕ್ಕೆತೆಗೆದುಕೊಂಡಿಲ್ಲವೆಂಬ ಗುರುತ್ತರ ಆರೋಪ  ಕೇಳಿಬಂದಿದೆ. ಒಟ್ಟಾರೆ ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮತ್ತು ಸದಸ್ಯರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ.

ಮಾಹಿತಿ, ಆಮಂತ್ರಣ ನೀಡಿದರೂ ಬಂದಿಲ್ಲ :

ಕೋವಿಡ್ ಸೋಂಕು ಕಾರಣ 500 ಮಂದಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರ ಅನ್ವಯ ಕನ್ನಡಪರ ಹೋರಾಟಗಾರರು-ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಸಾಪ ಸದಸ್ಯರಿಗೆಮಾಹಿತಿ ನೀಡಲಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ನಿರಾಧಾರ. ಜಿಲ್ಲೆಯ ಶಾಸಕರಿಗೆ ಖುದ್ದಾಗಿ ಭೇಟಿ ನೀಡಿ ಆಮಂತ್ರಣ ನೀಡಿದ್ದೇನೆ. ಅವರು ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೈವಾರ ಶ್ರಿನಿವಾಸ್‌ ಸ್ಪಷ್ಟಪಡಿಸಿದರು.

ಭಾಷಾಭಿಮಾನಿಗಳ ಕೊರತೆ :

ಸಮ್ಮೇಳನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಬಂದಿಲ್ಲ. ಕನ್ನಡಪರ ಸಂಘಟನೆಗಳ ಸದಸ್ಯರು ಸಹ ಕಾಣಿಸಲಿಲ್ಲ. ಕೆಲವರು ಒಲ್ಲದ ಮನಸ್ಸಿನಿಂದ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ ನೋಡಿ ಇದು ಜಿಲ್ಲಾ ಸಮ್ಮೇಳನವೋ? ಅಥವಾ ತಾಲೂಕು ಸಮ್ಮೇಳನವೋ? ಎಂದು ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ಅಂಗವಾಗಿ ಪುಸ್ತಕಗಳ ಮಳಿಗೆಗಳನ್ನು ಹಾಕಿದರೂ ಸಹ ಸಮ್ಮೇಳನದಲ್ಲಿ ಸಾಹಿತ್ಯ ಅಭಿಮಾನಿಗಳ ಕೊರತೆಯಿಂದ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ಸಹ ಕುಂಠಿತಗೊಂಡಿತ್ತು

ಟಾಪ್ ನ್ಯೂಸ್

Migrant workers problem

ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chamical spray for covid barrier

ಕೋವಿಡ್ ತಡೆಗಾಗಿ ಔಷಧ ಸಿಂಪಡಣೆ

Department of Horticulture

ಗುರಿ ಮೀರಿ ಸಾಧನೆ ಮಾಡಿದ ತೋಟಗಾರಿಕೆ ಇಲಾಖೆ

fhdfgdr

ಬಿ.ಎಸ್.ಎನ್.ಎಲ್. ಉದ್ಯೋಗಿ ನೇಣಿಗೆ ಶರಣು

ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ

ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ

Committed to development

ಪ.ಪಂಗಡ ಜನಾಂಗ ಅಭಿವೃದ್ಧಿಗೆ ಬದ್ದ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

hjyut6

ಹಾವೇರಿಯಲ್ಲಿ ಬಸ್‌ ಸಂಚಾರ ಪುನಾರಂಭ

gtrte

ಗದಗ ಜಿಲ್ಲೆಯಲ್ಲಿ ಶ್ರೀರಾಮನವಮಿ ಸರಳ ಆಚರಣೆ

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.