Udayavni Special

ಅಕ್ರಮ ಕೊಳಾಯಿ ಸಂಪರ್ಕ: ಕ್ರಮದ ಎಚ್ಚರಿಕೆ


Team Udayavani, Jul 23, 2019, 3:00 AM IST

akrama

ಶಿಡ್ಲಘಟ್ಟ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಅಕ್ರಮವಾಗಿ ಕೊಳಾಯಿ ಸಂಪರ್ಕ ಮತ್ತು ಮೋಟಾರ್‌ ಅಳವಡಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ನಗರಸಭೆಯ ಪೌರಾಯುಕ್ತ ಜಿ.ಎನ್‌.ಚಲಪತಿ ಎಚ್ಚರಿಕೆ ನೀಡಿದರು. ನಗರದ 20ನೇ ವಾರ್ಡ್‌ನ ನಿಸಾರ್‌ ಪಾಳ್ಯದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ನಂತರ ಮಾತನಾಡಿದರು.

ನಗರದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ಆಡಳಿತ ಬದ್ಧವಾಗಿದೆ. ಕುಡಿಯುವ ನೀರು ಪೂರೈಕೆಗಾಗಿ ಕೊರೆಯುತ್ತಿರುವ ಕೊಳವೆಬಾವಿಗಳು ವೈಫ‌ಲ್ಯದಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಯಾವ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ಸಮಾನವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾನೂನು ಕ್ರಮ: ನಗರದಲ್ಲಿ ಕುಡಿಯುವ ನೀರು ಪಡೆಯುವ ಸಲುವಾಗಿ ಕೆಲವರು ಅಕ್ರಮವಾಗಿ ಕೊಳಾಯಿ ಸಂಪರ್ಕ ಪಡೆದುಕೊಂಡಿದ್ದಾರೆ. ಮೋಟಾರ್‌ ಅಳವಡಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರತಿಯೊಂದು ವಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸುತ್ತಿದ್ದು, ಯಾರಾದರೂ ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಂಡಿರುವುದು ಪತ್ತೆಯಾದರಲ್ಲಿ ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ನೀರುಗಂಟಿಗಳಿಗೆ ಸೂಚನೆ: ಕುಡಿಯುವ ನೀರು ಪೂರೈಕೆಗಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡು ತರುವಾಯ ಯಾರಿಗೂ ನೀರು ಪೂರೈಕೆ ವಿಚಾರದಲ್ಲಿ ತಾರತಮ್ಯ ಆಗಬಾರದು ಎಂದು ನೀರುಗಂಟಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಿಸಾರ್‌ ಪಾಳ್ಯದಲ್ಲಿ ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಂಡಿದ್ದರೆ ಅಥವಾ ಮೋಟಾರ್‌ ಅಳವಡಿಸಿದರೆ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಪೌರಾಯುಕ್ತರು ತಮಗೆ ಮಾಹಿತಿ ನೀಡಬೇಕೆಂದು ನಾಗರಿಕರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮನೆಯ ಕೊಳಚೆ ನೀರು ರಸ್ತೆಗೆ ಹರಿಸುತ್ತಿರುವುದನ್ನು ನೋಡಿ ಕಿಡಿಕಾರಿದ ಪೌರಾಯುಕ್ತರು, ನೀರು ಸರಾಗವಾಗಿ ಹರಿಯಲು ಪೈಪ್‌ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು. ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದರು. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಆಂಜಿನಪ್ಪ, ಸಿಬ್ಬಂದಿ ಅಪ್ಪಿ, ಕಾಂಗ್ರೆಸ್‌ ಮುಖಂಡ ಮಹೆಬೂಬ್‌ ಪಾಷ, ವಕೀಲ ನೌಷಾದ್‌ ಅಲಿ, ಬಾಬು, ಫ‌ಯಾಝ್ ಪಾಷ ಉಪಸ್ಥಿತರಿದ್ದರು.

ಶಾಸಕರ ಕಾಳಜಿಯಿಂದ ನಾಗರಿಕರಿಗೆ ಶುದ್ಧ ನೀರು ಪೂರೈಕೆ ಮಾಡಲು ನಗರದ ವಿವಿಧ ವಾರ್ಡ್‌ಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಯೋಜನೆ ಸಿದ್ಧಪಡಿಸಿದ್ದು, ಶೀಘ್ರವೇ ಅನುಷ್ಠಾನಕ್ಕೆ ತರಲಾಗುವುದು.
-ಜಿ.ಎನ್‌.ಚಲಪತಿ, ಪೌರಾಯುಕ್ತ

ಟಾಪ್ ನ್ಯೂಸ್

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

madras-high-court-warns-against-religious-intolerance-after-muslims-object-to-conduct-of-hindu-festival

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ, ತಿಮ್ಮನಾಯಕನಹಳ್ಳಿಯಲ್ಲಿ ಭಾರಿ ಮಳೆ :ಜನಜೀವನ ಅಸ್ತವ್ಯಸ್ತ

ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ, ತಿಮ್ಮನಾಯಕನಹಳ್ಳಿಯಲ್ಲಿ ಭಾರಿ ಮಳೆ :ಜನಜೀವನ ಅಸ್ತವ್ಯಸ್ತ

BPL ಚೀಟಿ ಹೊಂದಿದವರಿಗೆ ಮಾಸಿಕ 3 ಸಾವಿರ ರೂ. ಆರ್ಥಿಕ ನೆರವು ನೀಡಿ : ಸಂಸದ ಬಚ್ಚೇಗೌಡ ಆಗ್ರಹ

BPL ಚೀಟಿ ಹೊಂದಿದವರಿಗೆ ಮಾಸಿಕ 3 ಸಾವಿರ ರೂ. ಆರ್ಥಿಕ ನೆರವು ನೀಡಿ : ಸಂಸದ ಬಚ್ಚೇಗೌಡ ಆಗ್ರಹ

1205cmyp1_1205bg_2

ಕೊವ್ಯಾಕ್ಸಿನ್‌, ಕೋವಿಶೀಲ್ಡ್ ಎರಡೂ ಒಳ್ಳೆಯದೆ

Private Hospital Officer

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಅಧಿಕಾರಿಗಳ ಮೇಲ್ವಿಚಾರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳ ಸಮಯ ಬದಲಾವಣೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳ ಸಮಯ ಬದಲಾವಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

jhgfnhgf

ಡಿ ಆರ್ ಡಿ ಒ ನಿರ್ದೇಶಕರ ಕಾರ್ಯಾಲಯಕ್ಕೆ ಸುಧಾಕರ್ ಭೇಟಿ-ಪರಿಶೀಲನೆ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.