ಮಾವಿಗೆ ಧರ್ಮದ ಕರಿನೆರಳು!

Team Udayavani, Apr 10, 2022, 3:43 PM IST

ಮಾವಿಗೆ ಧರ್ಮದ ಕರಿನೆರಳು!

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಿಜಾಬ್‌, ಹಲಾಲ್‌ ಕಟ್‌, ಮಸೀದಿಯಲ್ಲಿ ಧ್ವನಿವರ್ಧಕದ ವಿವಾದದ ನಡುವೆ, ಇದೀಗ ಹಣ್ಣುಗಳ ರಾಜ ಮಾವು ಮಾರಾಟದ ಮೇಲೆ ಧರ್ಮದ ಪ್ರಭಾವ ಬೀರುವ ಲಕ್ಷಣ ಕಂಡುಬಂದಿದೆ. ಕರಾವಳಿ ಜಿಲ್ಲೆಯಲ್ಲಿ ಹಿಜಾಬ್‌ ವಿವಾದ ಪ್ರಾರಂಭವಾಗಿ ಇದೀಗ ಅನೇಕ ವಿಷಯ ಗಳ ಬಗ್ಗೆ ವಾದ- ಪ್ರತಿ ವಾದಗಳು ನಡೆಯುತ್ತಿದ್ದು, ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾ ಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಶಾಲಾ-ಕಾಲೇಜಿನಲ್ಲಿ ಹಿಜಾಬ್‌ ಧರಿಸುವ ವಿಚಾರದಲ್ಲಿ ಮೊದಲು ವಿವಾದ ಹುಟ್ಟಿ ಅದು ನ್ಯಾಯಾಯಲದ ಮೆಟ್ಟಲೇರಿ ತೀರ್ಪು ಬಂದ ಬಳಿಕ ವಿವಾದ ತಣ್ಣಗಾಗಿದ್ದ ವೇಳೆ, ಯುಗಾದಿ ಹಬ್ಬದಲ್ಲಿ ಕೆಲ ಹಿಂದೂಪರ ಸಂಘಟನೆ ಹಲಾಲ್‌ ಮಾಡಿದ ಮಾಂಸ ಖರೀದಿ ಮಾಡಬಾರದು. ಜಟ್ಕಾ ಕಟ್‌ ಮಾಂಸವನ್ನು ಖರೀದಿಸಬೇಕೆಂದು ಕರಪತ್ರಗಳ ಮೂಲಕ ಪ್ರಚಾರ ನಡೆಸಿದ್ದರು. ಅದು ಕೂಡ ಕೆಲವೊಂದು ಪ್ರಭಾವ ಬೀರಿತ್ತು. ಬಳಿಕ ಮಸೀದಿ ಗಳಲ್ಲಿ ಧ್ವನಿ ವರ್ಧಕಗಳಿಂದ ಶಬ್ದ ಮಾಲಿನ್ಯವಾಗುತ್ತದೆ. ಅದರ ವಿರುದ್ಧ ದೇವಾಲಯಗಳಲ್ಲಿ ಹನುಮಾನ ಚಾಲೀಸಾ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಮಾವು ಹಿಂದೂಗಳ ಮಂಡಿಯಲ್ಲಿ ಖರೀದಿ ಮಾಡಬೇಕೆಂದು ವಿವಾದ ಹುಟ್ಟುಕೊಂಡಿದ್ದು, ಇದರಿಂದ ಮಾವು ಬೆಳೆಯುವ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.

12 ಸಾವಿರ ಹೆಕ್ಟೇರ್‌ ಮಾವು ಬೆಳೆ: ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಚಿಂತಾಮಣಿ ತಾಲೂಕಿನಲ್ಲಿ 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಎರಡೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಇನ್ನುಳಿದಂತೆ ಬೇರೆ ತಾಲೂಕುಗಳಲ್ಲಿ ಮಾವು ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 1.15 ಲಕ್ಷ ಟನ್‌ ಮಾವು ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಸುರಿದ ಮಳೆ, ಬಿಸಲಿನ ಪ್ರಭಾವದಿಂದ ಹೂವು ಉದುರಿದ್ದು, ಇದರಿಂದ 65ರಿಂದ 70 ಸಾವಿರ ಟನ್‌ ಮಾವು ಬರುವ ಅಂದಾಜಿಸಲಾಗಿದೆ.

ಕೋವಿಡ್‌ನಿಂದ ಸಂಕಷ್ಟದಲ್ಲಿ ಬೆಳೆಗಾರರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಭಾವದಿಂದ ಕಳೆದ ಎರಡು ವರ್ಷದಲ್ಲಿ ಮಾವು ಬೆಳೆಗಾರರು ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಮಾವು ಮಾರಾಟ ಮಾಡಿ ಸ್ವಲ್ಪ ಹಣ ಗಳಿಸಬಹುದು ಎಂದು ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಹಿಂದೂಗಳ ಮಂಡಿಗಳಲ್ಲಿ ಮಾವು ಖರೀದಿಸಬೇಕೆಂಬ ವಿಚಾರದಿಂದ ಮಾವು ಮಾರಾಟ ಮತ್ತು ಖರೀದಿ ಮೇಲೆ ಪ್ರಭಾವ ಬೀರುವ ಆತಂಕ ಮನೆ ಮಾಡಿದೆ.

 ತೋಟಗಳ ಗುತ್ತಿಗೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ರೈತರು ಶೇ. 90ರಷ್ಟು ಸಂಪೂರ್ಣ ತೋಟಗಳನ್ನು ಗುತ್ತಿಗೆ ನೀಡಿದ್ದಾರೆ. ಇನ್ನುಳಿದ ಶೆ.10ರಷ್ಟು ಮಾತ್ರ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ತೋಟವನ್ನು ನಿರ್ವಹಣೆ ಮಾಡಿ ಉತ್ಪಾದನೆಯಾಗುವ ಮಾವು ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ವ್ಯಾಪಾರ ವಹಿವಾಟು ನಡೆಸಬೇಕೆಂದು ಅಭಿಯಾನ ನಡೆಸುತ್ತಿರುವುದರಿಂದ ಅದು ಜಿಲ್ಲೆಯ ಮಾವು ಮಾರಾಟದ ಮೇಲೆ ಬೀಳುವುದಿಲ್ಲ ಎಂಬ ಲೆಕ್ಕಾಚಾರ ನಡೆದಿದೆ.

ಮಾವು ಬೆಳೆಗಾರರಿಗೆ ತೊಂದರೆ ಆಗಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಮಾವು ಬಹುತೇಕ ಕೋಲಾರ ಜಿಲ್ಲೆಯ ಶ್ರೀನಿ ವಾಸಪುರದಲ್ಲಿ ಮಾರಾಟವಾಗುತ್ತದೆ. ಈಗಾಗಲೇ ರೈತರಿಂದ ಮಾವು ತೋಟಗಳನ್ನು ಕೆಲವರು ಗುತ್ತಿಗೆ ಪಡೆದಿದ್ದರಿಂದ ಸಹಜವಾಗಿ ಮಾವು ಬೆಳೆಗಾರರಗೆ ತೊಂದರೆ ಆಗುವುದಿಲ್ಲ. ಕನಿಷ್ಠ ಒಂದು ವರ್ಷದಿಂದ ಐದು ವರ್ಷದವರೆಗೆ ತೋಟ ಗುತ್ತಿಗೆ ನೀಡಿದ್ದರಿಂದ ವ್ಯಾಪಾರಸ್ಥರೇ ತೋಟ ನಿರ್ವಹಣೆ ಮಾಡಿ ಇಂತಿಷ್ಟು ದರವನ್ನು ನಿಗದಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದಾರೆ. ಮತ್ತೂಂದೆಡೆ ಹಣ್ಣುಗಳ ರಾಜ ಮಾವು ಮಾರಾಟದ ಮೇಲೆ ಧರ್ಮದ ಕರಿನೆರಳು ಬೀಳುತ್ತಿರುವುದಕ್ಕೆ ಸcತಃ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ವ್ಯಾಪಕ ಮಳೆ, ಬಿಸಲಿನ ಪ್ರಭಾವದಿಂದ ಹೂವು ಉದರಿದ್ದು, ಹೀಗಾಗಿ 70 ಸಾವಿರ ಟನ್‌ ಮಾವು ಬರುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ರೈತರು ಮತ್ತು ವ್ಯಾಪಾರಿಗಳ ಮಧ್ಯೆ ನಂಬಿಕೆ ಆಧಾರದ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ. ಶೇ.90ರಷ್ಟು ತೋಟವನ್ನು ರೈತರು ಗುತ್ತಿಗೆ ನೀಡಿದ್ದಾರೆ. –ರಮೇಶ್‌, ಉಪನಿರ್ದೇಶಕ ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ

ಮಧ್ಯೆ ವಿಷ ಬೀಜ ಬಿತ್ತನೆ ಮಾಡುವ ಕೆಲಸ ಯಾರೂ ಮಾಡಬಾರದು. ಅದಕ್ಕೆ ನಮ್ಮ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಕೆಲವು ಮತೀಯ ಶಕ್ತಿಗಳು ಮಾಡುವ ಕುತಂತ್ರದಿಂದ ರೈತರಿಗೆ ತೊಂದರೆ ಆಗುತ್ತದೆ. ಸಿಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾವು ಮಾರಾಟದ ಮೇಲೆ ಯಾವುದೇ ಧಾರ್ಮಿಕ ಕರಿನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು.ಭಕ್ತರಹಳ್ಳಿ ಭೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಹಸಿರುಸೇನೆ.

ರಾಜ್ಯದಲ್ಲಿ ಮಾವು ಬೆಳೆಗಾರರು ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಮಗೆ ಯಾವುದು ಭೇದ ಭಾವ ಇಲ್ಲ. ಯಾರು ದರ ಜಾಸ್ತಿ ಕೊಡ್ತಾರೆ ಅವರಿಗೆ ಮಾವು ಮಾರಾಟ ಮಾಡುತ್ತೇವೆ. ನಂಬಿಕೆಯಿಂದ ನಡೆಯುತ್ತಿದೆ. ರೈತರು, ವ್ಯಾಪಾರಿಗಳು ಪರಸ್ಪರ ವಿಶ್ವಾ ಸ ದಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಧಕ್ಕೆ ಬರುವ ಕೆಲಸ ಯಾರೂ ಮಾಡಬಾರದು.ಕೆ.ವಿ.ನಾಗರಾಜ್‌, ರಾಜ್ಯ ಮಾವು ಅಭಿವೃದ್ಧಿ ನಿಗಮ ಅಧ್ಯಕ್ಷ.

-ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.