ಅಗ್ರಸ್ಥಾನ ಕಾಯ್ದುಕೊಳ್ಳಲು ಸ್ಫೂರ್ತಿ-2 ಕ್ರಿಯಾ ಯೋಜನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಕಾಯ್ದರಿಸಲು ಕ್ರಮ, ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ

Team Udayavani, Feb 17, 2021, 3:00 PM IST

ಅಗ್ರಸ್ಥಾನ ಕಾಯ್ದುಕೊಳ್ಳಲು ಸ್ಫೂರ್ತಿ-2 ಕ್ರಿಯಾ ಯೋಜನೆ

ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ಸಾಲಿನಲ್ಲಿ ಅಗ್ರಸ್ಥಾನಪಡೆದ ಬಳಿಕ ಸಂತಸಗೊಂಡಿರುವ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ2020-21 ನೇ ಸಾಲಿನಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಲ್ಲಿ ಜಿಲ್ಲೆ ಮತ್ತೂಮ್ಮೆ ಅಗ್ರಸ್ಥಾನ ಹೊಂದಲು ಸ್ಫೂರ್ತಿ-2 ಹೆಸರಿನಡಿ ಒಂದು ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಕ್ರಿಯಾ ಯೋಜನೆ: ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ, ಚಿಂತಾಮಣಿ ತಾಲೂಕಿನಲ್ಲಿ 111 ಸರ್ಕಾರಿ, 45 ಅನುದಾನಿತ, 119 ಅನುದಾನರಹಿತ, ಸಮಾಜ ಕಲ್ಯಾಣಇಲಾಖೆಯ ಅಧೀನದಲ್ಲಿರುವ 13, ಕೇಂದ್ರಿಯ 2ಶಾಲೆಗಳು ಸಹಿತ 290 ಪ್ರೌಢ ಶಾಲೆಗಳಿದ್ದು 8563ಬಾಲಕರು, 7847 ಬಾಲಕಿಯರು ಸಹಿತ 16,410ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದಾರೆ. ಅದಕ್ಕೆ ಪೂರಕವಾಗಿ ವಿಷಯಾ ಧಾರಿತ ತಜ್ಞರ ಸಲಹೆ ಪಡೆದು ವಿದ್ಯಾರ್ಥಿಗಳಶೈಕ್ಷಣಿಕ ಪ್ರಗತಿಗಾಗಿ ಸ್ಫೂರ್ತಿ-2 ಎಂಬ ಹೆಸರಿನಡಿ ಒಂದು ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಏನಿದು ಸ್ಫೂರ್ತಿ-2 ಕ್ರಿಯಾ ಯೋಜನೆ?: ಪ್ರಸಕ್ತ ಸಾಲಿನಲ್ಲಿ ಸಹ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಮುಂದುವರಿಸಬೇಕು. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಸಮರ್ಥವಾಗಿ ಎದುರಿಸಲು ಮತ್ತು ಗೊಂದಲ ನಿವಾರಿಸಲು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕವಾಗಿ ಕೋಚಿಂಗ್‌ ನೀಡಿ ಅಗತ್ಯ ಮಾರ್ಗದರ್ಶನ ಮಾಡಲು ಒಂದು ರೀತಿಯಲ್ಲಿ ಟೈಮ್‌ ಟೇಬಲ್‌ ಮಾದರಿಯಲ್ಲಿಕ್ರಿಯಾ ಯೋಜನೆ ತಯಾರಿಸಿ ಎಲ್ಲಾ ಶಾಲಾ ಮುಖ್ಯಸ್ಥರಿಗೆ ನೀಡಲಾಗಿದೆ.

ಫ‌ಲಿತಾಂಶದ ಮಾಹಿತಿ: ದತ್ತು ತೆಗೆದುಕೊಂಡಿರುವ ಅಧಿಕಾರಿಗಳಿಗೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಳೆದ ಸಾಲಿನಲ್ಲಿ ಶಾಲೆ ಪಡೆದುಕೊಂಡಿರುವ ಫಲಿತಾಂಶದ ಮಾಹಿತಿ ಸಹನೀಡಲಾಗಿದ್ದು, ಒಟ್ಟಾರೆ ಫಲಿತಾಂಶ ಹೆಚ್ಚಿಸಲು ಮತ್ತುಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯಉಜ್ವಲ ಗೊಳಿಸಲು ಜವಾಬ್ದಾರಿ ನೀಡಲಾಗಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಉಸ್ತುವಾರಿ: ಜಿಲ್ಲೆಯ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಶೈಕ್ಷ ಣಿಕ ಪ್ರಗತಿ ಪರಿಶೀಲಿಸಲು ಜವಾಬ್ದಾರಿ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೀಡುತ್ತಿರುವ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮಾಡೆಲ್‌ ಪ್ರಶ್ನೆ ಪತ್ರಿಕೆಗಳನ್ನು ಸಹ ಸಿದ್ಧಪಡಿಸಿ ವಿತರಿಸಲಾಗಿದೆ. ಶಿಕ್ಷಣ ತಜ್ಞರಮೂಲಕ ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೇಗಿದೆಯೆಂಬುದು ಸಹ ಮೌಲ್ಯ ಮಾಪನ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿ ಮಾಹೆಯಲ್ಲಿ ಮಾಡಿರುವ ಸಾಧನೆಗಳನ್ನುಪರಾಮರ್ಶೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣಇಲಾ ಖೆಯ ಉಪನಿರ್ದೇಶಕ ನಾಗೇಶ್‌ ಅವರುಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ ನೀಡುವ ಜೊತೆಗೆ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹೆಚ್ಚಿಸಲು ವಿಶೇಷ ಕಾಳಜಿ ವಹಿಸಿದ್ದು, ಅದಕ್ಕೆ ಪೂರಕವಾಗಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಂದಿಸಿ ಸಾಥ್‌ ನೀಡುತ್ತಿದ್ದಾರೆ.

ಶಾಲೆಗಳಿಗೆ ಭೇಟಿ, ಫಾರ್ಮೆಟ್‌ :

ಪ್ರಸಕ್ತ ಸಾಲಿನಲ್ಲಿ ಪ್ರತಿ ತಿಂಗಳು ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕು, ಪೋಷಕರ ಸಭೆ-ಮನೆ ಮನೆ ಭೇಟಿ ಅಭಿಯಾನ ಸಹಿತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಟೈಮ್‌ ಟೇಬಲ್‌ ನೀಡಲಾಗಿದೆ. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತ್ಯೇಕ ಪ್ರೊಫೈಲ್‌ ಸಿದ್ಧಪಡಿಸಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ಪ್ರಗತಿ ಸಾಧಿಸಲು ದತ್ತು ಪಡೆದುಕೊಂಡಿರುವಅಧಿಕಾರಿಗಳು ಶಾಲೆಗಳಿಗೆ ಭೇಟಿ ಯಾವ ವಿಷಯಗಳನ್ನು ಪರಿಶೀಲಿಸಬೇಕೆಂದು ಫಾರ್ಮೆಟ್‌ ಸಹ ಸಿದ್ಧಪಡಿಸಿ ನೀಡಲಾಗಿದೆ.

ತಲಾ ಮೂರು ಪ್ರೌಢಶಾಲೆ ದತ್ತು :

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಡಯಟ್‌ ಉಪನಿರ್ದೇಶಕರು ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಡಯಟ್‌ ಉಪನ್ಯಾಸಕರು, ವಿಷಯ ಪರಿವೀಕ್ಷಕರಿಗೆ ತಲಾ ಮೂರು ಪ್ರೌಢಶಾಲೆಗಳನ್ನು ದತ್ತು ನೀಡಿ ಪ್ರಸಕ್ತ ಸಾಲಿನಲ್ಲಿ ಫಲಿತಾಂಶವನ್ನು ಹೆಚ್ಚಿಸುವ ಹೊಣೆಗಾರಿಕೆ ನೀಡಲಾಗಿದೆ.

ಪರೀಕ್ಷೆ ನಿರ್ಭೀತಿಯಿಂದ ಎದುರಿಸಲು ಮಾರ್ಗದರ್ಶನ :

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಸಕ್ತ ಸಾಲಿನಲ್ಲಿ ಅಗ್ರಸ್ಥಾನವನ್ನು ಕಾಯ್ದೆರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಶೈಕ್ಷಣಿಕ ಪ್ರಗತಿಗಾಗಿ ಸ್ಫೂರ್ತಿ-2 ಎಂಬ ಹೆಸರಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್‌.ಜಿ.ನಾಗೇಶ್‌ ತಿಳಿಸಿದ್ದಾರೆ. “”ಉದಯವಾಣಿ”ಗೆಪ್ರತಿಕ್ರಿಯಿಸಿದ ಅವರು, ಚಿಕ್ಕಬಳ್ಳಾಪುರ ಸಾಯಿ ಟ್ರಸ್ಟ್‌ನ ಮೂಲಕ 20 ಸಾವಿರನೋಟಬುಕ್‌ಗಳ ಸಹಾಯ ಪಡೆದು ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಯಪ್ರತಿ ವಿದ್ಯಾರ್ಥಿಗಳಿಗೆ ತಲಾ ಎರಡು ನೋಟ್‌ಬುಕ್‌ ನೀಡಲು ನಿರ್ಧರಿಸಲಾಗಿದೆ.ಎಸಿಸಿ ಸೀಮೆಂಟ್‌ ಕಾರ್ಖಾನೆಯಿಂದ 6 ವಿಷಯಗಳ ಕುರಿತು 5 ಸಾವಿರವಿದ್ಯಾರ್ಥಿಗಳಿಗೆ ಸ್ಟಡಿ ಪ್ಯಾಕೇಜ್‌ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರ್ಭೀತಿಯಿಂದ ಎದುರಿಸಲು ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದ್ದೇವೆ.

 

ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ಬಿಲ್ಲಿಂಗ್ಸ್‌ ಬದಲು ಬೆನ್‌ ಫೋಕ್ಸ್‌

ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ಬಿಲ್ಲಿಂಗ್ಸ್‌ ಬದಲು ಬೆನ್‌ ಫೋಕ್ಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕವಿಯುತ್ತಿದೆ ಪರಿಸರ ನಾಶದ ಕಾರ್ಮೋಡಗಳು

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ

ಕಾಶ್ಮೀರಿ ಪಂಡಿತರ ಹತ್ಯೆ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹರ್‌ ಘರ್‌ ತಿರಂಗಾ ರಾಜಕೀಯಕ್ಕೆ ಬಳಕೆ ಸಲ್ಲದು

ಹರ್‌ ಘರ್‌ ತಿರಂಗಾ ರಾಜಕೀಯಕ್ಕೆ ಬಳಕೆ ಸಲ್ಲದು

ಪ್ರಧಾನಿ ಸಂದೇಶದಂತೆ ದೇಶ ಸೇವೆ ಸಂಕಲ್ಪ: ಬಿ.ಎಲ್‌. ಸಂತೋಷ್‌

ಪ್ರಧಾನಿ ಸಂದೇಶದಂತೆ ದೇಶ ಸೇವೆ ಸಂಕಲ್ಪ: ಬಿ.ಎಲ್‌. ಸಂತೋಷ್‌

tdy-11

ವಿದ್ಯಾರ್ಥಿಗಳ ಸಂತೆಯಲ್ಲಿ  ವ್ಯಾಪಾರ ಬಿರುಸು

ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಿ

ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸಿ

tdy-15

ತುಂಬಿದ ಗಂಜಿಗುಂಟೆ ರೆಡ್ಡಿ ಕೆರೆ ಪ್ರವಾಸಿಗರ ಆಕರ್ಷಣೆ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

ಹೊಸ ಸೇರ್ಪಡೆ

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ಬಿಲ್ಲಿಂಗ್ಸ್‌ ಬದಲು ಬೆನ್‌ ಫೋಕ್ಸ್‌

ಇಂದಿನಿಂದ ಲಾರ್ಡ್ಸ್‌ ಟೆಸ್ಟ್‌: ಬಿಲ್ಲಿಂಗ್ಸ್‌ ಬದಲು ಬೆನ್‌ ಫೋಕ್ಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.