ಬೋನಿನಲ್ಲಿ ಸೆರೆ: 25 ಕೋತಿಗಳ ಸಾವು
Team Udayavani, Feb 9, 2021, 3:17 PM IST
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಕೋತಿಗಳ ಕಾಟ ತಾಳಲಾರದೆ ಭಾನುವಾರ ಬೆಳಗ್ಗೆ 10 ಗಂಟೆಯಿಂದ 30 ಕ್ಕೂ ಹೆಚ್ಚು ಕೋತಿಗಳನ್ನು ಹಿಡಿದು ಒಂದೇ ಬೋನಿನಲ್ಲಿ ಇಟ್ಟಿದ್ದು, ರಾತ್ರಿ 9 ಗಂಟೆ ತನಕ ಬೋನಿನಲ್ಲಿಯೇ ಇದ್ದರಿಂದ ಕೆಲ ಕೋತಿಗಳು ಅಸ್ವಸ್ಥ, ಮೂರ್ಛೆ ಬಂದಿದ್ದು, 25 ಕೋತಿಗಳು ಮೃತಪಟ್ಟಿರುವ ಅಮಾನವೀಯ ಘಟನೆ ನಡೆದಿದೆ.
ಜರಬಂಡಹಳ್ಳಿ ತಾಪಂ ಸದಸ್ಯರಾದ ಮೋಹನ್ ಅವರ ಟ್ರಾÂಕ್ಟರ್‌ನಲ್ಲಿ ಗೌರಿ ಬಿದನೂರು ಪಟ್ಟಣದ ಕಲ್ಲೂಡಿ ಬಳಿ ಬಿಡಲು ಬಂದಿದ್ದ ಸುದ್ದಿ ತಿಳಿದು ಹಿಂದೂ ಜಾಗರಣೆ ವೇದಿಕೆ ಯುವಕರು ಟ್ರ್ಯಾಕ್ಟರ್ ತಡೆದು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 25 ಕೋತಿಗಳು ಸತ್ತಿದ್ದು, ನಾಲ್ಕು ಕೋತಿಗಳು ಬದುಕಿದ್ದರಿಂದ ಅವುಗಳನ್ನು ಉತ್ತರ ಪಿನಾಕಿನಿ ನದಿಗೆ ಬಿಡಲಾಗಿದೆ. ಟ್ರಾÂಕ್ಟರ್ ಹಾಗೂ ಚಾಲಕರನ್ನು ಗೌರಿಬಿದನೂರು ಪುರ ಪೊಲೀಸರಿಗೆ ಒಪ್ಪಿಸಿದ್ದು, ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು ಇಲಿಯಾಸ್ ಬಾಷಾ(49) ಎಂಬಾತನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ :ಬಿಜೆಪಿ ಬೆಂಬಲಿತರ ಬಂದೋಬಸ್ತ್ ಗೆ ಬೌನ್ಸರ್
ತಲೆಮರೆಸಿಕೊಂಡಿರುವ ಕಷ್ಣಪ್ಪ,(35) ಶಶಿಕುಮಾರ್ (25) ಬಾಲಪ್ಪ(25) ಇವರು ಗಳ ಮೇಲೆ ಪ್ರಕರಣ ದಾಖಲಾಗಿದೆ. ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆ ಸಿದ್ದು ಎಫ್ಎಸ್‌ಲ್ ವರದಿ ಬಂದ ನಂತರ ಆರೋಪಿಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣಾಧಿಕಾರಿಗಳಾದ ಜುನಾತ್ ತಿಳಿಸಿದ್ದಾರೆ.