ನೆಮ್ಮದಿಯ ಜೀವನಕ್ಕೆ ನಾಂದಿ ಬಾಬಾರ ಸಂದೇಶ

Team Udayavani, Jan 20, 2020, 3:00 AM IST

ಚಿಕ್ಕಬಳ್ಳಾಪುರ: ನೆಮ್ಮದಿಯ ಬಾಳಿಗೆ ನಾಂದಿಯಾಗುವ ಸಂದೇಶ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರದ್ದು. ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದು ರಾಜ್ಯ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಡಾ.ಶಂಕರ ಬಿದರಿ ಹೇಳಿದರು.

ನಗರದ ಹೊರ ವಲಯದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಭಾನುವಾರ ಶ್ರೀ ಸತ್ಯಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ 45ನೇ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿ ಅವರು ಮಾತನಾಡಿದರು.

ಮಾನವೀಯ ಸಂದೇಶ: ಪ್ರೀತಿ, ಸ್ನೇಹ, ಸೌಹಾರ್ದ ಸತ್ಯಸಾಯಿ ಬಾಬಾರವರ ಸಂದೇಶ. ಸದಾ ಮಾನವ ಕಲ್ಯಾಣದ ಕುರಿತು ಚಿಂತಿಸಿದ ಬಾಬಾರವರು ಜಗತ್ತಿನ ಆಸ್ತಿ. ಅವರ ಪ್ರೇಮ ಕಾರುಣ್ಯದ ಪ್ರತೀಕಗಳೇ ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ಜಗತ್ತು ಕ್ಷೊàಭೆಗೆ ಒಳಗಾಗಿದ್ದಾಗ ಬಾಬಾರವರು ಮಾನವೀಯ ಸಂದೇಶ ಸಾರಿ ಶಾಂತಿ ನೆಮ್ಮದಿಗೆ ಬುನಾದಿ ಹಾಕಿದ್ದಾರೆ. ಅದರ ಪ್ರತಿಫ‌ಲ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಕಾರ್ಯಚಟುವಟಿಕೆ, ಶಿಕ್ಷಕರ ನಡೆ ನುಡಿಯಲ್ಲಿ ಎದ್ದು ತೋರುತ್ತಿದೆ ಎಂದರು.

ಸೃಜನಶೀಲತೆ: ನೆಮ್ಮದಿಯ ಬದುಕಿಗೆ ಬೇಕಾದ ಸಮಗ್ರ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಸತ್ಯಸಾಯಿ ಶಿಕ್ಷಣ ವಿಭಾಗದಲ್ಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಮನುಷ್ಯನಿಗೆ ಸಮತೋಲನವಾಗಿರಬೇಕು. ಹಾಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬಿ ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದರು.

ಸರ್ವರಿಗೂ ಸಮಪಾಲು: ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಮತಾವಾದಕ್ಕೆ ಜೀವಂತ ಉದಾಹರಣೆ ಸತ್ಯಸಾಯಿ ಸಂಸ್ಥೆ. ಬಡವರಲ್ಲಿ ಬಡವರನ್ನು ಗುರುತಿಸಿ ಉದ್ಧರಿಸುವ ಮಹತ್ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು. ಇದು ಸೇವೆಯ ಕೈಂಕರ್ಯದಲ್ಲಿ ತೊಡಗಿದವರಿಗೆಲ್ಲ ಆದರ್ಶ, ಎಲ್ಲರೂ ಸಮಾನ ಸುಖೀಗಳಾಗಬೇಕು ಎಂದರು.

ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ಸಾಂಸ್ಕೃತಿಕ ಪರಂಪರೆಯಿಂದ ವಿಶ್ವಮಾನವರಾಗಬಹುದು. ಆಸೆಯೇ ದುಃಖಕ್ಕೆ ಮೂಲವಾದರೆ ಎಲ್ಲರನ್ನೂ ಪ್ರೇಮಿಸಿ ಸರ್ವರ ಒಳಿತಿಗಾಗಿ ಸೇವೆ ಸಲ್ಲಿಸುವುದೇ ಲೋಕ ಕಲ್ಯಾಣದ ಸೆಲೆ. ಅಲ್ಲಿಯೇ ಎಲ್ಲರ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಎಂದರು. ನಾಗರಿಕ ಸಮಾಜ ನೆಮ್ಮದಿ ಕಾಣಬೇಕಾದರೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣ ದೊರೆತರೆ ಎಲ್ಲರೂ ವಿಶ್ವ ಮಾನವರಾಗಿ ಬೆಳೆಯುತ್ತಾರೆ ಎಂದರು.

ವೇದಿಕೆಯಲ್ಲಿ ಅಮೆರಿಕಾದ ಭಕ್ತರು, ಯುನಿಸೆಫ್ ಸಂಸ್ಥೆಯ ಪ್ರತಿನಿಧಿಯೂ ಆದ ಮಿಸ್‌ಡಾನಾಗುಡ್‌ಮನ್‌ ಡಾ.ಕೆ.ಪಿ.ಸಾಯಿಲೀಲಾ, ಗುಲ್ಬರ್ಗಾ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್‌ ನರಸಿಂಹ ಮೂರ್ತಿ, ಕರಾವಳಿ ಕರ್ನಾಟಕದ ಶಿಕ್ಷಣ ತಜ್ಞ, ಡಾ.ಕೆ.ಪ್ರಭಾಕರ ಭಟ್‌ ಉಪಸ್ಥಿತರಿದ್ದರು.

ದೇಶದ ಪ್ರತಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ: ಸಮಾಂರಂಭದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಮಧುಸೂದನ ಸಾಯಿಯವರು ದಿವ್ಯ ಸಂದೇಶ ನೀಡುತ್ತಾ, ಸಂಸ್ಥೆ, ಸಹಕಾರ ಮತ್ತು ಸರ್ಕಾರ ಒಂದಾಗಿ ಕೈ ಜೋಡಿಸಿದಾಗ ಮಹತ್ಕಾರ್ಯ ಸಾಧಿತವಾಗುತ್ತದೆ. ನಮ್ಮೊಳಗೆ ಸದಾ ಸಮನ್ವಯವಿದ್ದಾಗ ಯಾವುದೇ ಭಯವಿಲ್ಲ ಎಂದರು. ಮುಂದಿನ ದಿನಗಳಲ್ಲಿ ಸದ್ಭಕ್ತರ ನೆರವಿನಲ್ಲಿ ಭಾರತದ ಪ್ರತಿ ಜಿಲ್ಲೆಯಲ್ಲಿ ಸತ್ಯಸಾಯಿ ಸಂಸ್ಥೆಗಳು ತಲೆಯೆತ್ತಿ ಜಗತ್‌ ಕಲ್ಯಾಣಕ್ಕೆ ನೆರವು ನೀಡುವುದು. ಆ ದಿನ ಬಹುಬೇಗನೆ ಬರುವುದು ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗೌರಿಬಿದನೂರು: ನಗರದ ಬೆಂಗಳೂರು-ಹಿಂದೂಪುರ ರಸ್ತೆ ಅಭಿವೃದ್ಧಿಯಿಂದ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ-ಮಧುಗಿರಿ ರಸ್ತೆ ಅಭಿವೃದ್ಧಿಯಾಗಲಿದ್ದು, ಇನ್ನೆರೆಡು...

  • ಗೌರಿಬಿದನೂರು: ಬ್ರಾಹ್ಮಣ ಜನಾಂಗದ ಆರ್ಥಿಕ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಾಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ರಾಜ್ಯದ್ಯಂತ ಪ್ರವಾಸ...

  • ಚಿಕ್ಕಬಳ್ಳಾಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ತಾಲೂಕಿನ ನಂದಿ ಪ್ರಾಥಮಿಕ ಆರೋಗ್ಯ...

  • ಬಾಗೇಪಲ್ಲಿ: ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಮಾ.2ರಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅರಬೆತ್ತಲೆ...

  • ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಮಾ.4 ರಿಂದ 23 ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ 22 ಪರೀಕ್ಷಾ  ಕೇಂದ್ರಗಳ 100 ಮೀಟರ್‌ವರೆಗೆ...

ಹೊಸ ಸೇರ್ಪಡೆ

  • ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ...

  • ಹಿಂದೆಲ್ಲಾ ಈಡೀ ಊರಿಗೆ ಒಂದೇ ಒಂದು ಎಸ್‌.ಟಿ.ಡಿ. ಬೂತ್‌ ಇರುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಆಗ, ಯಾರ ಬಳಿಯೂ ಮೊಬೈಲ್‌ ಇರುತ್ತಿರಲಿಲ್ಲವಾದ್ದರಿಂದ ಊರವರು...

  • ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ? - ಮಂಜುನಾಥ ಪಟೇಲ್‌,...

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...