ಭಗತ್‌ಸಿಂಗ್‌ ನಗರದ ನಿದೆಗೆಡಿಸಿದ್ದ ಕೊಳಚೆ ನೀರು

Team Udayavani, Dec 13, 2019, 12:52 PM IST

cb-tdy-1

ಚಿಕ್ಕಬಳ್ಳಾಪುರ: ಬೆಳಗ್ಗೆ ನಿದ್ದೆಯಿಂದ ಎದ್ದರೆ ಮನೆ ಮುಂಭಾಗ ಕೊಳಚೆ ನೀರನ್ನು ನೋಡಬೇಕು. ರಾತ್ರಿಯಾದರೆ ಮಲಗಲು ಸೊಳ್ಳೆಗಳ ಕಾಟ..ಕೊಳಚೆನೀರಿನಲ್ಲಿ ಹೋಗುವಾಗ ಬಹಳಷ್ಟು ವಾಹನ ಸವಾರರು ಬಿದ್ದು ಎದ್ದಿದ್ದಾರೆ. ಒಮ್ಮೊಮ್ಮೆ ಮನೆಗಳಿಂದ ಹೊರ ಬರಲಾಗದಂತಹ ದುರ್ವಾಸನೆ ಆವರಿಸುವುದು ಇಲ್ಲಿ ಮಾಮೂಲಿ. ಇದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ವಸತಿ ಗೃಹಕ್ಕೆ ಕೂಗಳತೆ ದೂರದ ಭಗತ್‌ಸಿಂಗ್‌ ನಗರದ ನಿವಾಸಿಗಳ ನಿತ್ಯದ ಗೋಳು.

ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಗ್ಯಾರೇಜ್‌ಗೆ ಸಮೀಪದಲ್ಲಿರುವ ಭಗತ್‌ಸಿಂಗ್‌ ನಗರ ಮೊದಲೇ ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಆದರೆ, ಒಳಚರಂಡಿ ಅವ್ಯವಸ್ಥೆ ನಗರದ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಒಳಚರಂಡಿ ಈಗಜಿಲ್ಲಾ ಕೇಂದ್ರ ಬೆಳೆದಂತೆ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದು, ಮ್ಯಾನ್‌ಹೋಲ್‌ಗಳ ಕಳಪೆ ಕಾಮಗಾರಿಯಿಂದ ಒಂದಡೆ ಕೊಳಚೆ ನೀರು ಉಕ್ಕಿ ರಸ್ತೆಗಳಿಗೆ ಹರಿದರೆ ಮತ್ತೂಂದಡೆ ಕೊಳಚೆ ನೀರು ರಸ್ತೆಗಳಲ್ಲಿ ಕೆರೆಯಂತೆ ಜಲಾವೃತಗೊಂಡು ವಾಹನ ಸವಾರರ ಹಾಗೂ ಪಾದಚಾರಿಗಳ ಪ್ರಾಣ ಹಿಂಡುತ್ತಿದೆ.

ಸಮಸ್ಯೆ ಸೃಷ್ಟಿ: ಭಗತ್‌ಸಿಂಗ್‌ ನಗರದ ಮುಖ್ಯ ರಸ್ತೆಯಲ್ಲಿ ಪ್ರಶಾಂತ ನಗರಕ್ಕೆ ಹೋಗುವ ರಸ್ತೆ ಆರಂಭದಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ ದುಸ್ಥಿತಿಗೆ ತಲುಪಿ ತಿಂಗಳುಗಳೇ ಉರುಳಿದರೂ ಸ್ಥಳೀಯ ನಗರಸಭೆ ಅಪ ರೂಪಕ್ಕೆ ಒಮ್ಮೆ ಬಂದು ರಿಪೇರಿ ಮಾಡಿ ಕೈತೊಳೆದುಕೊಳ್ಳುತ್ತಿದೆ. ಹೀಗಾಗಿ ಒಳಚರಂಡಿ ಕೊಳಚೆ ನೀರು ಭಗತ್‌ಸಿಂಗ್‌ ನಗರ ನಿವಾಸಿಗಳ ನಿದ್ದೆಗೆಡಿಸುತ್ತಿದೆ.

ಸೊಳ್ಳೆಗಳ ಕಾಟವಿದೆ : ಒಳಚರಂಡಿಯಿಂದ ಹೊರ ಬರುವ ನೀರು ನೇರವಾಗಿ ಚರಂಡಿಗೆ ಹೋಗುತ್ತಿರುವುದರಿಂದ ಸೊಳ್ಳೆ ಗಳ ಕಾಟ ವಿಪರೀತವಾಗಿದೆ. ಇಲ್ಲಿ ಜನ ರಾತ್ರಿಯಾದರೆ ನೆಮ್ಮದಿಯಿಂದ ನಿದ್ದೆ ಮಾಡದ ಸ್ಥಿತಿ ಇದೆ. ಈ ರಸ್ತೆಯಿಂದ ಪ್ರಶಾಂತ ನಗರ, ಸದಾಶಿವ ನಗರಕ್ಕೆ ತೆರಳಬೇಕು. ಜೊತೆಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಬೇರೆ ಇದೆ. ಸರ್ಕಾರಿ ಪ್ರೌಢ ಶಾಲೆ ಇದರ ಮುಂದಿದೆ. ಇಲ್ಲಿಂದಲೇ ಮುಸ್ಟೂರು, ಕೇತನಹಳ್ಳಿ, ಎಸ್‌.ಗೊಲ್ಲಹಳ್ಳಿ, ಅವಲಗುರ್ಕಿಗೆ ತೆರಳಬೇಕು. ಆದರೆ, ಒಳಚರಂಡಿ ಅವ್ಯವಸ್ಥೆಯಿಂದ ಕೂಡಿರುವ ಪರಿಣಾಮ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಐಪಿಎಲ್‌ ಹರಾಜಿಗೆ 1,214 ಆಟಗಾರರು

ಐಪಿಎಲ್‌ ಹರಾಜಿಗೆ 1,214 ಆಟಗಾರರು

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ಸಿಡಿಲಕಿಡಿ ಸುಂದರ್‌ ಸಾಹಸ

ಸಿಡಿಲಕಿಡಿ ಸುಂದರ್‌ ಸಾಹಸ

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಬದಿಯ ವಿದ್ಯುತ್‌ ಕಂಬ ಬದಲಿಸಿ ಅಪಾಯ ತಪ್ಪಿಸಿ

ರಸ್ತೆ ಬದಿಯ ವಿದ್ಯುತ್‌ ಕಂಬ ಬದಲಿಸಿ ಅಪಾಯ ತಪ್ಪಿಸಿ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

ಅಕ್ರಮ ಗ್ಯಾಸ್‌ ರಿಫಿಲ್ಲಿಂಗ್‌: ಸಿಲಿಂಡರ್‌ಗಳ ವಶ

ಅಕ್ರಮ ಗ್ಯಾಸ್‌ ರಿಫಿಲ್ಲಿಂಗ್‌: ಸಿಲಿಂಡರ್‌ಗಳ ವಶ

ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರದೆಸೆ

ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರದೆಸೆ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ: ವೃಥಾ ವಿವಾದ ಸೃಷ್ಟಿ

ಐಪಿಎಲ್‌ ಹರಾಜಿಗೆ 1,214 ಆಟಗಾರರು

ಐಪಿಎಲ್‌ ಹರಾಜಿಗೆ 1,214 ಆಟಗಾರರು

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ಸಿಡಿಲಕಿಡಿ ಸುಂದರ್‌ ಸಾಹಸ

ಸಿಡಿಲಕಿಡಿ ಸುಂದರ್‌ ಸಾಹಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.