ಅತಿವೃಷ್ಟಿ ಹಾನಿ ಕಾಮಗಾರಿ ತ್ವರಿತಕ್ಕೆ ಸಚಿವ ರವಿ ಸೂಚನೆ

Team Udayavani, Apr 24, 2020, 1:48 PM IST

24-April-18

ಚಿಕ್ಕಮಗಳೂರು: 2019ರಲ್ಲಿ ಮಳೆಯಿಂದಾದ ಅತಿವೃಷ್ಟಿ ನಿವಾರಣೆ ಮಾಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ಸಿ.ಟಿ. ರವಿ ಸಭೆ ನಡೆಸಿದರು.

ಚಿಕ್ಕಮಗಳೂರು: ಕಳೆದ ಆಗಸ್ಟ್‌ ಸೆಪ್ಪೆಂಬರ್‌ ತಿಂಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಕಟ್ಟಡ, ಮನೆ, ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಮುಂಗಾರು ಆರಂಭಗೊಳ್ಳುವುದರೊಳಗೆ ಪೂರ್ಣಗೊಳಿಸುವಂತೆ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019ರ ಆಗಸ್ಟ್‌- ಸೆಪ್ಪೆಂಬರ್‌ ತಿಂಗಳಲ್ಲಿ ಮಳೆಯಿಂದಾದ ಅತಿವೃಷ್ಟಿ ನಿವಾರಣೆ ಮಾಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಮನೆ, ಶಾಲಾ ಕಟ್ಟಡ, ಸೇತುವೆ, ರಸ್ತೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿದ್ದವು. ಅವುಗಳ ಪುನರ್‌ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ಸಾಕಷ್ಟು ಹಣ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ಸಂಪೂರ್ಣವಾಗಿಲ್ಲ.

ಈ ಬಗ್ಗೆ ಕ್ರಮ ವಹಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಎ,ಬಿ ಹಾಗೂ ಸಿ
ಕೆಟಗರಿಯ ಮನೆಗಳಲ್ಲಿ ಒಟ್ಟು 2612 ಮನೆಗಳಿದ್ದು, 1,616 ಮನೆಗಳು ಪೂರ್ಣವಾಗಿದ್ದು, 584 ಮನೆಗಳ ಕಾಮಗಾರಿ ನಡೆಯುತ್ತಿದೆ. 430 ಮನೆಗಳ ಯಾವುದೇ ಕಾಮಗಾರಿ ಇನ್ನು ಆರಂಭವಾಗಿಲ್ಲ ನಡೆಯದೆ ಬಾಕಿ ಉಳಿದಿದೆ. ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸದ ಫಲಾನುಭವಿಗಳಿಗೆ ಅನುದಾನ ವಾಪಸ್‌ ಪಡೆಯುವುದಾಗಿ ನೋಟಿಸ್‌ ಅಥವಾ ತಿಳುವಳಿಕೆ ಪತ್ರ ನೀಡುವಂತೆ ತಿಳಿಸಿದರು.

ಮನೆ ನಿರ್ಮಾಣಕ್ಕಾಗಿ ಅಂಗಡಿ, ಮಾವಿನಕೆರೆ, ಬಿ.ಹೊಸಹಳ್ಳಿ ಭಾಗದಲ್ಲಿ ಒಟ್ಟು 16 ಎಕರೆ ನಿವೇಶನ ಜಾಗ ಗುರುತಿಸಲಾಗಿದ್ದು, ಕೆಲವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನು ಕೆಲವರು ಹಕ್ಕುಪತ್ರ ಪಡೆಯಲು ನಿರಾಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ
ಗೌತಮ್‌ ಸಭೆಗೆ ತಿಳಿಸಿದರು. ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯ ಸುರಕ್ಷತೆಗಾಗಿ ಅವಶ್ಯಕವಿರುವ 3,500 ಪಿ.ಪಿ.ಇ ಕಿಟ್‌ಗಳನ್ನು
ಹೊಂದಲಾಗಿದ್ದು, ಅಗತ್ಯ ಪ್ರಮಾಣದ ಮಾಸ್ಕ್ಗಳನ್ನು ಹೊಂದಲಾಗಿದೆ. ಜೊತೆಗೆ ಇನ್ನೂ 5 ಸಾವಿರ ಮಾಸ್ಕ್ಗಳಿಗೆ ಬೇಡಿಕೆ ಇಡಲಾಗಿದೆ. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳ ಕೆಲಸ ಆರಂಭಿಸಲು ಯಾವುದೇ ಅಡೆ ತಡೆಗಳಿಲ್ಲ. ಆದಷ್ಟು ಶೀಘ್ರ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಸುವಂತೆ ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್‌. ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವು

ರಸ್ತೆ ಅಪಘಾತ: ಕಾರು ಢಿಕ್ಕಿ: ಬೈಕ್‌ ಸವಾರ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dfdsf

ಚಿಕ್ಕಮಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೈದಿ 24 ಗಂಟೆಯೊಳಗೆ ಬಂಧನ

bjp-celabration

ಮೋದಿ ಆಡಳಿತಕ್ಕೆ 8 ವರ್ಷ: ಬಿಜೆಪಿ ಸಂಭ್ರಮಾಚರಣೆ

bus

ಕಳಚಿ ಬಿದ್ದ ಬಸ್‌ ಟೈರ್‌: ಅಪಾಯದಿಂದ ಪಾರು

11camp

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

rohith-chakratheertha

ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ಆಗ್ರಹ

MUST WATCH

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

ಹೊಸ ಸೇರ್ಪಡೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ಈಶ್ವರಮಂಗಲ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ವಿದ್ಯಾರ್ಥಿನಿಯರು ಬಯಸಿದರೆ ಟಿಸಿಗೆ ಅವಕಾಶ: ವಿ.ವಿ. ಕುಲಪತಿ

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಬಹಿರಂಗ ಚರ್ಚೆಗೆ ಬನ್ನಿ: ಪ್ರತಾಪ್‌ ಸಿಂಹ ಸವಾಲು

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

ಹಿಜಾಬ್‌ ಧರಿಸಿ ಬಂದ 11 ಮಂದಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.