ಕ್ರೀಡಾ ಉತ್ಸವದಲ್ಲಿ ಕ್ರೀಡಾಳುಗಳು-ಜನರ ಬತ್ತದ ಉತ್ಸಾಹ

3ನೇ ದಿನ ಗಮನ ಸೆಳೆದ ಕುಸ್ತಿ ಪಂದ್ಯಾವಳಿ-ರಾಜ್ಯ ಮಟ್ಟದ ಕಬಡ್ಡಿ -ವಾಲಿಬಾಲ್‌-ಜಲ ಸಾಹಸ ಕ್ರೀಡೆ-ನೃತ್ಯ ಪ್ರದರ್ಶನ

Team Udayavani, Feb 26, 2020, 3:40 PM IST

26-February-20

ಚಿಕ್ಕಮಗಳೂರು: ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿರುವ ಕ್ರೀಡಾ ಉತ್ಸವದ ಮೂರನೇ ದಿನವಾದ ಮಂಗಳವಾರ ಕುಸ್ತಿ ಪಂದ್ಯಾವಳಿ, ರಾಜ್ಯ ಮಟ್ಟದ ಕಬಡ್ಡಿ, ರಾಜ್ಯ ಮಟ್ಟದ ವಾಲಿಬಾಲ್‌, ಷಟಲ್‌ ಬ್ಯಾಡ್ಮಿಂಟನ್‌ ಸೇರಿದಂತೆ ಜಲ ಸಾಹಸ ಕ್ರೀಡೆ ವಿದ್ಯಾರ್ಥಿನಿಯರ ಸಾಂಪ್ರದಾಯಿಕ ಉಡುಗೆ, ನೃತ್ಯ ಪ್ರದರ್ಶನ, ಕಲಾವಿದರ ಕುಂಚದಲ್ಲಿ ಅರಳಿದ ಕಲಾಚಿತ್ತಾರ ಮಲೆನಾಡಿಗರ ಹುಬ್ಬೆರಿಸುವಂತೆ ಮಾಡಿತು.

ಮಂಗಳವಾರ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೆ ಎಂದೇ ಖ್ಯಾತಿ ಪಡೆದಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದ ಮಹಿಳೆ ಮತ್ತು ಪುರುಷರ ಸ್ಪರ್ಧೆಗಳು ಭಾಗವಹಿಸುವ ಮೂಲಕ ಕಬಡ್ಡಿ ಪಂದ್ಯಾವಳಿಗೆ ಕಳೆತಂದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಗೆಲುವಿಗಾಗಿ ನಡೆಸುತ್ತಿದ್ದ ಸೆಣಸಾಟದ ದೃಶ್ಯಗಳು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.

ರಾಷ್ಟ್ರೀಯ ಮಟ್ಟದ ಪ್ರೊ. ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹೆಸರಾಂತ ಕಬಡ್ಡಿ ಪಟುಗಳ ಕ್ರೀಡಾಕೂಟದ ಕೇಂದ್ರಬಿಂದುವಾಗಿದ್ದು ಸುಖೇಶ್‌ ಹೆಗ್ಡೆ ಮತ್ತು ಪ್ರಪಂಚನ್‌ ನೇತೃತ್ವದಲ್ಲಿ ಪ್ರಶಾಂತ್‌ ರೈ, ಸಚಿನ್‌ ವಿಠಲ್‌, ಆನಂದ್‌, ಸುನೀಲ್‌ ಹನುಮಂತಪ್ಪ ಒಳಗೊಂಡ ಎರಡು ತಂಡಗಳು. ರಾಜ್ಯದ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ತಂಡಗಳನ್ನು ನಿರಾಯಾಸವಾಗಿ ಸೋಲಿಸಿ ಫೈನಲ್‌ ತಲುಪಿದವು.

ಪ್ರೊ. ಕಬಡ್ಡಿ ಆಟಗಾರರು ಅಂಕಣಕ್ಕೆ ಇಳಿಯುತ್ತಿದ್ದಂತೆ ನೆರೆದಿದ್ದ ಜನರ ಶಿಳ್ಳೆ ಮುಗಿಲು ಮುಟ್ಟಿತ್ತು. ಕಬಡ್ಡಿ ಆಟಗಾರರ ಹೆಸರು ಹೇಳಿ ಸ್ಪ ìಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಜ್ಯದ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ತಂಡದ ಸ್ಪರ್ಧಿಗಳು ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾದರು. ದೇಶಿ ಕ್ರೀಡೆ ಎಂದೇ ಹೆಸರಾಗಿರುವ ಕುಸ್ತಿ ಅಖಾಡಕ್ಕೆ ಎದುರಾಳಿ ತೊಡೆತಟ್ಟಿ ಕರೆಯುವ ಪೈಲ್ವಾನರ ಉತ್ಸಾಹಕ್ಕೆ ದೇಶೀಯ ತಮಟೆ ಸದ್ದು, ನೆರೆದಿದ್ದ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಪೈಲಾವರನ್ನು ಹುರಿದುಂಬಿಸುತ್ತಿತ್ತು.

ಹಿರೇಮಗಳೂರು ಪ್ರಭುಲಿಂಗ ಪ್ರೌಢಶಾಲೆಯ ಶಿಕ್ಷಕ ಸುಧಾಕರ್‌ ಕೆಂಪು ಮಣ್ಣಿನ ಕುಸ್ತಿಯ ಅಖಾಡದಲ್ಲಿ ಜಿಲ್ಲೆಯ 100ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಪೈಲಾವನರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಶತಮಾನೋತ್ಸವ ಕೀಡಾಂಗಣದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ಹಾಗೂ ಜಿಲ್ಲಾ ಮಟ್ಟದ ಷಟಲ್‌ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗಳಲ್ಲಿ ಕ್ರೀಡಾಪಟುಗಳು ಪ್ರತಿಭೆ ಪ್ರದರ್ಶಿಸಿದರು.

ಪುಟಾಣಿಗಳ ಆಕರ್ಷಿಸಿದ ಭೂ ಸಾಹಸ ಕ್ರೀಡೆ: ಶತಮಾನೋತ್ಸವ ಕ್ರೀಡಾಂಗಣದಲ್ಲಿ ಬೆಂಗಳೂರಿನ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಆಯೋಜಿಸಿದ್ದ ಭೂ ಸಾಹಸ ಕ್ರೀಡೆಯಲ್ಲಿ ಪುಟಾಣಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಟೆರ್ರಾಲೈನ್‌ ಟ್ರಾವೆಲ್‌ (ಟಿಟಿ), ಹಗ್ಗದ ಮೇಲೆ ನಡಿಗೆ ಕ್ರೀಡೆಗಳಲ್ಲಿ ಯುವಕ ಯುವತಿಯರು ಸೊಂಟಕ್ಕೆ ಬೆಲ್ಟ್‌ಗಳನ್ನು ಕಟ್ಟಿಕೊಂಡು ಹಗ್ಗದಲ್ಲಿ ಜೋತುಬಿದ್ದು ಜಾರುತಿದ್ದ ದೃಶ್ಯಗಳು ಆಕರ್ಷಣೀಯವಾಗಿತ್ತು.

2 ರಿಂದ 5 ವರ್ಷದ ಪುಟಾಣಿಗಳು ಭಯವಿಲ್ಲದೆ ಹಗ್ಗದಲ್ಲಿ ಜಾರಿ ಎಂಜಾಯ್‌ ಮಾಡಿದರು. ಮಗುವೊಂದು ಹಗ್ಗದಲ್ಲಿ ಜಾರುತ್ತಾ ನೆರೆದಿದ್ದವರಿಗೆ ಹಾಯ್‌ ಹೇಳುತ್ತಿದಂತೆ ಜನರು ಚಪ್ಪಾಳೆ ತಟ್ಟಿ ಆಕೆಯನ್ನು ಸ್ವಾಗತಿಸಿ ಸಂಭ್ರಮಿಸಿದರು. ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ನಗರದ ಹೊರವಲಯದ ನೆಲ್ಲೂರು ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ಮಂಗಳವಾರದಿಂದ ಚಾಲನೆ ದೊರೆತಿದ್ದು, ಮಹಿಳೆಯರು, ಮಕ್ಕಳು, ಪುರುಷರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀರಿನಲ್ಲಿ ಎಂಜಾಯ್‌ ಮಾಡಿದರು.

ಸುತ್ತಮುತ್ತಲ ಗ್ರಾಮದ ಮಹಿಳೆಯರು ತಂಡೋಪ ತಂಡವಾಗಿ ಕೆರೆಯ ಬಳಿಗೆ ಬಂದು ಸುರಕ್ಷಿತ ಜಾಕೇಟ್‌ ಧರಿಸಿ ನುರಿತ ತರಬೇತಿದಾರರ ಮಾರ್ಗದರ್ಶನದಲ್ಲಿ ದೋಣಿ ಮುನ್ನಡೆಸಿದರು. ಸ್ಪೀಡ್‌ ಬೋಟ್‌ನಲ್ಲಿ ಕುಳಿತ ಯುವಕ, ಯುವತಿಯರು ಬೋಟ್‌ ನೀರಿನಲ್ಲಿ ವೇಗವಾಗಿ ಚಲಿಸುವಾಗ ಖುಷಿಪಟ್ಟು ಕೆ ಕೆ ಹಾಕಿದರೆ, ಮತ್ತೆ ಕೆಲವರು ಬೆದರಿ ಕಕ್ಕಾಬಿಕ್ಕಿಯಾದರು. ಸುರಕ್ಷಿತ ಜಾಕೆಟ್‌ ನೊಂದಿಗೆ ಬನಾನಾ ಬೋಟ್‌ನಲ್ಲಿ ಕೆರೆಯ ನಡುಗಡ್ಡೆಗೆ ಬೋಟ್‌ ಬಂದಾಗ ತರಬೇತಿದಾರರು ನೀರಿನಲ್ಲಿ ಬೀಳಿಸಿ ಮತ್ತೆ ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ದೃಶ್ಯ ಕಂಡು ಬಂದವು.

ಸುಭಾಷ್‌ ಚಂದ್ರ ಬೋಸ್‌ ಆಟದ ಮೈದಾನದಲ್ಲಿ ಶಾಂತಿ ನಿಕೇತನ ಚಿತ್ರಕಲಾ ವಿಶ್ವವಿದ್ಯಾಲಯದಿಂದ ಚಿತ್ರಕಲಾ ಶಿಬಿರ ಆಯೋಜಿಸಿದ್ದು, ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸಿದ ಕಲಾವಿದರ ಕುಂಚದಿಂದ ಅರಳುತ್ತಿರುವ ಕಲಾಕೃತಿಗಳು ನೋಡುಗರ ಗಮನ ಸೆಳೆದವು.

ಜಿಲ್ಲೆಯ ಕಲಾವಿದೆ ವಾಣಿ ಜಿಲ್ಲೆಯ ಕಾಫಿ ವೈಭವ, ದೇವಿರಮ್ಮ ಬೆಟ್ಟ ಹಾಗೂ ಜಿಲ್ಲೆಯ ನಿಸರ್ಗ ಸಂಪತನ್ನು ಚಿತ್ರದಲ್ಲಿ ಅನಾವರಣಗೊಳಿಸಿದ್ದರು. ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಿಕ್ಷಣ ವಿಭಾಗದ ಚಿತ್ರಕಲಾ ಶಿಕ್ಷಕ ರವಿಕುಮಾರ್‌ ಕುಂಚದಲ್ಲಿ ಜಿಲ್ಲೆಯ ಪ್ರಕೃತಿ ಸೌಂದರ್ಯ ಅರಳಿದ್ದು, ನೋಡುಗರನ್ನು ಸೆಳೆಯುತ್ತಿದೆ. ಕೇಂದ್ರ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ಪಶ್ಚಿಮ ಬಂಗಾಳದಿಂದ ಆಗಮಿಸಿರುವ ಜಯದೇವಬಾಲ, ಮುಂಬೈ ಭೀಮರಾವ್‌ ಚೌಟೆ, ಬೆಂಗಳೂರಿನ ಬಾಬು ಜಟ್ಕರ್‌ ಸೇರಿದಂತೆ ಅನೇಕ ಕಲಾವಿದರ ಕುಂಚದಲ್ಲಿ ಸುಂದರ ಕಲಾಕೃತಿಗಳ ನಿರ್ಮಾಣದಲ್ಲಿ ತೊಡಗಿದ್ದು ಉತ್ಸವಕ್ಕೆ ಇನ್ನಷ್ಟು ಮೆರಗು ತಂದಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.