Misbehaving: ಮದ್ಯ ಸೇವಿಸಿ ದೇವರಮನೆ ಗುಡ್ಡ ಪ್ರವಾಸಿ ತಾಣದ ಬಳಿ ಮೋಜು ಮಸ್ತಿ…
Team Udayavani, Aug 16, 2023, 11:32 AM IST
ಚಿಕ್ಕಮಗಳೂರು: ಇತ್ತೀಚಿಗೆ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ರಸ್ತೆಯಲ್ಲೇ ಕುಣಿದು ಮೋಜು ಮಸ್ತಿ ಮಾಡಿದ ಪ್ರಕರಣ ಬೆನ್ನಲ್ಲೇ ಇತಿಹಾಸ ಪ್ರಸಿದ್ಧ ದೇವರಮನೆಗುಡ್ಡ ಪ್ರವಾಸಿ ತಾಣದ ಬಳಿ ಪ್ರವಾಸಿಗರು ಮದ್ಯ ಸೇವಿಸಿ ರಸ್ತೆ ಬದಿ ಕುಣಿದು ಮೋಜು ಮಸ್ತಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಪ್ರವಾಸಿಗರು ಮದ್ಯ ಸೇವಿಸಿ ನೃತ್ಯ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗುಡ್ಡಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬ ಸಮೇತ ಭೇಟಿ ನೀಡುವ ಸುಂದರ ಸೊಬಗಿನ ತಾಣ ಇದಾಗಿದ್ದು ಪ್ರವಾಸಿಗರ ವರ್ತನೆಗೆ ಇಲ್ಲಿ ಬಂದ ಇತರ ಪ್ರವಾಸಿಗರಿಗೆ ಇರುಸು ಮುರಿಸು ಆದಂತಾಗಿದೆ.
ರಸ್ತೆ ಬದಿ ಮದ್ಯ ಸೇವಿಸಿ ಪ್ರವಾಸಿಗರು ನೃತ್ಯ ಮಾಡಿದ್ದು ಅಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಯುವಕರ ವರ್ತನೆಯನ್ನು ಸೆರೆ ಹಿಡಿದಿದ್ದಾರೆ ಅಲ್ಲದೆ ಪ್ರವಾಸಿ ತಾಣಗಳಲ್ಲಿ ಈ ರೀತಿ ದುರ್ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gurugram: ಲಿಫ್ಟ್ನಲ್ಲಿ 6 ತಿಂಗಳ ಮಗುವಿನ ಮೇಲೆ ಶ್ವಾನ ದಾಳಿ… ಮಾಲೀಕನ ವಿರುದ್ಧ ಪ್ರಕರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ