ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ
Team Udayavani, Jan 21, 2022, 2:17 PM IST
ಚಿಕ್ಕಮಗಳೂರು: ಕೋವಿಡ್ ಮಧ್ಯೆಯೇ ಕೆಲವು ತಿಂಗಳು ಬದುಕಬೇಕಿದೆ. ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ. ಜನ ಶಿಸ್ತು ಪಾಲಿಸಿದರೆ ಲಾಕ್‍ಡೌನ್, ಕರ್ಫ್ಯೂ ಅಗತ್ಯವಿಲ್ಲ. ಆದರೆ, ಜನ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ, ಆರೋಗ್ಯ ಇಲಾಖೆ ತಜ್ಞರ ಅಭಿಪ್ರಾಯ ಪಡೆದು ಯೋಚನೆ ಮಾಡಬೇಕು. ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಹಿನ್ನೆಡೆಯಾಗುತ್ತಿದೆ ಎನ್ನುವುದು ಜನರ ಭಾವನೆ ಎಂದರು.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ
ಸರ್ಕಾರ ಕರ್ಫ್ಯೂ ಹಿಂಪಡೆಯಬೇಕು, ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯಕ್ಕೆ ಕ್ರಮಕೈಗೊಳ್ಳಲಿ. ವೈಯಕ್ತಿಕ ಅಭಿಪ್ರಾಯಕ್ಕಿಂತ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಎರಡು ವರ್ಷದಿಂದ ಕೋವಿಡ್ ನಮ್ಮ ಜೊತೆಯೇ ಇದೆ, ಅನುಭವಿಸಿದ್ದೇವೆ. ಕರ್ಫ್ಯೂ ನಿಂದ ಆಟೋ, ಟ್ಯಾಕ್ಸಿ, ಹೊಟೇಲ್ ಉದ್ಯಮಕ್ಕೆ ಸಮಸ್ಯೆಯಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ