Udayavni Special

ಹುಲಿ ಯೋಜನೆ ಜಾರಿ ಮಾಡಿ ಎಂದಿಲ್ಲ: ಟಿ.ಡಿ. ರಾಜೇಗೌಡ


Team Udayavani, Nov 14, 2020, 8:02 PM IST

ಹುಲಿ ಯೋಜನೆ ಜಾರಿ ಮಾಡಿ ಎಂದಿಲ್ಲ: ಟಿ.ಡಿ. ರಾಜೇಗೌಡ

ಬಾಳೆಹೊನ್ನೂರು : ಹುಲ್ಲುಗಾವಲಿನಿಂದ ಕೂಡಿದ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಹಾಗೂ ಜಾನುವಾರುಗಳು ಸ್ವತ್ಛಂದವಾಗಿ ಜೀವಿಸುತ್ತಿದ್ದು ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮೀಸಲು ಅರಣ್ಯ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರು

ಬರೆದಿದ್ದಾರೆ ಎಂಬ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿರುವ ಬಗ್ಗೆ ಶಾಸಕ ರಾಜೇಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರಕಾರ ಇದ್ದ ಸಂದರ್ಭದಲ್ಲಿ ಪತ್ರ ಬರೆದಿದ್ದು ನಿಜ. ನಾನೊಬ್ಬನೇ ಈ ಪತ್ರವನ್ನು ಬರೆದಿಲ್ಲ. ಈ ಸಂದರ್ಭದಲ್ಲಿ ಸಿ.ಟಿ. ರವಿ, ಭೋಜೇಗೌಡರು ಮತ್ತು ಜಿಲ್ಲೆಯ ರಾಜಕಾರಣಿಗಳು ಸೇರಿ ಈ ಪತ್ರವನ್ನು ಬರೆದಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಮೀಸಲು ಅರಣ್ಯ ಬೇಡ. ಹುಲ್ಲುಗಾವಲಿನ ಪ್ರದೇಶದಲ್ಲಿ ಮಾಡಿ, ಅರಣ್ಯ ಇಲಾಖೆಯವರು ಅದರ ರಕ್ಷಣೆ ಮಾಡಲಿ ಎಂಬುದು ಉದ್ದೇಶವಾಗಿದೆ. ಹುಲಿ ಯೋಜನೆ ಜಾರಿ ಮಾಡಿ ಎಂದು ನಾನು ಹೇಳಿಲ್ಲ, ಕಂದಾಯ ಇಲಾಖೆಯವರು ತಮ್ಮ ಭೂಮಿಯನ್ನು ಕಾಪಾಡಿಕೊಳ್ಳುವುದಿಲ್ಲ. ಅರಣ್ಯ ಇಲಾಖೆಯವರಾದರೂ ಭೂಮಿಯನ್ನು ಕಾಪಾಡಿಕೊಳ್ಳಲಿ ಎಂದು ಪತ್ರವನ್ನು ಬರೆದಿದ್ದು ಎಂದು ಸಮರ್ಥನೆ ಮಾಡಿಕೊಂಡರು.

ನಗರ ಪ್ರದೇಶಕ್ಕೆ ಜಾರಿಗೊಳಿಸಿದ್ದ ಭೂ ಕಬಳಿಕೆ ನಿಷೇದ ಖಾಯಿದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದು, ತಲೆತಲಾಂತರದಿಂದ ಕೃಷಿ ಜೀವನ ನಡೆಸುತಿದ್ದವರಿಗೆ ಇದರಿಂದ ಭಾರೀ ಅನ್ಯಾಯವಾಗಲಿದೆ. ವನ್ಯಜೀವಿ ವಿಭಾಗದ ಗಡಿಯನ್ನು ವಿಸ್ತರಣೆ ಮಾಡಬಾರದು. ಮೀಸಲು ಅರಣ್ಯಕ್ಕೆ ಯಾವುದೇ ಸೂಕ್ಷ್ಮಜೀವಿ ವೈವಿಧ್ಯ ತಾಣವೆಂದು ಬಫರ್‌ ಜೋನ್‌ ಮಾಡುವುದು ಬೇಡವೆಂಬುದು ನಮ್ಮ ದೃಢ ನಿರ್ದಾರವಾಗಿದೆ ಎಂದರು.

ಲಾಕ್‌ ಡೌನ್‌ ವೇಳೆಯಲ್ಲಿ ನಕಲಿ ಆಕ್ಷೇಪಣಾ ಪತ್ರಗಳನ್ನು ಹಸಿರು ಪೀಠಕ್ಕೆ ಸಲ್ಲಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸ್ವಾಗತಾರ್ಹ. ಸರಕಾರ ಕೂಡಲೇ ಸೆಟ್ಲಮೆಂಟ್‌ ಅಧಿಕಾರಿಯನ್ನು ನೇಮಿಸಿ ತಾಲೂಕು, ಗ್ರಾಪಂ ವ್ಯಾಪ್ತಿ ಯಲ್ಲಿರೈತರ ಸಮಸ್ಯೆ ಬಗ್ಗೆ ಆಕ್ಷೇಪಣಾ ವರದಿ ಪಡೆದುಕೊಳ್ಳುವಂತೆ ತುರ್ತಾಗಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಬಾಳೆಹೊನ್ನೂರು ಸುತ್ತಮುತ್ತ ಗಾಂಜಾ ಹಾಗೂ ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು ಗಾಂಜಾ ಮಾರಾಟದ ಬಗ್ಗೆ ಹಾಗೂ ಗೋ ಹತ್ಯೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಂ.ಎಸ್‌. ಚೆನ್ನಕೇಶವ ಗೌಡ, ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಗ್ರಾಪಂ ಮಾಜಿ ಅಧ್ಯಕ್ಷ ಜಾನ್‌ ಡಿಸೋಜಾ, ಬಿ.ಸಿ. ಸಂತೋಷ್‌ ಕುಮಾರ್‌ ಸುದ್ದಿಗೋಷ್ಟಿಯಲ್ಲಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಹಿ ಸುದ್ದಿ: ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಸಿಹಿ ಸುದ್ದಿ:2020ರ ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್

ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್

ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ಸ್ಥಗಿತಗೊಂಡ ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ದುರಂತ ಅಂತ್ಯ ಕಂಡ ಫಿಲಿಪ್‌ ಹ್ಯೂಸ್‌ಗೆ 63 ಸೆಕೆಂಡ್‌ಗಳ ಗೌರವ

ದುರಂತ ಅಂತ್ಯ ಕಂಡ “ಫಿಲಿಪ್‌ ಹ್ಯೂಸ್‌”ಗೆ 63 ಸೆಕೆಂಡ್‌ಗಳ ಗೌರವ

ಜಮ್ಮು-ಕಾಶ್ಮೀರ: ಡಿಡಿಸಿ ಚುನಾವಣೆಗೂ ಮುನ್ನ ಉಗ್ರರ ದಾಳಿ, ಇಬ್ಬರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ: ಡಿಡಿಸಿ ಚುನಾವಣೆಗೂ ಮುನ್ನ ಉಗ್ರರ ದಾಳಿ, ಇಬ್ಬರು ಯೋಧರು ಹುತಾತ್ಮ

whatsapp

ವಾಟ್ಸಾಪ್ OTP Scam 2020: ಮೈಮರೆತರೇ ನಿಮ್ಮ ಪ್ರತಿಯೊಂದು ಮಾಹಿತಿ ಹ್ಯಾಕರ್ ಗಳ ಪಾಲು !

ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಿಎಂ

ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಣಿಝರಿ ಪ್ರಪಾತದ ಅಂಚಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌

ರಾಣಿಝರಿ ಪ್ರಪಾತದ ಅಂಚಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌

ಚಿಕ್ಕಮಗಳೂರು : ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಚಿಕ್ಕಮಗಳೂರು : ಬಾಬಾಬುಡನ್ ಗಿರಿಯಲ್ಲಿ ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

ಒಂದೆಡೆ ಗೈರು; ಮತ್ತೂಂದೆಡೆ ಹಾಜರು

ಒಂದೆಡೆ ಗೈರು; ಮತ್ತೂಂದೆಡೆ ಹಾಜರು

NEWS-TDY-03

ಚಿಕ್ಕಮಗಳೂರು : ಪತ್ನಿಯಿಂದಲೇ ಪತಿ ಕೊಲೆ : ಪ್ರಿಯಕರನ ಜೊತೆ ಸೇರಿ ಗಂಡನ ಮರ್ಡರ್

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

ಸ್ವಾತಂತ್ರ್ಯ ಹರಣವೇ ಜೀತಪದ್ಧತಿ

ಸ್ವಾತಂತ್ರ್ಯ ಹರಣವೇ ಜೀತಪದ್ಧತಿ

ರಾಣಿಝರಿ ಪ್ರಪಾತದ ಅಂಚಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌

ರಾಣಿಝರಿ ಪ್ರಪಾತದ ಅಂಚಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌

ಸಿಹಿ ಸುದ್ದಿ: ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಸಿಹಿ ಸುದ್ದಿ:2020ರ ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?

ಗ್ರಾಮೀಣ ಭಾಗದಲ್ಲೂ ಕನ್ನಡ ಜಾಗೃತಿಯಾಗಲಿ

ಗ್ರಾಮೀಣ ಭಾಗದಲ್ಲೂ ಕನ್ನಡ ಜಾಗೃತಿಯಾಗಲಿ

ನಿವೇಶನ ಹಕ್ಕು ಪತ್ರ ನೀಡಲು ಆಗ್ರಹ

ನಿವೇಶನ ಹಕ್ಕು ಪತ್ರ ನೀಡಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.