Udayavni Special

­ಮುರುಘಾ ಮಠದಲ್ಲಿ ಪರಿಷತ್‌ ಸಭಾಪತಿ ಹೊರಟ್ಟಿಗೆ ಸನ್ಮಾನ

ಸಮಾಜದಲ್ಲಿ ಪ್ರಜ್ಞಾವಂತರು ಸಿಗಲ್ಲ

Team Udayavani, Feb 26, 2021, 5:04 PM IST

Basavaraj Horatti

ಚಿತ್ರದುರ್ಗ: ಸಮಾಜದಲ್ಲಿ ಸಜ್ಜನರು ಸಿಗುತ್ತಾರೆ. ಆದರೆ, ಪ್ರಜ್ಞಾವಂತರು ಸಿಗುವುದಿಲ್ಲ. ಪ್ರಬುದ್ಧರಿದ್ದಲ್ಲಿ ಯಾವುದೇ ಅನಾಹುತ ಆಗುವುದಿಲ್ಲ. ಪ್ರಬುದ್ಧರು ಆಯ್ಕೆಯಾದರೆ ಅಪ್ರಬುದ್ಧರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಗುರುವಾರ ವಿಧಾನ ಪರಿಷತ್‌ ಸಭಾಪತಿಯಾಗಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊರಟ್ಟಿಯವರು ಪ್ರಜ್ಞಾವಂತ ಪ್ರಬುದ್ಧ ರಾಜಕಾರಣಿ. ಅವರದು ಹೋರಾಟದ ಬದುಕು. ಸಮಾಜದ ಹಿತಕ್ಕಾಗಿ, ಶಿಕ್ಷಕರ ಕ್ಷೇಮಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ಹೊರಟ್ಟಿಯವರದ್ದು ಸಾರ್ಥಕವಾಗಿರುವ ಜೀವನ.

7ನೇ ಬಾರಿ ಆಯ್ಕೆಯಾಗಿರುವ ಸಂದರ್ಭ ಹೊರಟ್ಟಿಯವರಿಗೆ ಸಿಕ್ಕಿದೆ. ಅವರ ಆಯ್ಕೆಯ ಕ್ಷೇತ್ರ ಅಪರೂಪವಾದುದು. ವಿಧಾನ ಪರಿಷತ್‌ ಬುದ್ಧಿವಂತರ, ವಿದ್ಯಾವಂತರ ಕ್ಷೇತ್ರ. ಯಾವ ಶಿಕ್ಷಕರನ್ನು ಕೇಳಿದರು ಹೊರಟ್ಟಿಯವರು ಸಹಕಾರ ನೀಡಿದ್ದಾರೆ ಎನ್ನುತ್ತಾರೆ. ಅವರದು ಸಹಕಾರ ತತ್ವ. ವ್ಯಕ್ತಿಗೆ ಬದ್ಧತೆ ಇರಬೇಕು. ಕೇವಲ ಆಶ್ವಾಸನೆಗಳಿಂದ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ. ರಾಷ್ಟ್ರಕ್ಕೆ, ರಾಜ್ಯಕ್ಕೆ ಬದ್ಧತೆಯ ರಾಜಕಾರಣಿಗಳು ಬೇಕಿದೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಸವರಾಜ ಹೊರಟ್ಟಿ, 116 ವರ್ಷಗಳ ಭವ್ಯ ಇತಿಹಾಸವಿರುವ ವಿಧಾನ ಪರಿಷತ್‌ ಭಾರತದ ಸರ್ವ ಶ್ರೇಷ್ಠವಾದುದು. ನನ್ನ ಅರ್ಧ ಆಯಸ್ಸನ್ನು ಸದನದಲ್ಲಿ ಕಳೆದಿದ್ದೇನೆ. ಕರ್ನಾಟಕದಲ್ಲಿ ಯಾರಿಗೂ ಸಿಗದ ಸೌಭಾಗ್ಯ ನನಗೆ ಸಿಕ್ಕಿದೆ. ಎರಡೂ ಸದನಗಳಲ್ಲಿ ನಾನು ಹಿರಿಯ ಸದಸ್ಯ. ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದ ನಾನು ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ನನ್ನ ವಿರುದ್ಧ ಚುನಾವಣೆಯಲ್ಲಿ ಅನೇಕರು ನಿಂತಿದ್ದರೂ ನನ್ನನ್ನು ಶಿಕ್ಷಕರು ಗೆಲ್ಲಿಸಿದ್ದಾರೆ.

ಶಿಕ್ಷಕರ ಪ್ರತಿನಿಧಿಯಾಗಿರುವ ಮೊದಲ ಸಭಾಪತಿ ನಾನು. ನನಗೆ ಈ ಸ್ಥಾನ ಕೊಟ್ಟವರು ಶಿಕ್ಷಕರು. ಹಾಗಾಗಿ ಈ ಸ್ಥಾನವನ್ನು ಅವರಿಗೆ ಅರ್ಪಿಸುತ್ತೇನೆ. ವಿಧಾನ ಪರಿಷತ್ತನ್ನು ಯಾರು ಅಪವಿತ್ರ ಮಾಡಬಾರದು. ಸದನದ ಘನತೆ ಗೌರವವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು ಎಂದರು.

ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಅಭಿನಂದನಾ ನುಡಿಗಳನ್ನಾಡಿ, ವಿಧಾನ ಪರಿಷತ್‌  ಬಹುತ್ವದಿಂದ ಕೂಡಿದ್ದು, ಬುದ್ಧಿಜೀವಿಗಳ ಘನತೆಯನ್ನು ಹೊಂದಿದೆ. ರಾಜಕಾರಣದಿಂದ ಇಚ್ಛಾಶಕ್ತಿ ಮತ್ತು ಘನತೆ ಪಡೆದುಕೊಂಡವರು ಹೊರಟ್ಟಿಯವರು. ರಾಜಕಾರಣದಲ್ಲಿ ಅನೇಕರು ಆಸ್ತಿ ಕಳೆದುಕೊಂಡಿದ್ದಾರೆ. ಹಣ ಮಾಡಿಕೊಂಡವರಿದ್ದಾರೆ. ಆದರೆ ಹೊರಟ್ಟಿಯವರ ವ್ಯಕ್ತಿತ್ವ ಇದಕ್ಕೆ ಭಿನ್ನ. ನಾಡು ಕಂಡ ಅಪರೂಪದ ಶಿಕ್ಷಣ ತಜ್ಞರು. ಶಿಕ್ಷಕ ಸಮುದಾಯದಲ್ಲಿ ಬದಲಾವಣೆ ಆಗಿದೆ ಎಂದರೆ ಅದಕ್ಕೆ ಕಾರಣ ಹೊರಟ್ಟಿಯವರು. ಸ್ನೇಹಜೀವಿ, ಸಜ್ಜನರು. ಹೊರಟ್ಟಿಯವರಿಗೆ ಬುದ್ಧನ ಕಾರುಣ್ಯವಿದೆ ಎಂದರು.

ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಮುಖಂಡ ಕೆಇಬಿ ಷಣ್ಮುಖಪ್ಪ, ಜಂಗಮ ಸಮಾಜದ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರಿದ್ದರು. ಜೆಡಿಎಸ್‌ ಯುವ ಮುಖಂಡ ಪ್ರತಾಪ್‌ ಜೋಗಿ ಸ್ವಾಗತಿಸಿದರು. ಉಮೇಶ ಪತ್ತಾರ ಪ್ರಾರ್ಥಿಸಿದರು. ನಿರಂಜನ ದೇವರಮನೆ ನಿರೂಪಿಸಿದರು.

ಟಾಪ್ ನ್ಯೂಸ್

fgef

ಮುಸ್ಲಿಂ ಯುವಕನಿಂದ ಕಾಳಿ ಮಾತೆಯ ಆರಾಧನೆ : ಸಾಮರಸ್ಯ ಸಾರುತ್ತಿದ್ದಾನೆ ರಮ್ಲಾನ್

hfgfg

ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ 

Cancel Class 12 CBSE exams, unfair to keep students under pressure till June : Priyanka Gandhi

ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ

ಹಲವಾರು ವಿಶೇಷತೆಗಳೊಂದಿಗೆ ಒನ್ ಪ್ಲಸ್ ವಾಚ್ ಬಿಡುಗಡೆ

ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

BJP will not get even 70 seats in West Bengal: Mamata          

ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-19

ಕೊರೊನಾ ಲಸಿಕೆ ಕಡಿಮೆ ಬೀಳದಂತೆ ಗಮನ ಹರಿಸಿ

ವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

Chithadurga

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಸ್ಮರಣೀಯ: ರಾಧಿಕಾ

14-16

ಭಟ್ಟರ ಜ್ಞಾನ ಸಂಪತ್ತುಅಪಾರ

14-16

ಅಂತರ್ಜಾತಿ ವಿವಾಹಿತರಿಗೆ ಚೆಕ್‌ ವಿತರಣೆ

MUST WATCH

udayavani youtube

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!

udayavani youtube

CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ

udayavani youtube

ಮಸ್ಕಿಯಲ್ಲಿ ಪ್ರತಾಪ್‌ ಗೌಡ ಪರ ಖ್ಯಾತ SINGER MANGLI

udayavani youtube

ಹೊಸ ಕೈಗಾರಿಕಾ ನೀತಿ 2020-2025, ಬಗ್ಗೆ ಮಾಹಿತಿ ಇಲ್ಲಿದೆ!

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

ಹೊಸ ಸೇರ್ಪಡೆ

14-19

ಕೊರೊನಾ ಲಸಿಕೆ ಕಡಿಮೆ ಬೀಳದಂತೆ ಗಮನ ಹರಿಸಿ

ವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

Chithadurga

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಸ್ಮರಣೀಯ: ರಾಧಿಕಾ

14-16

ಭಟ್ಟರ ಜ್ಞಾನ ಸಂಪತ್ತುಅಪಾರ

14-16

ಅಂತರ್ಜಾತಿ ವಿವಾಹಿತರಿಗೆ ಚೆಕ್‌ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.