ಚಳ್ಳಕೆರೆ ತಾಲೂಕಿನ ವಿವಿಧೆಡೆ ಉತ್ತಮ ಮಳೆ
Team Udayavani, May 9, 2020, 11:17 AM IST
ಸಾಂದರ್ಭಿಕ ಚಿತ್ರ
ಚಳ್ಳಕೆರೆ: ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಹದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗೆ ಚಾಲನೆ ದೊರೆಯಲಿದೆ.
ತಳಕು 29.04, ಪರಶುರಾಂಪುರ 8.02, ದೇವರಮರಿಕುಂಟೆ 6.04 ಮತ್ತು ಚಳ್ಳಕೆರೆ 6.02 ಮಿಮೀ ಮಳೆಯಾಗಿದೆ. ತಳಕು ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಜೊತೆಗೆ ಗಾಳಿಯೂ ರಭಸವಾಗಿ ಬೀಸಿದೆ. ಕರೆಯಾಗಳಹಳ್ಳಿ ಗ್ರಾಮದಲ್ಲಿ ರೆಡ್ಡಿ ನಾಯ್ಕ ಎಂಬುವವರು ಮರದ ಕೆಳಗೆ ನಿಲ್ಲಿಸಿದ್ದ ಗೂಡ್ಸ್ ಆಟೋ ಮೇಲೆ ಬೇವಿನ ಮರ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.