ಗೋಶಾಲೆಗೆ ಮೇವು ಪೂರೈಸಿ

Team Udayavani, Jul 29, 2017, 2:13 PM IST

ಚಳ್ಳಕೆರೆ: ತಾಲೂಕಿನ ದೊಡ್ಡ ಉಳ್ಳಾರ್ತಿ ಗೋಶಾಲೆಗೆ ಮೇವು ನೀಡಬೇಕು ಎಂದು ಒತ್ತಾಯಿಸಿ ರೈತರು ಜಾನುವಾರುಗಳೊಂದಿಗೆ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖೀಲ ಭಾರತ ಕಿಸಾನ್‌ ಸಭಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಾನುವಾರುಗಳಿಗೆ ತಿನ್ನಲು ಮೇವಿಲ್ಲದೆ ನಿತ್ರಣಗೊಂಡಿವೆ. ಮೇವು ಪೂರೈಸುವಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ ಲಿಖೀತ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಸರಬರಾಜು ಮಾಡಿರುವ ಮೇವು ಗುತ್ತಿಗೆದಾರರಿಗೆ ಸರ್ಕಾರ ನೀಡಬೇಕಾದ ಬಾಕಿಯನ್ನು ಪಾವತಿಸಿಲ್ಲ. ಗುತ್ತಿಗೆದಾರರು ಮೇವು ತರಲು ನಿರಾಕರಿಸಿದ್ದಾರೆ. ಜಾನುವಾರುಗಳು ಗೋಶಾಲೆಯಲ್ಲಿ ಅಸುನೀಗಿದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ಹೊರಬೇಕು ಎಂದರು. 

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಟಿ.ಸಿ. ಕಾಂತರಾಜು ಪ್ರತಿಭಟನಕಾರರೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಮಳೆಯಿಲ್ಲದೆ ಮೇವಿನ ಕೊರತೆ ಉಂಟಾಗಿದೆ. ಜಾನುವಾರುಗಳನ್ನು ರಕ್ಷಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಬಾಕಿ ಇರುವ ಹಣ ಸರ್ಕಾರ ಬಿಡುಗಡೆ ಮಾಡಿದ ಕೂಡಲೇ ಗುತ್ತಿಗೆದಾರರನ್ನು ಕರೆಸಿ ಮೇವು ಪೂರೈಸಲು ಸೂಚನೆ ನೀಡಲಾಗುವುದು ಎಂದರು.

ತಾತ್ಕಾಲಿಕವಾಗಿ 16 ಕೋಟಿ ರೂ. ಬಾಕಿಯಲ್ಲಿ 5 ಕೋಟಿ ರೂ. ಜಿಲ್ಲಾಡಳಿತಕ್ಕೆ ತಲುಪಿದೆ. ನೂತನ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದು, ಎರಡೂರು ದಿನಗಳಲ್ಲಿ ಇಲ್ಲಿನ ಪರಿಸ್ಥಿತಿ ತಿಳಿಸಿ ಹಣ ಬಿಡುಗಡೆ ಮಾಡಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಮೇವು ಪೂರೈಸುವ ತನಕ ಬಾರ್ಕ್‌ ಸಂಸ್ಥೆಯ ಒಳ ಆವರಣದಲ್ಲಿ ಜಾನುವಾರುಗಳನ್ನು ಮೇಯಲು ಅವಕಾಶ ಮಾಡಿಕೊಡಬೇಕು. ಮಳೆ ಬಂದಲ್ಲಿ ಗೋಶಾಲೆಗಳಲ್ಲಿನ ಎಲ್ಲ ಜಾನುವಾರುಗಳು ಖಾಲಿಯಾಗುತ್ತವೆ ಎಂದರು. ಇದಕ್ಕೆ
ಧ್ವನಿಗೂಡಿಸಿದ ತಹಶೀಲ್ದಾರ್‌ ಕಾಂತರಾಜು ಬಾರ್ಕ್‌ ಸಂಸ್ಥೆಯ ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ತಿಳಿಸಿ ಅನುಮತಿ ನೀಡುವಂತೆ ಮನವಿ ಮಾಡಿದರು. ತಹಶೀಲ್ದಾರ್‌ ಕೋರಿಕೆ ಮೇರೆಗೆ ಪ್ರಭಾರ ವ್ಯವಸ್ಥಾಪಕ ಸಾಯಿಕುಮಾರ್‌ ಮಾತನಾಡಿ, ಇದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಅವರ ಅನುಮತಿ ಸಿಕ್ಕ ನಂತರ ಜಾನುವಾರುಗಳನ್ನು ಮೇಯಲು ಬಿಡಲಾಗುವುದು.ಇದಕ್ಕೆ ಬಾರ್ಕ್‌ ಸಂಸ್ಥೆ ವಿಧಿಸುವ ಷರತ್ತುಗಳಿಗೆ ರೈತರು ಒಪ್ಪಿಗೆ
ನೀಡಬೇಕು ಎಂದರು. 

ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಜಿಲ್ಲಾ ಆಡಳಿತ ತಾಲೂಕಿನ ಎಲ್ಲ ಗೋಶಾಲೆಗಳನ್ನು ಮುಚ್ಚದೆ ಸಾಧ್ಯವಾದಷ್ಟು ಮಟ್ಟಿಗೆ ಮೇವು ಸರಬರಾಜು ಮಾಡಿ, ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷ ಗೋವಿಂದರಾಜು,
ಗ್ರಾಮದ ಮುಖಂಡರಾದ ಕರಿಯಣ್ಣ, ಶ್ರೀಕಂಠಮೂರ್ತಿ, ದುಗ್ಗಾವರ ರಂಗಣ್ಣ, ವರವಿನ ಬೋರಯ್ಯ, ತಿಮ್ಮಾರೆಡ್ಡಿ, ಗಂಗಾಧರ, ಓಂಕಾರಪ್ಪ, ನಾಗರಾಜು, ಬೋರಯ್ಯ, ವರದರಾಜು, ಓಬಯ್ಯ, ಚನ್ನಕೇಶವ ಮೂರ್ತಿ, ಅಜ್ಜಯ್ಯ ಇತರರು ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಿತ್ರದುರ್ಗ: ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ...

  • ಚಿತ್ರದುರ್ಗ: ಚುನಾವಣೆಗಳಲ್ಲಿ ಜಾತಿ, ಧರ್ಮ, ಸಿರಿವಂತಿಕೆಯನ್ನು ಪರಿಗಣಿಸದೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು...

  • ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ವಿಜಾಪುರ ಬಳಿ ಹೆದ್ದಾರಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಹೈವೇ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿರುವ...

  • ಚಿತ್ರದುರ್ಗ: ಮತದಾರರ ಪರಿಷ್ಕರಣೆಯಲ್ಲಿ ಅತಿ ಹೆಚ್ಚು ಮತ್ತು ಅತೀ ಕಡಿಮೆ ಮತದಾರರು ನೋಂದಣಿಯಾಗಿರುವ ಮತಗಟ್ಟೆಗಳ ಸ್ಥಿತಿಗತಿ ಪರಿಶೀಲಿಸಿ, ಸಮಗ್ರ ವರದಿ ಸಲ್ಲಿಸುವಂತೆ...

  • ಚಿತ್ರದುರ್ಗ: ಮಧ್ಯ ಕರ್ನಾಟಕದ ಮಹತ್ವದ ಯೋಜನೆಯಾಗಿರುವ ದಾವಣಗೆರೆ-ಚಿತ್ರದುರ್ಗ -ತುಮಕೂರು ನೇರ ರೈಲು ಮಾರ್ಗ ಯೋಜನೆ ನನೆಗುದಿಗೆ ಬಿದ್ದಿದ್ದು, ಅನುಷ್ಠಾನದಲ್ಲಿ...

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...