ಕಳ್ಳತನವಾದ ಕಟ್ಟಡದ ಹಿಂದೆಯೇ ಕಂತೆ ಕಂತೆ ನೋಟು ಪತ್ತೆ!
Team Udayavani, Oct 8, 2020, 2:38 PM IST
ಚಿತ್ರದುರ್ಗ: ಕಳ್ಳತನವಾಗಿದ್ದ 36 ಲಕ್ಷ ರೂ. ಹಣ ಕಳುವಾದ ಕಟ್ಟಡದ ಹಿಂಭಾಗದ ಹೊಲದಲ್ಲೇ ಪತ್ತೆಯಾದ ಘಟನೆ ಚಳ್ಳಕೆರೆ ತಾಲೂಕಿನ ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ದಿಲೀಪ್ ಬಿಲ್ಡ್ಕಾನ್ ಕಂಪನಿಯಲ್ಲಿ ಮೂರು ದಿನಗಳ ಹಿಂದೆ ಕಟ್ಟಡದ ಕ್ಯಾಶ್ ರೂಂ ಮೇಲಿನ ಶೀಟ್ ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರಕೋಡಿ: ಸಿನಿಮೀಯ ರೀತಿಯಲ್ಲಿ ಮನೆಯೊಳಗೆ ನುಗ್ಗಿ ಗುಂಡಿನ ದಾಳಿ
ಗುರುವಾರ ಬೆಳಗ್ಗೆ ಹಣ ಕಂಪನಿಯ ಹಿಂಭಾಗದ ಜಮೀನಿನ ಬೇಲಿ ಪಕ್ಕದಲ್ಲಿ ಹಣ ಪತ್ತೆಯಾಗಿದೆ. ಕಳ್ಳತನ ಮಾಡಿದವರೆ ತಂದು ಹಾಕಿದ್ದಾರಾ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಸ್ಥಳಕ್ಕೆ ಚಳ್ಳಕೆರೆ ಸಿಪಿಐ ಮಂಜುನಾಥ್ ನಲವಾಗಲು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.