110 ಕೆ.ವಿ. ಸಬ್‌ಸ್ಟೇಷನ್‌: ಸರ್ವೆ ವರದಿ ಸಲ್ಲಿಕೆ

ಮಂಜೂರಾಗಿ 18 ವರ್ಷ; ಅರಣ್ಯ, ಆಕ್ಷೇಪಣೆ ಸಮಸ್ಯೆಯಿಂದ ಮೊಟಕ

Team Udayavani, Nov 25, 2019, 5:01 AM IST

POWER-s

ಸಾಂದರ್ಭಿಕ ಚಿತ್ರ.

ಸುಳ್ಯ: ಬಹು ನಿರೀಕ್ಷಿತ 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಸಂಬಂಧಿಸಿ ವಿದ್ಯುತ್‌ ಪ್ರಸರಣ ಮಾರ್ಗ ಹಾದು ಹೋಗುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸರ್ವೆ ಪೂರ್ಣಗೊಳಿಸಿ ಡಿಸಿಎಫ್‌ಗೆ ವರದಿ ಸಲ್ಲಿಸಿದೆ.ಪುತ್ತೂರು ಮತ್ತು ಸುಳ್ಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ವರದಿ ಪರಿಶೀಲನೆ ಬಳಿಕ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಕೆಪಿಟಿಸಿಎಲ್‌ ಬೇಡಿಕೆ
ಅರಣ್ಯ ಇಲಾಖೆ ಸರ್ವೆ
ಪುತ್ತೂರು – ಕುಂಬ್ರ – ಮಾಡಾವು ಮೂಲಕ ಸುಳ್ಯಕ್ಕೆ ಹಾದು ಹೋಗುವ 110 ಸಬ್‌ಸ್ಟೇಷನ್‌ ಲೈನ್‌ ಮಾರ್ಗ ಅನುಷ್ಠಾನಕ್ಕೆ ಅರಣ್ಯ ಪ್ರದೇಶದೊಳಗೆ ಜಾಗ ನೀಡುವಂತೆ ಕೆಪಿಟಿಸಿಎಲ್‌ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಿತು. ಇದರ ಅನ್ವಯ ಉಭಯ ತಾಲೂಕಿನ ಅರಣ್ಯ ಇಲಾಖೆ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಿ ಲೈನ್‌ ಹಾದು ಹೋಗುವ ಮಾರ್ಗದಲ್ಲಿ ತೆರವಾಗುವ ಮರ, ಬಳಕೆಯಾಗುವ ಜಾಗದ ವಿವರ ಸಂಗ್ರಹಿಸಿ ಡಿಸಿಎಫ್‌ಗೆ ಸಲ್ಲಿಸಿದೆ. ಅಲ್ಲಿ ಪರಿಶೀಲನೆ ಬಳಿಕ ಒಪ್ಪಿಗೆ ದೊರೆಯಬೇಕು. ಆ ಬಳಿಕ ಕೆಪಿಟಿಸಿಎಲ್‌ಗೆ ಆನ್‌ಲೈನ್‌ ಮೂಲಕ ಪಟ್ಟಿ ಕಳುಹಿಸಲಾಗುತ್ತದೆ. ಎರಡು ಕಡೆ ಸಮ್ಮತಿ ವ್ಯಕ್ತವಾದರೆ ಸರಕಾರದ ಹಂತದಲ್ಲಿ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ.

ಪರ್ಯಾಯ ಭೂಮಿ
ಬೇಡಿಕೆಗೆ ವಿನಾಯಿತಿ
110 ಕೆ.ವಿ. ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದಲ್ಲಿ 7.723 ಹೆಕ್ಟೇರ್‌ ಅರಣ್ಯ ಭೂಮಿ ಬಿಡುಗಡೆಗಾಗಿ ವಿದ್ಯುತ್‌ ಪ್ರಸರಣ ನಿಗಮ 2017 ಮಾರ್ಚ್‌ನಲ್ಲಿ ಬೇಡಿಕೆ ಸಲ್ಲಿಸಿತ್ತು. ಆದರೆ ಪ್ರಸ್ತಾವನೆ ಪರಿಶೀಲಿಸಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಭೂಮಿ ಬಿಡುಗಡೆಗಾಗಿ ಅರಣ್ಯ ಸಂರಕ್ಷಣೆ ಕಾಯ್ದೆ 1980ರಂತೆ 20 ಎಕರೆ ಭೂಮಿಯನ್ನು ಪರ್ಯಾಯ ಅರಣ್ಯೀಕರಣಕ್ಕೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲೂಕಿನ 65 ಎಕ್ರೆ 7 ಗುಂಟೆಯಲ್ಲಿ 20 ಎಕ್ರೆ ಅರಣ್ಯೀಕರಣಕ್ಕೆ ಸಂಬಂಧಿಸಿ ಹಸ್ತಾಂತರಿಸಲು ಪ್ರಕ್ರಿಯೆ ನಡೆಯಿತು. ಆದರೆ ಅರಣ್ಯ ಪ್ರದೇಶದಲ್ಲಿ ಲೈನ್‌ ಮಾರ್ಗ ಮಾತ್ರ ಹಾದು ಹೋಗುವುದಿದ್ದರೆ ಅರಣ್ಯ ಸಂರಕ್ಷಣ ಕಾಯಿದೆ ಅನ್ವಯ ಪರ್ಯಾಯ ಜಾಗ ನೀಡಬೇಕಿಲ್ಲ ಎಂಬ ಅಂಶ ಉಲ್ಲೇಖವಾದ ಕಾರಣ ಅರಣ್ಯ ಇಲಾಖೆ ಪರ್ಯಾಯ ಜಾಗ ಬೇಡಿಕೆ ಕೈಬಿಟ್ಟಿತ್ತು. ಯೋಜನೆ ಕಾರ್ಯಗತಗೊಳ್ಳುವ ವೇಳೆ ತೆರವು ಆಗುವ ಮರಗಳಿಗೆ ಪರ್ಯಾಯವಾಗಿ ಅರಣ್ಯ ಇಲಾಖೆ ಸೂಚಿಸುವ ಡಿ ಗ್ರೇಡ್‌ ಅರಣ್ಯದಲ್ಲಿ ಅರಣ್ಯೀಕರಣಕ್ಕೆ ತಗಲುವ ಅಭಿವೃದ್ಧಿ ಹಣವನ್ನು ಕೆಪಿಟಿಸಿಎಲ್‌ ಪಾವತಿ ಮಾಡಬೇಕು.

ಎರಡು ಆಕ್ಷೇಪಣೆ ಅರ್ಜಿ
ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿದ 38 ಆಕ್ಷೇಪಣೆ ಅರ್ಜಿಗಳ ಪೈಕಿ 36 ವಿಚಾರಣೆ ಪೂರ್ಣಗೊಂಡು, 2 ಅರ್ಜಿಗಳು ವಿಲೇ ವಾರಿಗೆ ಬಾಕಿ ಉಳಿದಿವೆ. ಹೈಕೋರ್ಟ್‌ಗೆ ಸಲ್ಲಿಸಿದ ಎರಡು ಅರ್ಜಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ 23 ಮತ್ತು ಪುತ್ತೂರು, ಸುಳ್ಯ ಮಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ದಾಖ ಲಾಗಿದ್ದ 11 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಇತ್ಯರ್ಥಗೊಳಿಸಲಾಗಿದೆ.

ವಿದ್ಯುತ್‌ ಲೈನ್‌ ಮಾರ್ಗದಲ್ಲಿ ಏನು ಸಮಸ್ಯೆ?
18 ವರ್ಷಗಳ ಹಿಂದೆ ಮಂಜೂರುಗೊಂಡಿದ್ದ ಸುಳ್ಯ 110 ಕೆ.ವಿ. ಸಬ್‌ಸ್ಟೇಷನ್‌ ಕಾಮಗಾರಿಗೆ ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದಲ್ಲಿನ ಆಕ್ಷೇಪಣೆ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯೊಳಗಿನ ತೊಡಕು ಅನುಷ್ಠಾನಕ್ಕೆ ಅಡ್ಡಿಯಾಗಿತ್ತು. ಪ್ರಸರಣ ಮಾರ್ಗ ನಿರ್ಮಾಣಕ್ಕೆ ಸರ್ವೆ ಸಂದರ್ಭದಲ್ಲಿ ಭೂ ಮಾಲಕರು ವಿರೋಧ ಸೂಚಿಸಿದ್ದರಿಂದ ಬದಲಿ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಕಾರ್ಯಸಾಧುವಾಗದ ಕಾರಣ ಹಳೆ ಮಾರ್ಗದಲ್ಲೇ ಲೈನ್‌ ಎಳೆಯಲು ನಿರ್ಧರಿಸಲಾಯಿತು. ಆದರೆ ಲೈನ್‌ ಹಾದು ಹೋಗುವ ಸ್ಥಳದ ಹಕ್ಕುದಾರರು ನ್ಯಾಯಾಲಯಗಳಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಅತಿ ಹೆಚ್ಚು ಅರಣ್ಯ ಪ್ರದೇಶದ ವ್ಯಾಪ್ತಿ ಸೇರುವ ಕಾರಣ ಇಲಾಖೆಯೂ ಒಪ್ಪಿಗೆ ನೀಡಿರಲಿಲ್ಲ. ಪರ್ಯಾಯ ಜಮೀನು ನೀಡಿದ ಬಳಿಕ ಜಾಗ ಬಿಟ್ಟು ಕೊಡುವ ವರದಿ ನೀಡಿತು. ಹೀಗಾಗಿ ಈ ಯೋಜನೆ ಸರ್ವೆ ಹಂತದಲ್ಲಿ ಸ್ಥಗಿತವಾಯಿತು.

ವೇಗ ನೀಡಲು ಸೂಚನೆ
ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದ ಸರ್ವೆ ಪೂರ್ಣ ಗೊಂಡಿದೆ. ಮುಂದಿನ ಪ್ರಕ್ರಿಯೆಗೆ ವೇಗ ನೀಡಲು ಸೂಚಿಸಲಾಗಿದೆ.
– ಎಸ್‌. ಅಂಗಾರ, ಶಾಸಕ, ಸುಳ್ಯ

ಬದಲಿ ಜಾಗಕ್ಕೆ ವಿನಾಯಿತಿ
ಕೆಪಿಟಿಸಿಎಲ್‌ ಸಲ್ಲಿಸಿದ ಬೇಡಿಕೆ ಅನುಸಾರ ಅರಣ್ಯ ಇಲಾಖೆ ಲೈನ್‌ ಹಾದುಹೋಗುವ ಮಾರ್ಗದಲ್ಲಿ ಸರ್ವೆ ನಡೆಸಿ ವರದಿ ತಯಾರಿಸಿದೆ. ಅರಣ್ಯ ಇಲಾಖೆಯ ಡಿಸಿಎಫ್‌ ಹಂತದಲ್ಲಿ ಪರಿಶೀಲನೆ ಬಳಿಕ ಒಪ್ಪಿಗೆ ಆಗಿ ಮತ್ತೆ ಕೆಪಿಟಿಸಿಎಲ್‌ಗೆ ಕಳುಹಿಸಬೇಕಿದೆ. ಈ ಹಿಂದೆ ಅರಣ್ಯ ಇಲಾಖೆ ಅರಣ್ಯೀಕರಣಕ್ಕೆ ಪರ್ಯಾಯ ಜಾಗ ಬೇಡಿಕೆ ಸಲ್ಲಿಸಿದ ಪರಿಣಾಮ ಬದಲಿ ಜಾಗ ಗುರುತಿಸಿದ್ದೆವು. ಆದರೆ ಅರಣ್ಯ ಕಾಯಿದೆಯಲ್ಲಿ ವಿನಾಯಿತಿ ಅವ ಕಾಶ ಇರುವ ಕಾರಣ ಬದಲಿ ಜಾಗ ಬೇಡಿಕೆಯನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ.
– ಸತೀಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌
ಕೆಪಿಟಿಸಿಎಲ್‌, ಮಂಗಳೂರು

ವರದಿ ಸಲ್ಲಿಕೆ
ಪುತ್ತೂರು, ಸುಳ್ಯ ವ್ಯಾಪ್ತಿಯ ಲೈನ್‌ ಮಾರ್ಗ ಹಾದು ಹೋಗುವ ಅರಣ್ಯ ಭಾಗದಲ್ಲಿ ಆಯಾ ವ್ಯಾಪ್ತಿಗೆ ಒಳಪಟ್ಟ ಅರಣ್ಯ ಅಧಿ ಕಾರಿಗಳು ಸರ್ವೆ ನಡೆಸಿದ್ದಾರೆ. ಆ ವರದಿಯನ್ನು ಡಿಸಿಎಫ್‌ ಅವರಿಗೆ ಸಲ್ಲಿಸಲಾಗಿದೆ.
– ಮಂಜುನಾಥ, ವಲಯ ಅರಣ್ಯಾಧಿಕಾರಿ, ಸುಳ್ಯ

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.