ನರೇಗಾ ಯೋಜನೆಯಡಿಯಲ್ಲಿ 46 ಕಾಮಗಾರಿಗಳು

ಕಂದಾವರ ಗ್ರಾ.ಪಂ. ಸಾಮಾಜಿಕ ಪರಿಶೋಧನ ಸಭೆ

Team Udayavani, Jun 13, 2019, 5:54 AM IST

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಂದಾವರ , ಕೊಳಂಬೆ ಹಾಗೂ ಅದ್ಯಪಾಡಿ ಗ್ರಾಮಗಳ 2018-19ನೇ ಸಾಲಿನ ದ್ವಿತೀಯ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯು ಸಭಾಭವನದಲ್ಲಿ ಬುಧ ವಾರ ಜರ ಗಿತು.
ನೋಡೆಲ್‌ ಅಧಿಕಾರಿ ಮಂಗಳೂರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ದ್ವಿತೀಯ ಹಂತದ ನರೇಗಾ ಯೋಜನೆ ಯಲ್ಲಿ 11,29,236 ರೂಪಾಯಿ ಮೊತ್ತದ 46 ಕಾಮಗಾರಿಗಳು ನಡೆದಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.

6 ತಿಂಗಳ ಅವಧಿಯಲ್ಲಿ ತಲಾ ಒಂದು ಅಂಗನವಾಡಿ, ಸಂಜೀವಿನಿ ಶೆಡ್‌, ಎರೆಹುಳ ತೊಟ್ಟಿ , ಮಳೆ ನೀರಿನ ಕೊಯ್ಲ, ತೋಡಿನ ಹೊಳೆತ್ತುವುದು, 4 ಬಸವ ವಸತಿ ಮನೆ, 22 ಶೌಚಾಲಯ, ದನದ ಹಟ್ಟಿ 3, ಪೌಷ್ಟಿಕ ತೋಟ 3,ಬಾವಿ 7, ಇಂಗುಗುಂಡಿ 2 ಒಟ್ಟು 46 ಕಾಮಗಾರಿಗಳು ನಡೆದಿವೆ. ಆಕುಶಲ ಕೂಲಿ ಮೊತ್ತ 5,61,771 ರೂಪಾಯಿ, ಸಾಮಾಗ್ರಿ ಮೊತ್ತ 5,67,465 ರೂಪಾಯಿ ಒಟ್ಟು 11,29,236 ರೂಪಾಯಿ ಮೊತ್ತದ ಕಾಮಗಾರಿಗಳು ನಡೆದಿವೆ. ಈ ಕಾಮಗಾರಿಗೆ ಒಟ್ಟು 2,169 ಮಾನವದಿನಗಳನ್ನು ವ್ಯಯಿಸಲಾಗಿದೆ ಎಂದು ಸಭೆ ಯಲ್ಲಿ ಮಾಹಿತಿ ನೀಡಲಾಯಿತು.

ಸ್ವಾವ ಲಂಬನೆ ಬದುಕು ನಮ್ಮದಾಗಲಿ
ಯೋಜನೆಯ ತಾಲೂಕು ಸಂಯೋಜಕಿ ಧನಲಕ್ಷ್ಮೀ ಅವರು ಮಾತನಾಡಿ,ನರೇಗಾ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಬಡವರ ಉದ್ಧಾ ರದ ಉದ್ದೇಶ ಈ ಯೋಜನೆದಾಗಿದೆ. ಗ್ರಾಮ ಗಳಲ್ಲಿ ಸಮಸ್ಯೆ ಕಡಿಮೆಯಾಗಿ ಜನರು ಸ್ವಾವ ಲಂಬನೆ ಬದುಕು ಹೊಂದ ಬೇಕು ಎಂದರು.

ಗ್ರಾ.ಪಂ. ನಲ್ಲಿ ಒಟ್ಟು 3,354 ಕುಟುಂಬಗಳಿವೆ. 11,028 ಜನಸಂಖ್ಯೆ. ಸಕ್ರಿಯ ಉದ್ಯೋಗ ಚೀಟಿಗಳ ಸಂಖ್ಯೆ 405, ಒಟ್ಟು ನೊಂದಣಿಯಾಗಿರುವ ಕುಟುಂಬ 705ಎಂದು ಸಂಯೋಜಕಿ ಧನಲಕ್ಷ್ಮಿ ಸಭೆಗೆ ಮಾಹಿತಿ ನೀಡಿದರು.

ಅದ್ಯಪಾಡಿ ಸಂಜೀವಿನಿ ಶೆಡ್ಡೆ ಕಾಮ ಗಾರಿ ಪ್ರಗತಿಯಲ್ಲಿದ್ದು ತಾಂತ್ರಿಕ ಅಳತೆ ಪ್ರಕಾರ 1,09,560 ರೂಪಾಯಿ ಪಾವತಿಯಾಗ ಬೇಕಿತ್ತು. ಅದರೆ 1,44,781 ರೂಪಾಯಿ ಪಾವತಿ ಯಾಗಿದೆ. ಹೆಚ್ಚುವರಿ 35,221 ರೂ. ಪಾವತಿಯಾಗಿದೆ ಎಂದು ಇದನ್ನು ವಸೂಲಾತಿಗೆ ಬರೆಯಬೇಕೆ ಎಂದು ಸಭೆ ಹೇಳಲಾಯಿತು. ಸಂಜೀವಿನಿ ಶೆಡ್ಡೆ ಕಾಮ ಗಾರಿ ಪ್ರಗತಿಯಲ್ಲಿರುವುದರಿಂದ ಅದನ್ನು ಅಪೇಕ್ಷಣೆಯಲ್ಲಿಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಂದಾವರ ಗ್ರಾ. ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಪಾಧ್ಯಕ್ಷ ದೇವೇಂದ್ರ, ಯೋಜನೆಯ ಎಂಜಿನಿಯರ್‌ ಮಮತಾ ಉಪಸ್ಥಿತರಿದ್ದರು.ಪಿಡಿಒ ರೋಹಿಣಿ ಸ್ವಾಗತಿಸಿ, ಯೋಜನೆಯ ಸಂಪನ್ಮೂಲ ವ್ಯಕ್ತಿ ರೇಖಾಮಣಿ ನಿರ್ವಹಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ