56 ಅಂಕ ಬಂದಿದ್ದರೂ ಅನುತ್ತೀರ್ಣ!
ಮೌಲ್ಯಮಾಪಕರ ಎಡವಟ್ಟು
Team Udayavani, May 5, 2019, 6:00 AM IST
ಕಾಣಿಯೂರು: ಮೌಲ್ಯ ಮಾಪಕರ ಎಡವಟ್ಟಿನಿಂದಾಗಿ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಯೋರ್ವಳು ಅನುತ್ತೀರ್ಣಳಾದ ಪ್ರಕರಣ ಬೆಳಕಿಗೆ ಬಂದಿದೆ.
ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಎಸ್. ಅವರಿಗೆ 498 ಬಂದಿತ್ತು. ವಿಜ್ಞಾನ ವಿಷಯದಲ್ಲಿ 19 ಅಂಕ ಎಂದು ಪ್ರಕಟಿಸಲಾಗಿತ್ತು.
ಪೋಷಕರು ಅನುಮಾನಗೊಂಡು ಬಳಿಕ ವಿಜ್ಞಾನ ಪತ್ರಿಕೆಯ ಛಾಯಾಪ್ರತಿ ತರಿಸಿ ನೋಡಿದಾಗ ವಿದ್ಯಾರ್ಥಿನಿಗೆ 56 ಅಂಕ ಬಂದಿದೆ. ಆದರೆ ಆಕೆ ಬರೆದ ಉತ್ತರ ಪತ್ರಿಕೆಯ ಸಂಖ್ಯೆ 19 ಆಗಿದ್ದು, ಅದನ್ನೇ ಅಂಕ ಎಂದು ನಮೂದಿಸಿರುವ ಸಾಧ್ಯತೆ ಇದೆ.
ಉತ್ತರ ಸಂಕಲನವೂ ಎಡವಟ್ಟು!
ವಿಜ್ಞಾನ ಉತ್ತರ ಪತ್ರಿಕೆಯಲ್ಲಿ ಅಂಕಗಳನ್ನು ಕೂಡಿಸಿದಾಗ 62 ಅಂಕ ಗಳು ಬರುತ್ತಿದ್ದು, ಮೌಲ್ಯಮಾಪಕರು ಇಲ್ಲೂ ಎಡವಟ್ಟು ಮಾಡಿದ್ದಾರೆ. ಇದೇ ರೀತಿ ಎಡವಟ್ಟಾಗಿ ಹಲವು ವಿದ್ಯಾರ್ಥಿಗಳಿಗೆ ಅಂಕ ಕಡಿತವಾಗಿರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ. ಈ ವ್ಯತಿರಿಕ್ತ ಫಲಿತಾಂಶದಿಂದಾಗಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸತತ 17ನೇ ಬಾರಿ ಶೇ.100 ಫಲಿತಾಂಶ ತಪ್ಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ