ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ


Team Udayavani, Aug 18, 2022, 8:27 AM IST

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಮಂಗಳೂರು : ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣ ಗುರುತಿನ ಚೀಟಿ (ಎಪಿಕ್‌)ಗೆ ಆಧಾರ್‌ ಲಿಂಕ್‌ ಮಾಡುವ ಕಾರ್ಯವನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಬುಧವಾರ ಹಮ್ಮಿಕೊಂಡಿದ್ದ ಸಭೆ ಹಾಗೂ ವೀಡಿಯೋ ಸಂವಾದದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸರಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರು ಎಪಿಕ್‌ ಕಾರ್ಡ್‌ಗೆ ಆಧಾರ್‌ ಅಥವಾ ಅದನ್ನು ಹೊರತು ಪಡಿಸಿ ನಿಗದಿ ಪಡಿಸಿದ ಒಟ್ಟು 11 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಜೋಡಿಸಬೇಕು. ಈ ಪ್ರಕ್ರಿಯೆ ತಿಳಿಸಿಕೊಡಲು ಇಲಾಖೆಗಳ ಅಧಿಕಾರಿಗಳು ಸಿಬಂದಿಗೆ ತಿಳಿಸಿಕೊಡಲು ತಮ್ಮ ಕಚೇರಿಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಕೂಡಲೇ ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಅದನ್ನು ಮಾಡದಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಹಕಾರಿ ಸಂಘಗಳ ಸೊಸೈಟಿಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಬರುವ ಸದಸ್ಯರಿಗೆ, ಅಬಕಾರಿ ಉಪ ಆಯುಕ್ತರು ತಮ್ಮ ಅಧೀನದಲ್ಲಿರುವ ವೈನ್‌ಶಾಪ್‌ಗ್ಳ ಮಾಲಕರು, ಸಿಬಂದಿಗೆ, ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ ಮಾಲಕರು, ಚಾಲಕರು, ನಿರ್ವಾಹಕರು, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಎಲ್ಲ ಸರಕಾರಿ, ಖಾಸಗಿ, ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಎಪಿಕ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡುವ ಕಾರ್ಯಕ್ಕೆ ವೇಗ ನೀಡುವಂತೆ ಸೂಚಿಸಿದರು. ಅದೇ ರೀತಿ ವಿವಿಧ ಇಲಾಖೆಗಳು, ನಿಗಮಗಳು, ಸಿಬಂದಿಗೆ ಎಪಿಕ್‌ ಕಾರ್ಡ್‌ಗೆ ಆಧಾರ್‌ ಜೋಡಣೆ ಮಾಡುವ ಕಾರ್ಯ ದಲ್ಲಿ ಕೂಡಲೇ ತೊಡಗಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ಮದನ್‌ ಮೋಹನ್‌, ಗಿರೀಶ್‌ ನಂದನ್‌ ಇದ್ದರು.

ಆ. 21ಕ್ಕೆ ಮಿಂಚಿನ ನೋಂದಣಿ
ಆ. 21ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಎಲ್ಲ ಬಿಎಲ್‌ಒಗಳು ಮತಗಟ್ಟೆಯಲ್ಲಿ ಹಾಜರಿದ್ದು, ಮತಗಟ್ಟೆ ಅಧಿಕಾರಿಗಳು, ಮೆಲ್ವಿಚಾರಕರು, ಮತಗಟ್ಟೆ ಏಜೆಂಟರೊಂದಿಗೆ 6ಬಿ ಸಂಬಂಧಿಸಿದಂತೆ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಎಪಿಕ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡುವ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಂಡು ಮತದಾರರನ್ನು ನೋಂದಾಯಿಸುವಂತೆ ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ : ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಪಕ್ಷ ಪ್ರತಿನಿಧಿಗಳಿಗೆ ಸಲಹೆ
ಆಧಾರ್‌ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಜೋಡಿಸುವ ಪ್ರಕ್ರಿಯೆಯಲ್ಲಿ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ದೃಢೀಕರಿಸಲು ಸ್ವಯಂ ಪ್ರೇರಿತರಾಗಿ ವೋಟರ್‌ ಹೆಲ್ಪ್ಲೈನ್‌ ಆ್ಯಪ್‌ ಮೂಲಕ ಆನ್‌ಲೈನ್‌ ಮೂಲಕ ಆಧಾರ್‌ ಸಂಖ್ಯೆಯನ್ನು ಜೋಡಿಸುವಂತೆ ಕೇಂದ್ರ ಸರಕಾರವು ಆದೇಶಿಸಿದೆ ಎಂದರು.

ಎಲ್ಲ ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೆ ಬಿಎಲ್‌ಎಗಳನ್ನು ನೇಮಕ ಮಾಡಬೇಕು, ಬಿಎಲ್‌ಎಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ಒಂದು ವೇಳೆ ಪಟ್ಟಿಯಲ್ಲಿರುವ ಮತದಾರರು ಮೃತರಾಗಿದ್ದರೆ ಅಥವಾ ವಲಸೆ ಹೋಗಿದ್ದರೆ, ಅಂಥವರ ಮಾಹಿತಿಯನ್ನು ಬಿಎಲ್‌ಒಗಳಿಗೆ ನೀಡಬೇಕು, 18 ವಷ‌ì ಮೇಲ್ಪಟ್ಟ ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇಪರ್ಡೆಯಾಗಿರುವ ಬಗ್ಗೆ ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಸದ್ಯಸರ ಹೆಸರು ಒಂದೇ ಕಡೆ ಬರುವಂತೆ ನೋಡಿಕೊಳ್ಳಬೇಕು. ಎಲ್ಲ ಬಿಎಲ್‌ಎಗಳು ತಮ್ಮ ವ್ಯಾಪ್ತಿಯ ಅರ್ಹ ಅಂಗವಿಕಲರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ ಪರಿಶೀಲಿಸಬೇಕು. ಎಲ್ಲ ಮತದಾರರಿಗೆ ಎಪಿಕ್‌ ಕಾರ್ಡ್‌ ನೀಡಿರುವ ಬಗ್ಗೆ ಖಚಿತ ಪಡಿಸಿ ಕೊಳ್ಳಬೇಕು. ತೃತೀಯಲಿಂಗಿ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿ ಕೊಳ್ಳಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

1-ADSAD

ಯುವಕನಾದ ಸಿದ್ದರಾಮಯ್ಯ ..! ; ರಾಹುಲ್ ಜತೆ ರೇಸ್ ….!; ವಿಡಿಯೋ ವೈರಲ್

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

fadnavis

ದಸರಾ ರ‍್ಯಾಲಿಯಲ್ಲಿ ಶಿಂಧೆ ‘ನಿಜವಾದ ಶಿವಸೇನೆ’ ತೋರಿಸಿದ್ದಾರೆ: ಫಡ್ನವಿಸ್

america

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಕೊಲೆ : ಕೊರಿಯಾ ಮೂಲದ ವಿದ್ಯಾರ್ಥಿಯ ಬಂಧನ

1—dsadsadsad

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ ಹಿಂದಿ ಟ್ರೈಲರ್ ರೆಡಿ

dr-sudhakar

ಡಿಸೆಂಬರ್‌ 15 ರ ವೇಳೆಗೆ ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್‌ʼ ಕಾರ್ಯಾರಂಭ: ಡಾ.ಕೆ.ಸುಧಾಕರ್‌

1-asdada

ಪಠಾಣ್‌ಕೋಟ್: ಎಲ್ಲೆಡೆ ಸಂಸದ ಸನ್ನಿ ಡಿಯೋಲ್ ನಾಪತ್ತೆ ಪೋಸ್ಟರ್ ಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

ತ್ಯಾಜ್ಯ ಸಂಗ್ರಹಿಸುವ 12 ಕುಟುಂಬಗಳ ಸೂರಿಗೆ ಸೋಲಾರ್‌ ಲೈಟ್‌

ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

1-ADSAD

ಯುವಕನಾದ ಸಿದ್ದರಾಮಯ್ಯ ..! ; ರಾಹುಲ್ ಜತೆ ರೇಸ್ ….!; ವಿಡಿಯೋ ವೈರಲ್

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

fadnavis

ದಸರಾ ರ‍್ಯಾಲಿಯಲ್ಲಿ ಶಿಂಧೆ ‘ನಿಜವಾದ ಶಿವಸೇನೆ’ ತೋರಿಸಿದ್ದಾರೆ: ಫಡ್ನವಿಸ್

america

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಕೊಲೆ : ಕೊರಿಯಾ ಮೂಲದ ವಿದ್ಯಾರ್ಥಿಯ ಬಂಧನ

1—dsadsadsad

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ ಹಿಂದಿ ಟ್ರೈಲರ್ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.