Udayavni Special

ಕರಾವಳಿಯಾದ್ಯಂತ ಅಂಗಾರಕ ಸಂಕಷ್ಟಿ ಆಚರಣೆ


Team Udayavani, Sep 18, 2019, 4:25 AM IST

e-43

ಅಂಗಾರಕ ಸಂಕಷ್ಟಿ ಸಂಭ್ರಮದ ಅಂಗವಾಗಿ ಶರವು ದೇಗುಲವನ್ನು ಭಕ್ತರು ಒಟ್ಟು ಸೇರಿ 18 ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು.

ಮಂಗಳೂರು/ಉಡುಪಿ: ಕರಾವಳಿಯ ಗಣಪತಿ ಹಾಗೂ ಇತರ ಪ್ರಮುಖ ದೇವಾಲಯಗಳಲ್ಲಿ ಅಂಗಾರಕ ಸಂಕಷ್ಟಿ ಮಂಗಳವಾರ ನಡೆಯಿತು. ಸಾವಿರಾರು ಮಂದಿ ಸಂಕಷ್ಟಿ ಉಪವಾಸ ಕುಳಿತು ದೇವರ ದರ್ಶನ ಪಡೆದು ಕೃತಾರ್ಥರಾದರು.

ಶರವು ಮಹಾಗಣಪತಿ ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಪತಿ ಹವನ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಇಡೀ ದಿನ 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ ವೇಳೆ 12.30ಕ್ಕೆ ಪ್ರಸಾದ ವಿತರಣೆ ಆರಂಭವಾಗಿದ್ದು, 2.30ರ ತನಕ ಸರತಿ ಸಾಲು ಮುಂದುವರಿದಿತ್ತು.

ಶರವು ದೇವಳದ ದೇಗುಲದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮತ್ತು ಸುದೇಶ್‌ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 11.30ರಿಂದ ಮಹಾಗಣಪತಿ ಯಾಗ ಪೂರ್ಣಾಹುತಿ, 12ಕ್ಕೆ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆಯಿತು. ಈ ಸಂದರ್ಭ ಎಸ್‌. ರಾಹುಲ್‌ ಶಾಸ್ತ್ರಿ, ವಿಠಲ್‌ ಭಟ್‌, ಗಣೇಶ್‌ ಭಟ್‌, ಶಶೀಂದ್ರ ಭಟ್‌ ಉಪಸ್ಥಿತರಿದ್ದರು.

ಅಂಗಾರಕ ಸಂಕಷ್ಟಿ ಸಂಭ್ರಮದ ಅಂಗವಾಗಿ ಶರವು ಕ್ಷೇತ್ರದ ಇಡೀ ದೇಗುಲವನ್ನು ಭಕ್ತರು ಒಟ್ಟು ಸೇರಿ 18ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು.

ಆನೆಗುಡ್ಡೆಯಲ್ಲೂ ಭಕ್ತರ ಗಡಣ
ಕುಂದಾಪುರ ಸಮೀಪದ ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 20,000 ಭಕ್ತರು ಭೇಟಿ ನೀಡಿದರು. ಸುಮಾರು 4,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಅರ್ಚಕ ಚಂದ್ರಕಾಂತ ಉಪಾಧ್ಯಾಯ ಮತ್ತು ಸಹೋದರರು, ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರನಾಳಿಕೇರ ಗಣಪತಿ ಯಾಗ ನಡೆಯಿತು. ಸುಮಾರು 8,000 ಪಂಚಗಜ್ಜಾಯ ಪ್ಯಾಕೇಟ್‌ಗಳನ್ನು ಭಕ್ತರು ಕೊಂಡುಕೊಂಡರು.

ಮಂಗಳೂರಿನ ಮಣ್ಣಗುಡ್ಡೆ ಹರಿದಾಸ ಲೇನ್‌ನಲ್ಲಿರುವ ನವದುರ್ಗಾ ಮಹಾಗಣಪತಿ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನ, ಉರ್ವ ಮಹಾಗಣಪತಿ, ಕುದ್ರೋಳಿ ಗೋಕರ್ಣನಾಥ, ಗಣೇಶಪುರ ಮಹಾಗಣಪತಿ, ಮರೋಳಿ ಸೂರ್ಯನಾರಾಯಣ, ಬೋಳೂರು ಮಾರಿಯಮ್ಮ ದೇವಸ್ಥಾನ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಹಟ್ಟಿಯಂಗಡಿ, ಉದ್ಯಾವರ, ಪಡುಬಿದ್ರಿ, ಉಪ್ಪೂರು, ಬಾರಕೂರು ಬಟ್ಟೆ ವಿನಾಯಕ ಸಹಿತ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಅಂಗಾರಕ ಸಂಕಷ್ಟಿ ವ್ರತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಸಹಜ ಸ್ವಿಂಗ್‌ ಸಾಮರ್ಥ್ಯದ ಡ್ಯೂಕ್‌ ಚೆಂಡುಗಳು

ಸಹಜ ಸ್ವಿಂಗ್‌ ಸಾಮರ್ಥ್ಯದ ಡ್ಯೂಕ್‌ ಚೆಂಡುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ನರ್ಸ್‌-ವೈದ್ಯರಿಂದ ಸದಾ ಆರೈಕೆ; ಸಮಯಕ್ಕೆ ಆಹಾರ

ನರ್ಸ್‌-ವೈದ್ಯರಿಂದ ಸದಾ ಆರೈಕೆ; ಸಮಯಕ್ಕೆ ಆಹಾರ

ಕರಾವಳಿಗೆ ಶೀಘ್ರ ಬರಲಿದೆ ಎನ್‌ಡಿಆರ್‌ಎಫ್‌

ಕರಾವಳಿಗೆ ಶೀಘ್ರ ಬರಲಿದೆ ಎನ್‌ಡಿಆರ್‌ಎಫ್‌

ಮಂಗಳೂರು: ಡ್ರೈವಿಂಗ್‌ ಲೈಸೆನ್ಸ್‌ ಸೇವೆ ಆರಂಭ

ಮಂಗಳೂರು: ಡ್ರೈವಿಂಗ್‌ ಲೈಸೆನ್ಸ್‌ ಸೇವೆ ಆರಂಭ

ಬಜಪೆ: ಸ್ವಯಂಪ್ರೇರಿತ ಬಂದ್‌

ಬಜಪೆ: ಸ್ವಯಂಪ್ರೇರಿತ ಬಂದ್‌

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

palike-vyapti

ಪಾಲಿಕೆ ವ್ಯಾಪ್ತಿ ಆಸ್ತಿ ತೆರಿಗೆ ಶೇ.5 ರಿಯಾಯಿತಿ

gB-TDY-1

ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳದಿಂದ ಕಲ್ಯಾಣಕ್ಕೆ ಅನುಕೂಲ

virudda krama

ಕಳಪೆ ಯಂತ್ರೋಪಕರಣ ವಿತರಕರ ವಿರುದ್ಧ ಕ್ರಮ

manadagati

ಕೋವಿಡ್‌-19ರಿಂದಾಗಿ ಅಭಿವೃದ್ಧಿ ಮಂದಗತಿ

ಲಾಕ್‌ಡೌನ್‌: ಕಬಡ್ಡಿ ಸ್ಟಾರ್‌ ಅನೂಪ್‌ ಪೊಲೀಸ್‌ ಡ್ಯೂಟಿ

ಲಾಕ್‌ಡೌನ್‌: ಕಬಡ್ಡಿ ಸ್ಟಾರ್‌ ಅನೂಪ್‌ ಪೊಲೀಸ್‌ ಡ್ಯೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.