ಬಂಟ್ವಾಳಬೈಪಾಸ್‌ ಜಂಕ್ಷನ್‌:ವಿಸ್ತರಣೆಗೊಂಡರೆಅಭಿವೃದ್ಧಿಯದಿಕ್ಕೇಬದಲು

Team Udayavani, Aug 22, 2018, 11:13 AM IST

22-agust-3.jpg

ಬಂಟ್ಟಾಳ: ಆಳರಸರ ಕಾಲದಲ್ಲೇ ಆಧುನಿಕ ಬಂಟ್ವಾಳ ವ್ಯವಹಾರದ ಕೇಂದ್ರ ಸ್ಥಾನವಾಗಿತ್ತು. ಬಂಟ್ವಾಳ ಪೇಟೆಯ ಜಂಕ್ಷನ್‌ 4 ದಶಕಗಳ ಹಿಂದೆ ವ್ಯಾವಹಾರಿಕ ಕೇಂದ್ರವಾಗಿತ್ತು. ಈಗ ಕೊಂಚ ಮಸುಕು ಬಡಿದಿದೆ. ಇಲ್ಲಿಗೆ ಬೈಪಾಸ್‌ ರಸ್ತೆ ನಿರ್ಮಾಣದ ಬಳಿಕ ಪೇಟೆ ವ್ಯವಹಾರ ಕಡಿಮೆಯಾಗಿದ್ದು ನಿಜ.
ಅದು ಕ್ರಮೇಣ ಬಿ.ಸಿ. ರೋಡ್‌ ನಗರ ಸಹಿತ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆಗೊಂಡಿತು. ಈಗ ಅದೇ ಜಂಕ್ಷನ್‌ಗೆ ಜೀವ ತುಂಬುವ ಕಾಲ ಬಂದಿದೆ.

ಇಲ್ಲಿ ರಸ್ತೆ ಕನಿಷ್ಠ ಚತುಷ್ಪಥವಾದರೆ ಮೆಲ್ಲಗೆ ಆರ್ಥಿಕ ಚಟುವಟಿಕೆ ಚಿಗುರುತ್ತದೆ. ಬೆಳ್ತಂಗಡಿ, ಧರ್ಮಸ್ಥಳ ಕಡೆಯಿಂದ, ಬಂಟ್ವಾಳ ಪೇಟೆಯಿಂದ, ಬಿ.ಸಿ.ರೋಡ್‌ ಮಂಗಳೂರು ಕಡೆಯಿಂದ, ಮೂಡಬಿದಿರೆ, ವಾಮದಪದವು, ಪಂಜಿಕಲ್ಲು, ಮೂಲರಪಟ್ಣ ಕಡೆಗಳಿಂದ ಬರುವ ಎಲ್ಲ ವಾಹನಗಳು ಹೀಗೆಯೇ ಹಾದು ಹೋಗುವುದರಿಂದ ಈಗಿನ ಪೇಟೆಯೊಳಗಿನ ವಾಹನ ಒತ್ತಡ ಕೊಂಚ ಕಡಿಮೆ ಮಾಡಬಹುದು.

ವಾಹನಗಳು ಕಡಿಮೆಯೇನಿಲ್ಲ
ಬಂಟ್ವಾಳ ತಾಲೂಕಿನ ರಾಯಿ, ಸರಪಾಡಿ,ಬಡಗಬೆಳ್ಳೂರು, ಬಡಗಕಜೆಕಾರು, ಕಾವಳಮೂಡೂರು, ಅಮಾrಡಿ, ಬಂಟ್ವಾಳ, ಬಿ. ಮೂಡ, ಕಾವಳಪಡೂರು, ಕುಕ್ಕಿಪಾಡಿ, ನಾವೂರು, ಪಂಜಿಕಲ್ಲು, ಸಂಗಬೆಟ್ಟು, ಉಳಿ, ಅಮ್ಮುಂಜೆ, ಅರಳ, ಇರ್ವತ್ತೂರು, ಮಣಿನಾಲ್ಕೂರು ಸಹಿತ ವಿವಿಧ ಗ್ರಾಮಗಳ ಜನರು ಇಲ್ಲಿಂದಲೇ ಹಾದುಹೋಗುತ್ತಾರೆ. ದಿನವೊಂದಕ್ಕೆ ಸುಮಾರು 20 ಸಾವಿರದಷ್ಟು ವಾಹನಗಳು ಓಡಾಡುತ್ತವೆ. ಶಾಲಾ ಕಾಲೇಜುಗಳು, ವಿವಿಧ ಧರ್ಮೀಯರ ಧಾರ್ಮಿಕ ಕೇಂದ್ರಗಳಿಗೆ ತೆರಳುವವರಿಗೆ ಇದೇ ಮುಖ್ಯ ಜಂಕ್ಷನ್‌.

ಇಷ್ಟೊಂದು ದೊಡ್ಡ ಬೈಪಾಸ್‌ ಜಂಕ್ಷನ್‌ನಲ್ಲಿ ನಿತ್ಯವೂ ವಾಹನ ಸಂಚಾರ ಅಡಚಣೆ ಸಮಸ್ಯೆ ಇದೆ. ಪ್ರತಿ ಬಾರಿಯೂ ರಸ್ತೆಗೆ ತೇಪೆ ಹಾಕಲಾಗಿದೆಯಷ್ಟೇ. ಇಂದಿಗೂ ಎರಡು ಘನ ವಾಹನಗಳ ಸುಗಮ ಸಂಚಾರ ಕಷ್ಟ. ಸಮರ್ಪಕ ಚರಂಡಿ ಇಲ್ಲ. ಪ್ರಯಾಣಿಕರ ಸಂಚಾರಕ್ಕೆ ನಿಲುಗಡೆ ವ್ಯವಸ್ಥೆ ಇಲ್ಲ. ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆ ತನಕ ಹೆದ್ದಾರಿ ವಿಸ್ತರಣೆ, ಬಿ.ಸಿ. ರೋಡ್‌-ಜಕ್ರಿಬೆಟ್ಟು ವಿಸ್ತರಣೆ ರಸ್ತೆ ಕಾಂಕ್ರೀಟಿಗೆ ಕೋಟಿಯಲ್ಲಿ ಅನುದಾನ ಮಂಜೂರಾತಿ ಆಗಿತ್ತಾದರೂ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. 

ಪೊಲೀಸ್‌ ನಿಯೋಜಿಸಿ
ಬೈಪಾಸ್‌ ಜಂಕ್ಷನ್‌ ನಿತ್ಯವೂ ವಾಹನ ದಟ್ಟಣೆಯ ಸ್ಥಳ. ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿದರೆ ಅನುಕೂಲ. ಪ್ರಯಾಣಿಕರ ದಿಕ್ಸೂಚಿ ನಾಮಫಲಕವನ್ನೂ ಅಳವಡಿಸಬೇಕಿದೆ.

ಆಗಬೇಕು
ಇಲ್ಲಿರುವ ಬಸ್‌ ಶೆಲ್ಟರ್‌ ಅನ್ನು ಅಭಿವೃದ್ಧಿಪಡಿಸುವುದಲ್ಲದೇ ಮೂಡಬಿದಿರೆಗೆ, ಬೆಳ್ತಂಗಡಿ ಕಡೆಗೆ, ಮಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರಿಗೂ ಅನುಕೂಲ ಆಗುವಂತೆ ಉಳಿದೆಡೆಯೂ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಸಾರ್ವಜನಿಕ ಶೌಚಾಲಯ ಕೊರತೆ ನೀಗಬೇಕು. ಕಸ ಸಂಗ್ರಹ ತೊಟ್ಟಿಯನ್ನೂ ಇಡಬೇಕು.

ಇಲಾಖೆಗೆ ಪತ್ರ
ಬೈಪಾಸ್‌ ಜಂಕ್ಷನ್‌ ಸಂಚಾರದ ಅಡಚಣೆ ಕುರಿತು ಸಾಕಷ್ಟು ಪತ್ರಗಳನ್ನು ಸಂಬಂಧಪಟ್ಟ ಇಲಾಖೆಗೆ ಮತ್ತು ಪುರಸಭೆಗೆ ಬರೆಯಲಾಗಿದೆ. ಪೊಲೀಸ್‌ ಇಲಾಖೆ ಸಿಬಂದಿ ನಿಯೋಜಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದೆ.
– ಚಂದ್ರಶೇಖರ್‌
ಎಸ್‌ಐ, ಬಂಟ್ವಾಳ ನಗರ ಠಾಣೆ 

ಮಂಜೂರು
ಬೈಪಾಸ್‌ ಜಂಕ್ಷನ್‌ ಹೆದ್ದಾರಿ ವಿಸ್ತರಣೆಗೆ ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಮಂಜೂರಾತಿ ಆಗಿದೆ. ಪುರಸಭಾ ಚುನಾವಣೆ ಮುಗಿದ ಬಳಿಕ ಕ್ರಮ ಜರಗಿಸಲಾಗುವುದು. ಜಂಕ್ಷನ್‌ ವಿಸ್ತರಣೆಯ ಬಗ್ಗೆ ಜಮೀನು ಪರಭಾರೆ ಸಂಗತಿ ನ್ಯಾಯಾಲಯದಲ್ಲಿ ಇರುವುದರಿಂದ ಎಲ್ಲವನ್ನು ನಿಯಮಿತವಾಗಿ ಮಾಡಬೇಕು. ಪುರಸಭೆಯಲ್ಲಿ ಹೊಸ ಆಡಳಿತ ಬಂದಾಗ ವೇಗ ಪಡೆದುಕೊಳ್ಳಬಹುದು.
– ರೇಖಾ ಜೆ. ಶೆಟ್ಟಿ
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ 

 ರಾಜಾ ಬಂಟ್ವಾಳ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.