ಬೆಳ್ತಂಗಡಿ ತಾ| ಗ್ರಂಥಾಲಯಕ್ಕಿಲ್ಲ ಸುಸಜ್ಜಿತ ಕಟ್ಟಡ

ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನದ ಕೊರತೆ ;ಪುಸ್ತಕ ಪ್ರೇಮಿಗಳಲ್ಲಿ ಬೇಸರ

Team Udayavani, Oct 6, 2019, 6:46 AM IST

ಬೆಳ್ತಂಗಡಿ : ಹಲವಾರು ದಶಕಗ ಳಿಂದ ಓದುಗರನ್ನು ತನ್ನತ್ತ ಸೆಳೆಯುತ್ತಿದ್ದ ತಾಲೂಕು ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಪಾಯಕಾರಿ ಹಂತ ತಲುಪಿರುವುದ ರಿಂದ ಓದುಗರು ಆತಂಕದಲ್ಲಿ ಸಮಯ ಕಳೆಯುವಂತಾಗಿದೆ.

ಓದುಗರು ಪ್ರತಿನಿತ್ಯ ಜ್ಞಾನ ಭಂಡಾರದ ಆಸರೆ ಪಡೆದಿದ್ದಾರೆ. ಇತ್ತ ಕಟ್ಟಡದ ಛಾವಣಿ ಹಾಗೂ ಗೋಡೆ ಬಿರುಕು ಬಿಟ್ಟಿದ್ದು, 50 ವರ್ಷಗಳಿಗೂ ಹೆಚ್ಚು ಹಳೆಯದಾದ ಕಟ್ಟಡ ದಲ್ಲಿ ಕುಳಿತು ಓದಲು ಆತಂಕ ಸ್ಥಿತಿ ನಿರ್ಮಾಣ ವಾಗಿದೆ. 40 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಪುಸ್ತಕಗಳಿದ್ದು, 2,500 ಮಂದಿ ಸದಸ್ಯತ್ವ ಹೊಂದಿರುವ ಹೆಗ್ಗಳಿಗೆ ತಾಲೂಕು ಗ್ರಂಥಾಲಯದ್ದಾಗಿದೆ.

57 ಸಾವಿರ ರೂ.
ಮೌಲ್ಯದ ಪುಸ್ತಕ ಸಂಗ್ರಹ
ನಿತ್ಯ ಓದುಗರು ಆಸಕ್ತಿಯಿಂದ ಬರುತ್ತಿದ್ದಾರೆ. ಅನೇಕ ಖ್ಯಾತ ಲೇಖಕರ ಸುಮಾರು 40 ಸಾವಿರ ಪುಸ್ತಕಗಳಿದ್ದು, ತಿಂಗಳಿಗೆ 37 ಮ್ಯಾಗಜಿನ್‌ಗಳು, ಪ್ರತಿದಿನ 10ಕ್ಕೂ ಹೆಚ್ಚು ಪತ್ರಿಕೆಗಳು ಬರುತ್ತಿವೆ. ಆದರೆ ಇಲ್ಲಿನ ಸ್ಥಿತಿಗತಿಯಿಂದಾಗಿ ಬರುವ ಓದುಗರ ಸಂಖ್ಯೆ ಕಡಿಮೆಯಾಗಿದೆ.

ಬಿರುಕು ಬಿಟ್ಟ ಕಟ್ಟಡ
ಹಲವಾರು ದಶಕಗಳನ್ನು ಕಂಡ ಗ್ರಂಥಾಲಯದ ಕಟ್ಟಡ ಛಾವಣಿ ಸೋರದಂತೆ ಟರ್ಪಾಲು ಹಾಸಲಾಗಿದೆ. ಮಳೆ ಪ್ರಮಾಣ ಹೆಚ್ಚಾದಲ್ಲಿ ಗ್ರಂಥಾಲಯ ಪುಸಕ್ತಗಳು ಒದ್ದೆಯಾಗುತ್ತಿವೆ. ಕಟ್ಟಡ ಹಿಂಬದಿ ಬಿರುಕು ಬಿಟ್ಟು ಅಪಾಯಕಾರಿ ಯಾಗಿದ್ದು, ಕುಸಿಯುವ ಮುನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಇಲ್ಲವೇ ನೂತನ ಕಟ್ಟಡ ರಚನೆಗೆ ನಿವೇಶ‌ನ ಒದಗಿಸುವಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.

ಕಟ್ಟಡದ ಸುತ್ತಮುತ್ತ ಗಿಡಗಂಟಿ
ಕಟ್ಟಡದ ಹಿಂಬದಿ ಗಿಡಗಂಟಿ, ಛಾವಣಿ ಮಧ್ಯ ಬಳ್ಳಿಗಳು ಆವರಿಸಿವೆ. ಕಸಕಡ್ಡಿಗಳು ಸುತ್ತಮುತ್ತ ತುಂಬಿದ್ದು, ಇದರ ಬದಿಯಲ್ಲೇ ಇರುವ ಪಾಳುಬಾವಿಯಲ್ಲಿ ಮದ್ಯದ ಬಾಟಲಿಗಳು ತುಂಬಿದ್ದು, ಓದುಗರಿಗೆ ಮುಜುಗರ ಉಂಟುಮಾಡುವಂತಿದೆ.

ಪೀಠೊಪಕರಣ
ಬದಲಾವಣೆ ಕೂಗು
40 ಸಾವಿರದಷ್ಟು ಪುಸ್ತಕಗಳ ಹೊರೆ ಹೊತ್ತ ಪೀಠೊಪಕರಣಗಳು ಮಳೆ ನೀರು ಬಿದ್ದು ತುಕ್ಕು ಹಿಡಿದಿವೆ. ಹೊಸ ರ್ಯಾಕ್‌ ನಿರ್ಮಿಸುವಂತೆ ಓದುಗರು ಪ್ರತಿನಿತ್ಯ ವಿನಂತಿಸಿದರೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.

ಕಟ್ಟಡ ಹಿಂಬದಿ ಬೃಹತ್‌ ಮರಗಳಿವೆ. ಮಂಗಗಳ ಹಾವಳಿಯಿಂದ ಹೆಂಚು ಹಾಳಾಗಿವೆ. ಮರದ ಕೊಂಬೆ ಕಡಿಯದೆ ಮಳೆ-ಗಾಳಿಗೆ ಬಿದ್ದರೆ ಗ್ರಂಥಾಲಯ ಕಟ್ಟಡ ನೆಲಸಮವಾಗುವ ಭೀತಿಯಿದೆ.

ಮಂಜೂರಾದ 50 ಲಕ್ಷ ರೂ. ಮಾಯ
ಗ್ರಂಥಾಲಯಕ್ಕೆ ನ.ಪಂ. ಬಳಿ ನಿವೇಶನ ಕಾದಿರಿಸಿದ್ದು, ಸರಕಾರವು ಸುಸಜಿತ ಕಟ್ಟಡಕ್ಕಾಗಿ 50 ಲಕ್ಷ ರೂ. ಮಂಜೂರುಗೊಳಿಸಿದ್ದು ಶೀಘ್ರ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಕಳೆದ 3 ವರ್ಷಗಳ ಹಿಂದೆ ಗ್ರಂಥಾಲಯ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಮಂಜೂರುಗೊಂಡ 50 ಲಕ್ಷ ರೂ. ಎಲ್ಲಿ ವಿನಿಯೋಗವಾಗಿದೆ ಎಂಬುದೇ ಪ್ರಶ್ನೆಯಾಗಿದೆ.

 ಶಾಸಕರ ಭರವಸೆ
ಗ್ರಂಥಾಲಯ ಕಟ್ಟಡಕ್ಕಾಗಿ ನಿವೇಶನ ನೀಡುವಂತೆ ಈಗಾಗಲೇ ಶಾಸಕರಲ್ಲಿ ಮನವಿ ಮಾಡಲಾಗಿದೆ. ನಿವೇಶನ ಗುರುತಿಸುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಅನುದಾನಕ್ಕೆ ಅಂದಾಜು ಪಟ್ಟಿ ಕಳುಹಿಸಲು ಅನುಕೂಲವಾಗಲಿದೆ. ಗ್ರಂಥಾಲಯ ದಿಂದ ಆದಾಯ ಇಲ್ಲದಿರುವುದರಿಂದ ಸರಕಾರಿ ಕಟ್ಟದಲ್ಲೂ ಸ್ಥಳಾವಕಾಶ ನೀಡಲು ಹಿಂಜರಿಯುತ್ತಿರುವುದು ಸಮಸ್ಯೆಯಾಗಿದೆ. ಪುಸ್ತಕ ರಕ್ಷಣೆಗೆ ಹೊಸ ಪಿಠೊಪಕರಣ ಒದಗಿಸಲಾಗುವುದು.
– ಮಮತಾ ರೈ ಪ್ರಭಾರ ಗ್ರಂಥಾಲಯ ಅಧಿಕಾರಿ, ಮಂಗಳೂರು

 ಮಂಜೂರಿಗೆ ಪ್ರಯತ್ನ
ಓದುಗರ ಅನುಕೂಲಕ್ಕಾಗಿ ಹೊಸ
ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಂಬಂಧಪಟ್ಟ ಸಚಿವರನ್ನು ಒತ್ತಾಯಿಸಿ ಅನುದಾನ ಹಾಗೂ ನಿವೇಶನ ಮಂಜೂರಿಗೆ ಪ್ರಯತ್ನಿಸಲಾಗುತ್ತಿದೆ.
– ಹರೀಶ್‌ ಪೂಂಜ ಶಾಸಕರು

-  ಚೈತ್ರೇಶ್‌ ಇಳಂತಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...