ರಾಜಕಾಲುವೆಯ ಜತೆಗೆ ನದಿ ಬದಿಯಲ್ಲೂ ಒತ್ತುವರಿ!


Team Udayavani, Jun 5, 2018, 4:35 AM IST

nethravathi-river.jpg

ಮಂಗಳೂರಿನ ರಾಜಕಾಲುವೆ ಹಾಗೂ ದೊಡ್ಡ ತೋಡುಗಳ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಒತ್ತುವರಿ ಆದ ಕಾರಣದಿಂದ ಮಳೆ ನೀರು ಸರಾಗವಾಗಿ ನದಿ ಸೇರಲು ಸಾಧ್ಯವಾಗಲಿಲ್ಲ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆಯೇ, ನದಿ ಬದಿಯ ಭಾಗಕ್ಕೂ ಕೆಲವರು ಕಣ್ಣು ಹಾಕಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ನಗರ ವ್ಯಾಪ್ತಿಯಲ್ಲಿ ಹರಿಯುವ ಎರಡು ನದಿಯ ವ್ಯಾಪ್ತಿಯಲ್ಲೂ ಒಂದಿಷ್ಟು ಒತ್ತುವರಿ ಆಗಿದ್ದು, ಈ ಕಾರಣದಿಂದ ಹಿನ್ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ ಎಂಬ ಆರೋಪವೂ ಇದೀಗ ಪ್ರತಿಧ್ವನಿಸಿದೆ. ಈ ಕುರಿತಂತೆ ಬೆಳಕು ಚೆಲ್ಲುವ ‘ರಿಯಾಲಿಟಿ ಚೆಕ್‌’ ಇಲ್ಲಿದೆ.

ಮಹಾನಗರ: ‘ನಗರ ವ್ಯಾಪ್ತಿಯಲ್ಲಿ ಹರಿಯುವ ಜೀವನದಿಗಳಾದ ನೇತ್ರಾವತಿ ಹಾಗೂ ಫಲ್ಗುಣಿಯಲ್ಲಿ ನೀರಿನ ಉಬ್ಬರವಿದ್ದ ಕಾರಣ ಮಳೆ ನೀರು ನದಿಗಳನ್ನು ಸೇರಲು ಸಾಧ್ಯವಾಗದೆ, ಹಿನ್ನೀರಿನೊಂದಿಗೆ ತಗ್ಗುಪ್ರದೇಶಗಳು ಜಲಾವೃತವಾದವು’ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಇತ್ತೀಚೆಗೆ ತಿಳಿಸಿದ್ದರು. ಹಾಗಾದರೆ ನದಿಯಲ್ಲಿ ಹಿನ್ನೀರು ಸರಾಗವಾಗಿ ಹರಿಯಲು ಯಾಕೆ ಕಷ್ಟವಾಗುತ್ತದೆ? ನಿಜಕ್ಕೂ ಇಲ್ಲಿ ಆಗಿರುವುದೇನು? ಎಂಬ ಕುರಿತು ಪರಿಶೀಲಿಸಿದಾಗ ಕಂಡು ಬಂದ ಸತ್ಯ ‘ನದಿ ಬದಿಯ ಕೆಲವು ಕಡೆ ಒತ್ತುವರಿ ಆಗಿದೆ’ ಎಂಬುದು!

ನೈಸರ್ಗಿಕವಾಗಿ ಎಲ್ಲಿ ನದಿಗಳು ಸಮುದ್ರವನ್ನು ಬಂದು ಸೇರುತ್ತವೆಯೋ ಅಥವಾ ಎಲ್ಲಿ ಸಮುದ್ರ ದಡ ಕಾಣಿಸುತ್ತದೆಯೋ ಅಲ್ಲಿ ಹಿನ್ನೀರು ಹರಿಯುತ್ತಿರುತ್ತದೆ. ಆದರೆ, ನಗರ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಕಡಲ ಕಿನಾರೆ ಇರುವ ಕಡೆಗಳಲ್ಲಿ ಈಗ ಹಿನ್ನೀರು ಪ್ರದೇಶ ಕೂಡ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕಣ್ಮರೆಯಾಗುತ್ತಿವೆ. ಇದು ಕೂಡ ಮಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಸಮಸ್ಯೆಯಾದ ಬಗ್ಗೆಯೂ ಆರೋಪಗಳಿವೆ.

ನೇತ್ರಾವತಿಯಲ್ಲಿ ಮಂಗಳೂರಿನ ಅಳಿವೆಬಾಗಿಲಿನಿಂದ ಸುಮಾರು 15 ಕಿ.ಮೀ.ದೂರದ ತುಂಬೆಯವರೆಗೆ ಹಿನ್ನೀರಿನ ವ್ಯಾಪ್ತಿ ಇದೆ. ಅಳಿವೆಬಾಗಿಲಿನಿಂದ ಮಳವೂರಿನವರೆಗೆ ಫ‌‌ಲ್ಗುಣಿ ನದಿಯ ಸುಮಾರು 9 ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರಿನ ಚಲನೆ ಇದೆ. ಉಳಿದಂತೆ ನಂದಿನಿ ನದಿಯು ಚೇಳಾçರುವರೆಗೆ 8 ಕಿ.ಮೀ. ಮತ್ತು ಶಾಂಭವಿ ನದಿಯು ಕರ್ನಿರೆವರೆಗೆ 12 ಕಿ.ಮೀ. ವ್ಯಾಪ್ತಿಯಲ್ಲಿ ಹಿನ್ನೀರಿನ ವ್ಯಾಪ್ತಿ ಹರಡಿಕೊಂಡಿದೆ.

ದುರಂತವೆಂದರೆ, ಈ ಹಿನ್ನೀರು ಹರಿಯುವ ಜಾಗದ ಮೇಲೆ ಕಣ್ಣು ಹಾಕಿರುವ ಸ್ಥಳೀಯರು, ಉದ್ಯಮಪತಿಗಳು, ನದಿಯ ಪಾರ್ಶ್ವದಲ್ಲಿ ಮಣ್ಣುಹಾಕಿ ನದಿಯ ಭಾಗವನ್ನೇ ಕಬಳಿಸಿದ ಘಟನೆ ಕೆಲವೆಡೆ ನಡೆದಿದೆ. ಮಂಗಳೂರಿನ ಬೋಳೂರು, ಸುಲ್ತಾನ್‌ಬತ್ತೇರಿ ವ್ಯಾಪ್ತಿಯಲ್ಲಿಯೇ ಹಿನ್ನೀರು ಪ್ರದೇಶಕ್ಕೆ ಮಣ್ಣುಹಾಕಿ ಕೆಲವು ಫ್ಯಾಕ್ಟರಿಗಳು ತಲೆ ಎತ್ತಿವೆ. ಅಂಗಡಿ ಮುಂಗಟ್ಟುಗಳು, ಸಣ್ಣಪುಟ್ಟ ಕೈಗಾರಿಕೆಗಳು ಇದೇ ನದಿಯ ಪಾತ್ರದಲ್ಲಿ ತೆರೆದಿವೆ. 

ಕಟ್ಟಡ ತ್ಯಾಜ್ಯವೆಲ್ಲ ನದಿ ತೀರಕ್ಕೆ!
ಕೂಳೂರುವಿನ ಮೂಲಕ ಫಲ್ಗುಣಿ ನದಿ ಸಮುದ್ರ ಸೇರುತ್ತದೆ. ಇಲ್ಲಿನ ವ್ಯಾಪ್ತಿಯಲ್ಲಿ ನದಿ ಪಾತ್ರದ ಕೆಲವು ಭಾಗ ಒತ್ತುವರಿ ಆಗಿದೆ ಎಂಬ ಆರೋಪವೂ ಇದೆ. ಜತೆಗೆ ಕೂಳೂರು ಸೇತುವೆ ಸಮೀಪದ ಪಾರ್ಶ್ವದಲ್ಲಿ ನದಿ ತೀರದಲ್ಲಿ ಕಟ್ಟಡ/ಕಾರ್ಖಾನೆಯ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿಯಲಾಗುತ್ತದೆ. ಇದರಿಂದಾಗಿ ನದಿ ಹರಿವಿನ ವ್ಯಾಪ್ತಿಯಲ್ಲೂ ಕೊಂಚ ವ್ಯತ್ಯಾಸವಾಗಿದೆ. ನೀರು ಸರಾಗವಾಗಿ ಹರಿಯಲು ಕಷ್ಟವಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭಯದಿಂದ ರಾತ್ರಿ ಹೊತ್ತು ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.

ನೇತ್ರಾವತಿಯಲ್ಲಿ ಹಿನ್ನೀರು ಹರಿಯುವ ಸ್ಥಳದಲ್ಲೂ ಅತಿಕ್ರಮಣ ನಡೆದಿದೆ. ಅಡಂಕುದ್ರು, ಜಪ್ಪಿನಮೊಗರು, ಅಡ್ಯಾರ್‌ ವ್ಯಾಪ್ತಿಯಲ್ಲಿ ನದಿಯ ಬದಿಯಲ್ಲಿ ಮಣ್ಣು ಹಾಕಿ ಸದ್ದಿಲ್ಲದೆ ನದಿಯ ಚಿತ್ರವೇ ಬದಲಾಗಿದೆ. ಮಣ್ಣು ಹಾಕಿ ಅತಿಕ್ರಮಣ ಆದ ಸ್ಥಳವು ಹಿನ್ನೀರಿನ ಪರಿಣಾಮವಾಗಿ ಕೆಲವೇ ತಿಂಗಳುಗಳಲ್ಲಿ ಹಸಿರು ಬಣ್ಣದಿಂದ ಕಂಗೊಳಿಸುವ ಪರಿಣಾಮ ಅಲ್ಲಿ ನದಿ ಇತ್ತು ಎಂಬ ಸುಳಿವೇ ಸಿಗದ ಸ್ಥಿತಿ ನಿರ್ಮಾಣವಾಗಿದೆ. 

ಹಿನ್ನೀರಿನಿಂದ ದೊರೆಯುವ ಪ್ರಯೋಜನ
ಸಮುದ್ರದಲ್ಲಿ ಭರತ‌ ಉಂಟಾದಾಗ ನದಿಯ ಹಾಗೂ ನಾಲೆಗಳ ಮುಖಾಂತರ ಹೆಚ್ಚಿನ ನೀರು ಸಂಗ್ರಹವಾಗಿ ನದಿಯಲ್ಲಿ ಹಿಮ್ಮುಖವಾಗಿ ನೀರು ಸಂಗ್ರಹಗೊಳ್ಳುತ್ತವೆ. ಇಳಿತದ ಸಮಯದಲ್ಲಿ  ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುತ್ತದೆ. ಈ ಭರತ ಇಳಿತಗಳ ಪ್ರಭಾವ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗಿನ ನದಿಯ ಭಾಗ ಉಪ್ಪು ನೀರಿನಿಂದ ಕೂಡಿರುತ್ತದೆ. ಇದನ್ನೇ ‘ಹಿನ್ನೀರು’ ಎಂದು ಕರೆಯುತ್ತಾರೆ. ಪ್ರಾಕೃತಿಕ ವಿಕೋಪ ಸಮಯದಲ್ಲಿ ಸಮುದ್ರದಿಂದ ನೆರೆ, ಚಂಡಮಾರುತ, ಸುನಾಮಿ ಇತ್ಯಾದಿ ಹಲವು ಕಾರಣಗಳಿಂದ ಬರುವ ಅಧಿಕ ನೀರನ್ನು ಅಳಿವೆಯು ಸಂಗ್ರಹಿಸಿ ಅದು ವಸತಿ ಅಥವಾ ಕೃಷಿಭೂಮಿಗಳಿಗೆ ನುಗ್ಗದಂತೆ ತಡೆಯುತ್ತದೆ. ಅಲ್ಲದೆ ಅಳಿವೆ ಪ್ರದೇಶಗಳಲ್ಲಿ ಬೆಳೆಯು ವಿಶಿಷ್ಟ ಸಸ್ಯ ಪ್ರಭೇದವಾದ ಕಾಂಡ್ಲ ಸಮೂಹಗಳು ನೀರಿನ ಪ್ರವಾಹದಿಂದ ಉಂಟಾಗುವ ಭೂಸವೆತ ಅಥವಾ ಕೊರೆತವನ್ನು ತಡೆಯುತ್ತವೆ. ಅಳಿವೆಯ ವಿಸ್ತಾರ ಹೆಚ್ಚಾದಷ್ಟು ಅದು ಜನರಿಗೆ ನೀಡುವ ರಕ್ಷಣೆ ಹೆಚ್ಚಾಗುತ್ತದೆ ಎಂಬುದು ವೈಜ್ಞಾನಿಕ ಮಾಹಿತಿ.

‘ಅತಿಕ್ರಮಿಸಿದರೆ ಕಾನೂನು ಕ್ರಮ’
ಮಂಗಳೂರು ವ್ಯಾಪ್ತಿಯಲ್ಲಿರುವ ಹಿನ್ನೀರು ಹರಿವಿನ ಸ್ಥಳದಲ್ಲಿ  ಈಗಾಗಲೇ ಮಣ್ಣುಹಾಕಿ ಅತಿಕ್ರಮಣ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿವೆೆ. ಹಿನ್ನೀರು ಹರಿಯುವ ಜಾಗವನ್ನು ಅತಿಕ್ರಮಿಸಿದರೆ ಕ್ರಮ ಕೈಗೊಳ್ಳಲಾಗುವುದು.
– ಮಹೇಶ್‌, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ

ಟಾಪ್ ನ್ಯೂಸ್

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

bjp-tmc

ತ್ರಿಪುರಾ ನಗರ ಪಂಚಾಯತ್ ಚುನಾವಣೆ : ಬಿಜೆಪಿಗೆ ಸಿಹಿ, ಟಿಎಂಸಿಗೆ ಕಹಿ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

1-asasa

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

dks

ಇಸ್ರೋ ಸ್ಥಳಾಂತರ: ಪ್ರಧಾನಿ ಮತ್ತು ಸಿಎಂಗೆ ಡಿಕೆಶಿ ಬರೆದ ಪತ್ರದ ಸಾರಾಂಶ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ ಅಗತ್ಯ; ಡಾ| ಹೆಗ್ಗಡೆ

ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ ಅಗತ್ಯ; ಡಾ| ಹೆಗ್ಗಡೆ

ಬಂಟ್ವಾಳದಲ್ಲಿ ಗರಿಷ್ಠ, ಹೆಬ್ರಿಯಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಮತದಾರರು

ಬಂಟ್ವಾಳದಲ್ಲಿ ಗರಿಷ್ಠ, ಹೆಬ್ರಿಯಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಮತದಾರರು

ಕೇರಳದಲ್ಲಿ ನ್ಯೂರೊ ವೈರಸ್‌ ಪತ್ತೆ: ದ.ಕ. ಜಿಲ್ಲೆಯಲ್ಲಿ ನಿಗಾ

ಕೇರಳದಲ್ಲಿ ನ್ಯೂರೊ ವೈರಸ್‌ ಪತ್ತೆ: ದ.ಕ. ಜಿಲ್ಲೆಯಲ್ಲಿ ನಿಗಾ

ವೈದ್ಯ ಕೋರ್ಸ್‌ ಪ್ರವೇಶ ಕೌನ್ಸೆಲಿಂಗ್‌ ಕೂಡಲೇ ಆರಂಭವಾಗಲಿ: ಖಾದರ್‌

ವೈದ್ಯ ಕೋರ್ಸ್‌ ಪ್ರವೇಶ ಕೌನ್ಸೆಲಿಂಗ್‌ ಕೂಡಲೇ ಆರಂಭವಾಗಲಿ: ಖಾದರ್‌

MUST WATCH

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

ಹೊಸ ಸೇರ್ಪಡೆ

19school

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

18old

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

17daliths

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.