ಮೂಡಬಿದಿರೆ ಪುರಸಭೆಯ ಮಾದರಿ ಕಾರ್ಯಾಚರಣೆ

Team Udayavani, Jun 5, 2018, 4:25 AM IST

kasa-4-6.jpg

ಮೂಡಬಿದಿರೆ: ಘನತ್ಯಾಜ್ಯ ನಿರ್ವಹಣೆ ಎಲ್ಲ ನಗರ, ಪಟ್ಟಣಗಳ ಪಾಲಿಗೆ ಮುಗಿಯದ ಸಮಸ್ಯೆ. ಆದರೆ ಜನರು ಆಡಳಿತದೊಂದಿಗೆ ಕೈ ಜೋಡಿಸಿದರೆ ಈ ಸಮಸ್ಯೆಯ ಪರಿಹಾರ ಸಾಧ್ಯತೆಗಳು ಗೋಚರಿಸುತ್ತವೆ ಎಂಬುದಕ್ಕೆ ಮೂಡಬಿದಿರೆ ಪುರಸಭೆ ಸಾಕ್ಷಿ. ‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂಬ ಹಾಡಿನೊಂದಿಗೆ ಮೂಡಬಿದಿರೆ ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನ ಮನೆ, ಅಂಗಡಿ ಗಳ ಬಾಗಿಲಿಗೆ ಬರುತ್ತದೆ. ನಾಗರಿಕರು ತಮ್ಮ ನೆಲೆಗಳಲ್ಲಿ ಸಂಗ್ರಹವಾಗುವ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಿಸಿ ಸುರಕ್ಷಿತವಾಗಿ ಈ ವಾಹನಕ್ಕೆ ನೀಡುತ್ತಾರೆ. ಈ ವಾಹನದಲ್ಲಿ ಹಾಡಷ್ಟೇ ಕೇಳಿ ಬರುವುದಲ್ಲ. ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕುರಿತು ಒಂದಷ್ಟು ಅತ್ಯುತ್ತಮ ಮಾಹಿತಿಯನ್ನೂ ಧ್ವನಿವರ್ಧಕದ ಮೂಲಕ ಬಿತ್ತರಿಸುತ್ತಲೇ ಇರುತ್ತಾರೆ.

ಪುರಸಭೆ ಜಾಗೃತಿ
– ನಿಮ್ಮ ನಿಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ಹಸಿ ಕಸ, ಒಣ ಕಸ, ಅಪಾಯಕಾರಿ ಕಸ ಎಂದು ವಿಂಗಡಿಸಿ ವಾಹನಕ್ಕೆ ನೀಡಿ.
– ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿ.
– ಮನೆಗೆ ಅವಶ್ಯವಾದ ತರಕಾರಿ, ಇತರ ಸಾಮಗ್ರಿ ತರಲು ಮನೆಯಿಂದಲೇ ಉತ್ತಮ ಗುಣಮಟ್ಟದ ಕೈಚೀಲಗಳನ್ನು ತೆಗೆದುಕೊಂಡು ಹೋಗಿ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್‌ ಚೀಲಗಳ ಬಳಕೆ ನಿಲ್ಲಿಸಿ ಪರಿಸರ ಉಳಿಸಿರಿ.
– ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಮನೆಯಲ್ಲೇ ಸಾವಯವ ಗೊಬ್ಬರ ತಯಾರಿಸಿ ಸೊಪ್ಪು, ಕಾಯಿಪಲ್ಯ ಗಿಡಗಳನ್ನು ಬೆಳೆಸಿ ಮನೆ ಯಲ್ಲೇ ಉತ್ತಮ ತರಕಾರಿ ಬೆಳೆಸಿ; ಬಳಸಿ ಆರೋಗ್ಯವಂತರಾಗಿ ಬದುಕಿರಿ. ಇದಕ್ಕಾಗಿ 5 ಅಡಿ ಉದ್ದ, 2 ಅಡಿ ಅಗಲ ಒಂದೂವರೆ ಅಡಿ ಆಳದ ಹೊಂಡ ಮಾಡಿ ಪ್ರತಿನಿತ್ಯ ಹಸಿ ಕಸವನ್ನು ಹಾಕಿ ಮಣ್ಣು ಹರಡಿದರೆ 45 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತ ನೆಯಾಗುವುದು.
– ಚಾಕಲೇಟ್‌, ಬಿಸ್ಕೆಟ್‌ ಕವರ್‌ಗಳನ್ನು ಹಾಗೂ ಬಿಸ್ಲೆರಿ ನೀರು ಹಾಗೂ ತಂಪು ಪಾನೀಯ, ಕುಡಿದ ಬಾಟಲ್‌ಗ‌ಳನ್ನು ಎಲ್ಲೆಂದರಲ್ಲಿ ಬಿಸಾಡದೆ ಶೇಖರಿಸಿಟ್ಟು ಮರು ಬಳಕೆಗೆ ಉಪಯೋಗಿಸುವುದರಿಂದ ಸ್ವಲ್ಪ ಮಟ್ಟಿನ ಆದಾಯವನ್ನೂ ಗಳಿಸಬಹುದು. ಯಾವುದೇ ಕಾರಣಕ್ಕೂ ಕಸವನ್ನು ಖಾಲಿ ಸ್ಥಳದಲ್ಲಿ, ರಸ್ತೆ ಬದಿ ಚರಂಡಿಯಲ್ಲಿ ಬಿಸಾಡುವ ಅಭ್ಯಾಸವನ್ನು ಬಿಟ್ಟು ಕಸವನ್ನು ಆದಷ್ಟು ಕಡಿಮೆ ಮಾಡಬಹುದು.
– ಬಯಲು ಮಲ ಮೂತ್ರ ಮಾಡುವುದನ್ನು ನಿಷೇಧಿಸಲಾಗಿದೆ. ಶೌಚಾಲಯವನ್ನು ಕಡ್ಡಾಯವಾಗಿ ಬಳಸಿ ಸ್ವಚ್ಛತೆ ಕಾಪಾಡಿ, ರೋಗ ರುಜಿನಗಳಿಂದ ದೂರವಿರಿ.
– ಮದುವೆ ಹಾಗೂ ಇತರ ಸಮಾ ರಂಭಗಳ ಪೂರ್ವದಲ್ಲಿಯೇ ಪುರಸಭೆಗೆ ತಿಳಿಸಿ, ತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ಕೊಟ್ಟಲ್ಲಿ ಪುರಸಭಾ ವತಿಯಿಂದ ವಿಲೇವಾರಿ ಮಾಡಲಾಗುವುದು.
– ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳಾದ ಲೋಟ, ಪ್ಲೇಟ್‌, ಥರ್ಮೊ ಕೋಲು ಪ್ಲೇಟ್‌, ಪ್ಲಾಸ್ಟಿಕ್‌ ಹಾಸು ಉಪಯೋಗಿಸಬಾರದು. ಕ್ಯಾಟರಿಂಗ್‌ ಮಾಡುವವರು ಪ್ಲಾಸ್ಟಿಕ್‌ ವಸ್ತುಗಳನ್ನು ಕಡಿಮೆ ಉಪಯೋಗ ಮಾಡಿ ಪರಿಸರಕ್ಕೆ ಪೂರಕ ವಸ್ತುಗಳಾದ ಅಡಿಕೆ ಹಾಳೆ, ಬಾಳೆಎಲೆ ಉಪಯೋಗಿಸಿ, ಬಳಿಕ ವಿಂಗಡಿಸಿ, ಪುರಸಭೆಗೆ ಮೊದಲೇ ತಿಳಿಸಿ, ಪುರಸಭಾ ವಾಹನಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ರಸ್ತೆಬದಿ ಚರಂಡಿ, ಖಾಲಿ ಸ್ಥಳದಲ್ಲಿ ಈ ತ್ಯಾಜ್ಯ ಸುರಿಯುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು.

ಪ್ರತ್ಯೇಕವಾಗಿ ಕಸ ಸಂಗ್ರಹಿಸಿ
‘ಮನೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಕಸವನ್ನು ಮೂಲದಲ್ಲೇ ಹಸಿ ಕಸ, ಒಣ ಮತ್ತು ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸಿದರೆ ಉತ್ತಮ. ಹಸಿಕಸವನ್ನು ಕಾಂಪೋಸ್ಟ್‌ ಮೂಲಕ ಗೊಬ್ಬರ ತಯಾರಿಸಲು ಬಳಸಲಾಗುತ್ತಿದೆ. ಒಣಕಸದಲ್ಲಿ ಬರುವ ವಸ್ತುಗಳನ್ನು ಮರುಬಳಕೆ ಮಾಡಬಹುದಾದ ಲೋಹ, ಬಾಟಲ್‌, ರಟ್ಟುಗಳು, ರಬ್ಬರ್‌, ಪತ್ರಿಕೆಗಳನ್ನು ಬೇರ್ಪಡಿಸಿ ಮಾರಾಟ ಮಾಡಿ ಪುರಸಭೆಗೆ ಆದಾಯ ಬರುವಂತೆ ಕ್ರಮಕೈಗೊಳ್ಳಲಾಗಿದೆ.
– ರಾಯಪ್ಪ, ಪುರಸಭೆಯ ಮುಖ್ಯಾಧಿಕಾರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.