Udayavni Special

ದೇಶಾಭಿಮಾನದಿಂದ ರಾಷ್ಟ್ರಾಭಿವೃದ್ಧಿ : ಶಾಸಕ ಅಂಗಾರ 


Team Udayavani, Jan 27, 2018, 11:39 AM IST

27-Jan-9.jpg

‌ಸುಳ್ಯ : ದೇಶ ಬಲಿಷ್ಠವಾಗಲು ನಂಬಿಕೆ, ವಿಶ್ವಾಸ ಮುಖ್ಯ. ಭಾರತ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದ್ದು, ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ಧಿ ಹೊಂದುತ್ತಿದೆ. ದೇಶಾಭಿಮಾನದಿಂದ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಅವರು ಹೇಳಿದರು.

ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ವತಿಯಿಂದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸಂವಿಧಾನದ ನಾಲ್ಕು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಇವುಗಳ ಮೇಲೆ ನಂಬಿಕೆ ಮುಖ್ಯ. ಇವುಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳದಂತೆ ಎಲ್ಲರೂ ಹೊಣೆಗಾರಿಕೆ ನಿಭಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದು, ದೇಶದ ಸಾರ್ವಭೌಮತೆ ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು, ತಹಶೀ ಲ್ದಾರ್‌ ಬಿ.ಎಂ. ಕುಂಞಮ್ಮ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಭಾಗವಹಿಸಿ, ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಸರ್ವಸಮಾನತೆ ಮೂಡಿ ಶಾಂತಿಯಿಂದ ಬದುಕುವಂತಾಗಬೇಕು ಎಂದರು.

ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಯಂತಡ್ಕ, ಕರ್ನಾಟಕ ರಾಜ್ಯ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಕನ್ನಡ ಸಾಹಿತ್ಯ ಪರಿಷತ್‌ ತಾ| ಅಧ್ಯಕ್ಷ ಡಾ| ಹರಪ್ರಸಾದ್‌ ತುದಿಯಡ್ಕ, ಪೊಲೀಸ್‌ ವೃತ್ತ ನಿರೀಕ್ಷಕ ಸತೀಶ್‌, ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಚಿದಾನಂದ ಎಂ.ಎಸ್‌., ಪಿ.ಎ. ಮಹಮ್ಮದ್‌, ಗೃಹರಕ್ಷಕ ದಳದ ಜಯಂತ ಶೆಟ್ಟಿ ಉಪಸ್ಥಿತರಿದ್ದರು.

ಮಾಜಿ ಯೋಧ ಲಕ್ಷ್ಮಣ ಗೌಡ ಕಟ್ಟೆಮನೆ ಅವರನ್ನು ಸಮ್ಮಾನಿಸಲಾಯಿತು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಪ್ರತಿಭೆ ಕೀರ್ತಿ ಎಸ್‌., ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಶಸ್ತಿ ಪಡೆದ ಪ್ರತಿಭೆ ಆಶ್ವಿ‌ತಾ ಪಿ.ಎಲ್‌. ಅವರನ್ನು ಗೌರವಿಸಲಾಯಿತು.

ಕೃಷಿಕರಿಗೆ ಸಮ್ಮಾನ
2017-18ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ರಾಧಾಕೃಷ್ಣ ದಾಸ್‌ ಉಬರಡ್ಕ (ಜೇನು ಕೃಷಿ) ಪಿ.ವಿ. ರಮೇಶ್‌ ಅರಂತೋಡು (ತೋಟಗಾರಿಕೆ), ಶಿವರಾಮ ಎಣ್ಮೂರು (ಹೈನುಗಾರಿಕೆ), ಚಂದ್ರಶೇಖರ ಡಿ. ಎಸ್‌. ಅಮರ ಮುಟ್ನೂರು ( ಸಾವಯವ ಕೃಷಿ), ಚಂದ್ರಶೇಖರ ಕೇನಾಜೆ, ರಾಮ ಮಲೆ ಪರ್ವತಮುಖೀ ಹಾಗೂ ಸುಶೀಲಾ ಪೂಜಾರಿ ಮನೆ (ಭತ್ತದ ಬೆಳೆ) ಅವರನ್ನು ಸಮ್ಮಾನಿಸಲಾಯಿತು.

ಬೆಳಗ್ಗೆ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸಿಬಂದಿ, ಪೊಲೀಸರ, ಹಾಗೂ ಸ್ಕೌಟ್ಸ್‌ ಎಂಡ್‌ ಗೈಡ್ಸ್‌, ಎನ್ನೆಸೆಸ್‌ ತಂಡ, ಬುಲ್‌ ಬುಲ್ಸ್‌ ಘಟಕ ಹಾಗೂ ವಿದ್ಯಾರ್ಥಿ ಗಳ ಆಕರ್ಷಕ ಪಥಸಂಚಲ ನಡೆಯಿತು. ತಹಸಿಲ್ದಾರ್‌ ಬಿ.ಎಂ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವದ ಸಂದೇಶ ವಾಚಿಸಿದರು.

ರೋಟರಿ ಪ್ರಾ. ಶಾಲೆ, ಶಾರದಾ ಪ್ರೌಢಶಾಲೆ, ಜಟ್ಟಿಪಳ್ಳ ಪ್ರಾ. ಶಾಲೆ, ಪ.ಪೂ. ಕಾಲೇಜು, ಸುಳ್ಯ, ಗಾಂಧಿನಗರ ಪ್ರೌಢಶಾಲೆ, ಗಾಂಧಿನಗರ ಪ್ರಾ. ಶಾಲೆ, ಸುಳ್ಯ ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್‌. ಕೆಂಪ ಲಿಂಗಪ್ಪ ಸ್ವಾಗತಿಸಿ, ಅಕ್ಷರ ದಾಸೋಹ ಸಂಯೋಜಕ ಚಂದ್ರಶೇಖರ ಪೆರಾಲ್‌ ವಂದಿಸಿದರು. ಅಚ್ಯುತ ಅಟ್ಲೂರು ನಿರೂಪಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ಹಳಿ ಏರುವುದೆಂದು ಆರ್ಥಿಕತೆ?

ಹಳಿ ಏರುವುದೆಂದು ಆರ್ಥಿಕತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವಾಸಕ್ಕೆ ಪಡೆಯದೆ ಅನುದಾನ ಹಂಚಿಕೆ: ಆಕ್ಷೇಪ

ವಿಶ್ವಾಸಕ್ಕೆ ಪಡೆಯದೆ ಅನುದಾನ ಹಂಚಿಕೆ: ಆಕ್ಷೇಪ

ಸುಳ್ಯ ತಾ.ಪಂ.: ಸದಸ್ಯರ ವ್ಯಾಪ್ತಿಗೆ 7.25 ಲಕ್ಷ ರೂ.

ಸುಳ್ಯ ತಾ.ಪಂ.: ಸದಸ್ಯರ ವ್ಯಾಪ್ತಿಗೆ 7.25 ಲಕ್ಷ ರೂ.

ಸುಳ್ಯ: ಪೊಲೀಸ್‌ ಠಾಣೆ ಒಳ ಪ್ರವೇಶಕ್ಕೆ ನಿರ್ಬಂಧ

ಸುಳ್ಯ: ಪೊಲೀಸ್‌ ಠಾಣೆ ಒಳ ಪ್ರವೇಶಕ್ಕೆ ನಿರ್ಬಂಧ

ರಜೆಯಲ್ಲಿ ಸೈನಿಕರ ಆಗಮನಕ್ಕೆ ಅವಕಾಶ ನೀಡಿ: ಹರೀಶ್‌ ಪೂಂಜ

ರಜೆಯಲ್ಲಿ ಸೈನಿಕರ ಆಗಮನಕ್ಕೆ ಅವಕಾಶ ನೀಡಿ: ಹರೀಶ್‌ ಪೂಂಜ

ಸಾವಿನ ಬಳಿಕ ಕೋವಿಡ್ ವದಂತಿ: ಅತಂತ್ರವಾದ ಶವ!

ಸಾವಿನ ಬಳಿಕ ಕೋವಿಡ್ ವದಂತಿ: ಅತಂತ್ರವಾದ ಶವ!

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

30-May-03

ಸಾಂಸ್ಥಿಕ ಕ್ವಾರಂಟೈನ್‌ನಿಂದ ಮನೆಗೆ

30-May-02

ಸಾಮಗ್ರಿ ವಿತರಣೆ: ಸಾಮಾಜಿಕ ಅಂತರ ಮಾಯ

30-May-01

ಕ್ವಾರಂಟೈನ್‌ದಿಂದ ಮನೆಗೆ ಹೋದವರಿಗೆ ಸೋಂಕು

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

ಶುದ್ಧ ಕುಡಿಯುವ ನೀರಿಗಾಗಿ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.