ಕಾಡಿಗೆ ಬೆಂಕಿ ಬಿದ್ದರೆ ಎಚ್ಚರಿಸುತ್ತದೆ ಫೈರ್‌ ಅಲರ್ಟ್‌!

ಜಿಪಿಎಸ್‌ ಮೂಲಕ ಕಾರ್ಯನಿರ್ವಹಣೆ ; ಅರಣ್ಯಾಧಿಕಾರಿಗಳಿಗೆ ತತ್‌ಕ್ಷಣ ಸಂದೇಶ

Team Udayavani, Jan 16, 2020, 5:18 AM IST

ಸುಳ್ಯ: ರಾಜ್ಯದ ಯಾವುದೇ ಭಾಗದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತತ್‌ಕ್ಷಣ ಎಚ್ಚರಿಸುವ ಉಪಗ್ರಹ ಆಧಾರಿತ “ಫೈರ್‌ ಅಲರ್ಟ್‌’ ವ್ಯವಸ್ಥೆಯನ್ನು ಅಳ
ವಡಿಸಿಕೊಳ್ಳಲಾಗಿದೆ. ಇದರೊಂದಿಗೆ ಬೆಂಕಿಯನ್ನು ತಹಬಂದಿಗೆ ತರುವ ವ್ಯವಸ್ಥೆಯೂ ಆಧುನಿಕವಾದರೆ ಅರಣ್ಯ ರಕ್ಷಣೆಗೆ ಪೂರಕವಾಗಲಿದೆ.

ಫೈರ್‌ ಅಲರ್ಟ್‌ ಸಿಸ್ಟಮ್‌ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದಟ್ಟಾರಣ್ಯದ ಮಧ್ಯೆ ಬೆಂಕಿ ಕಂಡಾಗ, ಬೆಂಕಿ ಹತ್ತಿಕೊಳ್ಳಬಹುದಾದ ಒಣ ಗಿಡಮರಗಳ ಗುಂಪು ಕಂಡಾಗ ಆಯಾ ವ್ಯಾಪ್ತಿಯ ಡಿಸಿಎಫ್‌, ಎಸಿಎಫ್‌, ಆರ್‌ಎಫ್‌ ದೂರವಾಣಿಗೆ ಸಂದೇಶ ಬರುತ್ತದೆ. ಅಧಿಕಾರಿಗಳು ತತ್‌ಕ್ಷಣ ಸ್ಥಳಕ್ಕೆ ತೆರಳಿ ವರದಿ ಸಲ್ಲಿಸಬೇಕು.

ಬೆಂಕಿ ನಿಯಂತ್ರಣ ರೇಖೆ
ಬೀಡಿ, ಸಿಗರೇಟು ಸೇದಿ ಎಸೆಯು ವುದರಿಂದ ಸಂಭವಿಸುವ ಕಾಳ್ಗಿಚ್ಚು ಪ್ರಕರಣಗಳನ್ನು ತಡೆಯಲು ಪ್ರತೀ ವರ್ಷವೂ ಚಳಿಗಾಲದ ಅಂತ್ಯ, ಬೇಸಗೆಯ ಆರಂಭದಲ್ಲಿ ಕಾಡಿನ ಸುತ್ತ ಇರುವ ಪೊದೆ, ಒಣ ಹುಲ್ಲು, ಗಿಡಗಂಟಿಗಳನ್ನು ತೆರವು ಮಾಡಿ ಕಾಳಿYಚ್ಚು ಉಂಟಾದಂತೆ ಫೈರ್‌ಲೈನ್‌ಗಳನ್ನು ನಿರ್ಮಿಸಲಾಗುತ್ತದೆ.

ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಂಪ್‌
ಪದೇಪದೆ ಬೆಂಕಿ ಕಾಣಿಸಿಕೊಳ್ಳುವ ಮತ್ತು ಒಣ ಹುಲ್ಲು, ಮರಗಳು ಹೆಚ್ಚಾಗಿರುವ ಪ್ರದೇಶ ಗುರುತಿಸಿ ಅಲ್ಲಿ ಕ್ಯಾಂಪ್‌ ಮಾಡಲಾಗುತ್ತದೆ. ಅರಣ್ಯ ಇಲಾಖೆಯ ನಾಲ್ಕೈದು ಸಿಬಂದಿಯ ತಂಡ ಜನವರಿಯಿಂದ ಮೇ 31ರ ತನಕ ಅಲ್ಲಿ ಕಾವಲಿರುತ್ತದೆ. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ, ಸಂಪರ್ಕ, ಸಾರ್ವಜನಿಕರ ಸಹಕಾರ ಪಡೆಯುವ ಜವಾಬ್ದಾರಿ ಅವರದು. ಸಿಬಂದಿಯ ಸ್ವ-ರಕ್ಷಣೆಗಾಗಿ ಇಲಾಖೆ ಅಗತ್ಯ ವೈದ್ಯಕೀಯ ನೆರವು, ಪರಿಕರಗಳನ್ನು ನೀಡುತ್ತದೆ. ಕಾಡಿನ ಎತ್ತರದ ಪ್ರದೇಶದಲ್ಲಿ ಫೈರ್‌ ವಾಚರ್‌ಗಳನ್ನು, ಅಲ್ಲಲ್ಲಿ ಫೈರ್‌ ಬೀಟರ್‌ಗಳನ್ನು ನಿಯೋಜಿಸಲಾಗುತ್ತದೆ. ಅಗ್ನಿ ಶಾಮಕ ದಳದ ನೆರವನ್ನು ಪಡೆದುಕೊಳ್ಳಲಾಗುತ್ತದೆ. ಸಂವಹನಕ್ಕೆ ವಾಕಿಟಾಕಿಗಳಿರುತ್ತವೆ.

ದೂರದ ಆಸ್ಟ್ರೇಲಿಯದಲ್ಲಿ ಲಕ್ಷಾಂತರ ಎಕರೆ ಅರಣ್ಯ, ಸಾವಿರಾರು ವನ್ಯಜೀವಿ ತಳಿಗಳು ಕಾಳ್ಗಿಚ್ಚಿಗೆ ಆಹುತಿಯಾಗಿವೆ. ನಮ್ಮಲ್ಲೂ ಮಳೆ ಸಂಪೂರ್ಣ ನಿಂತು ಹುಲ್ಲು, ಗಿಡಗಂಟಿಗಳು ಒಣಗುವ ಈ ಸಮಯ ಕಾಳ್ಗಿಚ್ಚು ತಲೆದೋರುತ್ತದೆ. ಜನರೇ ಬೆಂಕಿಯಿಕ್ಕುವ ಪ್ರಕರಣಗಳೂ ನಡೆದಿವೆ.
– ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕಾಳಿYಚ್ಚಿನಿಂದ ನಾಶ: 35,891 ಎಕರೆ.
– 2019ರ ಒಂದೇ ವರ್ಷದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 15,000 ಎಕರೆ ಅರಣ್ಯ ನಾಶ.
– ಈ ವರ್ಷ ಇಲ್ಲಿಯ ವರೆಗೆ 985 ಕಾಳಿYಚ್ಚಿನ ಘಟನೆಗಳಾಗಿವೆ, 17,297 ಎಕರೆ ಅರಣ್ಯ ನಾಶವಾಗಿದೆ.
– 2017-18ರಲ್ಲಿ 925 ಕಾಳಿYಚ್ಚು ಪ್ರಕರಣಗಳಿಂದ 17,240 ಎಕರೆ ಅರಣ್ಯ ನಾಶಗೊಂಡಿತ್ತು.

ಕಾಳ್ಗಿಚ್ಚು ಹಬ್ಬದಂತೆ ಇಲಾಖೆ ಬೆಂಕಿ ನಿಯಂತ್ರಣ ರೇಖೆ, ಕ್ಯಾಂಪ್‌, ಫೈರ್‌ ಬೀಟರ್‌ ನಿಯೋಜನೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಗತ್ಯ ಸಂದರ್ಭ ಸಾರ್ವಜನಿಕರ ಸಹಕಾರವನ್ನೂ ಪಡೆಯುತ್ತೇವೆ. ಜತೆಗೆ ಫೈರ್‌ ಅಲರ್ಟ್‌ ಸಿಸ್ಟಮ್‌ನಿಂದ ಬೆಂಕಿ ಅವಘಡ ಮತ್ತು ಎಚ್ಚರಿಕೆ ಸಂದೇಶ ಬರುತ್ತದೆ. ಇದು ತತ್‌ಕ್ಷಣ ಕಾರ್ಯಾಚರಣೆಗೆ ಪೂರಕವಾಗಿದೆ.
– ಮಂಜುನಾಥ, ವಲಯ ಅರಣ್ಯಧಿಕಾರಿ, ಸುಳ್ಯ

ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು
ಬೆಳಗಾವಿ
ಚಾಮರಾಜನಗರ
ಮೈಸೂರು
ಕೊಡಗು
ದಕ್ಷಿಣ ಕನ್ನಡ
ಉತ್ತರ ಕನ್ನಡ
ಶಿವಮೊಗ್ಗ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ