ರೌಡಿ ಶೀಟರ್‌ ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್‌ ಕೊಲೆ

Team Udayavani, Jan 14, 2018, 3:10 PM IST

ಮಂಗಳೂರು: ಉಳ್ಳಾಲ ಟಾರ್ಗೆಟ್‌ ಗ್ರೂಪ್‌ನ ಮುಖಂಡ, ಕುಖ್ಯಾತ ರೌಡಿ, ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಯಾಗಿದ್ದ ಇಲ್ಯಾಸ್‌ ಯು.ಎಸ್‌. ಯಾನೆ ಟಾರ್ಗೆಟ್‌ ಇಲ್ಯಾಸ್‌(32)ನನ್ನು ಶನಿವಾರ ಬೆಳಗ್ಗೆ ನಗರದ ಜಪ್ಪು ಕುಡುಪಾಡಿಯಲ್ಲಿರುವ ಆತನ ಮನೆಯಲ್ಲಿ ಮಲಗಿದ್ದಲ್ಲೇ ನಾಲ್ವರು ಅಪರಿಚಿತರು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

ಘಟನೆಯ ಹಿನ್ನೆಲೆ
ಕಳೆದ 6 ತಿಂಗಳಿನಿಂದ ಇಲ್ಯಾಸ್‌, ಜೆಪ್ಪು ಕುಡು ಪಾಡಿಯ ಮಿಸ್ತಾ ಗಲೋರ್‌ ಅಪಾರ್ಟ್‌ಮೆಂಟ್‌ನ 3ನೇ ಮಹಡಿಯ 303 ನಂಬ್ರದ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದ. ಶನಿವಾರ ಬೆಳಗ್ಗೆ 9 ಗಂಟೆ ವೇಳೆಗೆ ಇಬ್ಬರು ಅಪರಿಚಿತರು ಬಂದು ಮನೆಯ ಬಾಗಿಲು ತಟ್ಟಿ “ಇಲ್ಲಿ ಇದ್ದಾನೆಯೇ?’ ಎಂದು ಪ್ರಶ್ನಿಸಿದರು. ಆಗ ಅಲ್ಲಿದ್ದ ಇಲ್ಯಾಸ್‌ನ ಅತ್ತೆ ಬಾಗಿಲು ತೆರೆದು ಆತ ಮಲಗಿದ್ದಾನೆ ಎಂದು ತೋರಿಸಿದ್ದಾರೆ. ಬಳಿಕ ಆಕೆ ಚಹಾ ಮಾಡಲು ಅಡುಗೆ ಮನೆಗೆ ತೆರಳಿದರು. ಆಗ ದುಷ್ಕರ್ಮಿಗಳು ಇಲ್ಯಾಸ್‌ಗೆ ಇರಿದು ಪರಾರಿಯಾದರು.

ಮೇಲ್ಗಡೆ ಇದ್ದ ಅಪರಿಚಿತರು ಕೊಲೆ ಎಸಗುತ್ತಿದ್ದಾಗ ಇನ್ನಿಬ್ಬರು ಕೆಳಗಡೆ ನಿಂತು ಗಮನಿಸುತ್ತಿದ್ದರು. ಅವರು ಒಂದೊಮ್ಮೆ ಇಲ್ಯಾಸ್‌ ಓಡಿಹೋಗಲು ಯತ್ನಿಸಿದರೆ ತಡೆಯಲು ನಿಂತಿದ್ದರು ಎನ್ನಲಾಗಿದೆ. ಕೊಲೆ ಮಾಡಿದವರು ಕೆಳಗೆ ಬಂದ ಬಳಿಕ ಅಲ್ಲಿದ್ದ ಇಬ್ಬರೊಂದಿಗೆ ಎರಡು ಬೈಕ್‌ಗಳಲ್ಲಿ ಪರಾರಿಯಾದರು.

ಕೂಡಲೇ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ. ಘಟನೆಯ ವೇಳೆ ಇಲ್ಯಾಸ್‌ನ ಮಗು, ತಾಯಿ ಮತ್ತು ಸಹೋದರ ಮನೆಯಲ್ಲಿದ್ದರು.

ಪತ್ನಿ ಹೇಳಿಕೆ: “ನಾನು ಬೆಳಗ್ಗೆ 8 ಗಂಟೆಗೆ ಅನಾರೋಗ್ಯಕ್ಕೆ ಔಷಧ ತರಲು ಹೊರಗೆ ಹೋಗಿದ್ದೆ. 9 ಗಂಟೆಗೆ ಮನೆಯಿಂದ ನನ್ನ ಅತ್ತೆ ಕರೆ ಮಾಡಿ ಹತ್ಯೆ ನಡೆದಿರುವ ವಿಚಾರ ತಿಳಿಸಿದ್ದಾರೆ. ಇಲ್ಯಾಸ್‌ನನ್ನು ಕೇಳಿಕೊಂಡು ಇಬ್ಬರು ಆಗಂತುಕರು ಬಂದಿದ್ದರು. ಅತ್ತೆ ಬಾಗಿಲು ತೆರೆದ ಕೂಡಲೇ ಒಳನುಗ್ಗಿ ಇಲ್ಯಾಸ್‌ಗೆ ಪ್ರತಿರೋಧ ವ್ಯಕ್ತಪಡಿಸಲೂ ಅವಕಾಶ ನೀಡದಂತೆ ಇರಿದಿದ್ದಾರೆ. ಬಳಿಕ ಸ್ಥಳೀಯರು ಇಲ್ಯಾಸ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಪತ್ನಿ ಪಝಾìನಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿರೋಧಿ ಗ್ಯಾಂಗ್‌ ಕೃತ್ಯ?: ಇಲ್ಯಾಸ್‌ ಟಾರ್ಗೆಟ್‌ ತಂಡದಲ್ಲಿ ಗುರುತಿಸಿ ಕೊಂಡಿದ್ದ. ಅದೇ ತಂಡದ ದಾವೂದ್‌ ಮತ್ತು ಸಫಾÌನ್‌ ಈತನ ವಿರೋಧಿ  ಗುಂಪಿನ ವರಾಗಿದ್ದಾರೆ. ಅವರು ಸೇರಿ ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎಂದು ಇಲ್ಯಾಸ್‌ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಡಿಸಿಪಿ ಉಮಾ ಪ್ರಶಾಂತ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಂಡಾ ಕಾಯ್ದೆ: 2014 ಫೆ. 4ರಂದು ಈತನನ್ನು ಮಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿದ್ದರು. ದೇರಳಕಟ್ಟೆಯ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಪಹರಿಸಿ, ಅವರನ್ನು ಬೆದರಿಸಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ, ಕೃತ್ಯದ ವೀಡಿಯೋ ಚಿತ್ರೀಕರಣ ನಡೆಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ, ಬ್ಲ್ಯಾಕ್‌ವೆುàಲ್‌ ಮಾಡಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗೂಂಡಾ ಕಾಯ್ದೆಯಡಿ ಈತನನ್ನು ಬಂಧಿಸಲಾಗಿತ್ತು.

2013 ಅ. 30ರಂದು ಉಳ್ಳಾಲದ ಬೇಕರಿ ಮಾಲಕರೊಬ್ಬರ ಪುತ್ರನನ್ನು ಹನಿ ಟ್ರಾÂಪ್‌ಗೆ ಒಳಪಡಿಸಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಮಂಡಿಸಿದಾಗ ಟಾರ್ಗೆಟ್‌ ಗ್ರೂಪ್‌ನ ರಹಸ್ಯ ಬಯಲಾಗಿ ಇಲ್ಯಾಸ್‌ ಮತ್ತು ಸಹಚರರು ಬಂಧಿತರಾಗಿದ್ದರು.

ಕೊಲೆ ಯತ್ನ ಪ್ರಕರಣ: ಈ ಹಿಂದೆ ಟಾರ್ಗೆಟ್‌ ಗ್ರೂಪ್‌ನಲ್ಲಿ ತನ್ನ ಜತೆಗಿದ್ದು, ಬಳಿಕ ಪ್ರತ್ಯೇಕವಾಗಿದ್ದ ದಾವೂದ್‌ನನ್ನು 2017ರ ಸೆಪ್ಟಂಬರ್‌ನಲ್ಲಿ ಕೊಲೆ ಮಾಡಲು ಇಲ್ಯಾಸ್‌ ಯತ್ನಿಸಿದ್ದ. ತಲೆಮರೆಸಿಕೊಂಡಿದ್ದ ಆತನನ್ನು ಕಳೆದ ನ. 22ರಂದು ಮಂಗಳೂರಿನ ಪೊಲೀಸರು ಜಪ್ಪು ಕುಡುಪಾಡಿಯ ಫ್ಲ್ಯಾಟ್‌ನಲ್ಲಿ ಬಂಧಿಸಿದ್ದರು. ಅದೇ ದಿನ ಆತನ ಸಹಚರ ಉಳ್ಳಾಲ ಮೇಲಂಗಡಿಯ ಇಮ್ರಾನ್‌ನನ್ನು ಮುಂಬಯಿಯ ಲಾಡ್ಜ್ ಒಂದರಲ್ಲಿ ದಸ್ತಗಿರಿ ಮಾಡಿದ್ದರು. ಮೂರು ದಿನಗಳ ಹಿಂದೆ ಜಾಮೀನಿನಲ್ಲಿ ಮಂಗಳೂರು ಜೈಲಿನಿಂದ ಹೊರಗೆ ಬಂದಿದ್ದನು.

ದೀಪಕ್‌ ರಾವ್‌ ಹತ್ಯೆ ಆರೋಪಿಗಳಿಗೆ ನಂಟು: ಜ. 3ರಂದು ಸುರತ್ಕಲ…ನಲ್ಲಿ ದೀಪಕ್‌ ರಾವ್‌ ಹತ್ಯೆಯಲ್ಲಿ ಭಾಗಿಯಾಗಿ ಬಂಧನದಲ್ಲಿರುವ ಪ್ರಮುಖ ಆರೋಪಿ ಪಿಂಕಿ ನವಾಜ್‌ ಹಾಗೂ ನೌಷಾದ್‌ ಕೂಡ ಟಾರ್ಗೆಟ್‌ ತಂಡದಲ್ಲಿ ಗುರುತಿಸಿ ಕೊಂಡಿದ್ದರು ಎಂದು ಹೇಳಲಾಗುತ್ತಿದೆ. 3 ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ಹಿಂದೂ ಯುವಕನಿಗೆ ಚೂರಿ ಇರಿತ ಪ್ರಕರಣದಲ್ಲಿ ಭಾಗಿಯಾಗಿದ್ದ ನೌಷಾದ್‌ಗೆ ಇಲ್ಯಾಸ್‌ ಉಳ್ಳಾಲದಲ್ಲಿ ಆಶ್ರಯ ಕೊಟ್ಟಿದ್ದ ಎನ್ನಲಾಗಿದೆ. ಇದರಿಂದ ನೌಷಾದ್‌ ಕೂಡ ಟಾರ್ಗೆಟ್‌ ತಂಡದÇÉೇ ಹೆಚ್ಚಾಗಿ ಇದ್ದನು. ಇಲ್ಯಾಸ್‌ ಬಳ್ಳಾರಿ ಜೈಲಿಂದ ಬಂದ ಬಳಿಕ ಸುರತ್ಕಲ… ಕೃಷ್ಣಾಪುರದಲ್ಲಿ ನೆಲೆಸಿ ಅಲ್ಲಿನ ಯುವಕರ ತಂಡವನ್ನು ಕಟ್ಟಿದ್ದನು. ಇತ್ತೀಚೆಗೆ ಜೆಪ್ಪುವಿನ ಅಪಾರ್ಟ್‌ಮೆಂಟ್‌ಗೆ ವಾಸ್ತವ್ಯ ಬದಲಾಯಿಸಿದ್ದನು. ಇಲ್ಯಾಸ್‌ ತಂದೆ ಇಸ್ಮಾಯಿಲ್‌ ಫ್ಯಾನ್ಸಿ ವಸ್ತುಗಳ ವ್ಯಾಪಾರಿಯಾಗಿದ್ದು, ಇಬ್ಬರು ಸಹೋದರಿಯರು, ಇಬ್ಬರು ಸಹೋದರರು ಇದ್ದಾರೆ.

25ಕ್ಕೂ ಅಧಿಕ ಪ್ರಕರಣ: ಇಲ್ಯಾಸ್‌ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯೊಂದ ರಲ್ಲೇ 20 ಪ್ರಕರಣಗಳಿವೆ. ಉಳಿದಂತೆ ಪಡುಬಿದ್ರಿ, ಬೆಂಗಳೂರು, ಯಲ್ಲಾಪುರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳಿವೆ. ಬಜಪೆಯಲ್ಲಿ 1, ಕೊಣಾಜೆಯಲ್ಲಿ 2 ಹಾಗೂ ಉಳ್ಳಾಲದಲ್ಲಿ 20 ಸೇರಿದಂತೆ ಸುಮಾರು 25ಕ್ಕೂ ಅಧಿಕ ಪ್ರಕರಣ ಇಲ್ಯಾಸ್‌ ಮೇಲೆ ದಾಖಲಾಗಿವೆೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಣಕಾಸಿನ ತಕರಾರು: ವೈದ್ಯಕೀಯ ವಿದ್ಯಾರ್ಥಿಗಳ ಅಪಹರಣ ಮತ್ತು ನಗ್ನ ಚಿತ್ರ ತೆಗೆದಿರುವ ಪ್ರಮುಖ ಆರೋಪಿ ಸಫ್ವಾನ್‌ ಕೈಯಿಂದ 20 ಲಕ್ಷ ರೂ. ಪಡೆದು ಇಲ್ಯಾಸ್‌ ತಂಡದ ಸದಸ್ಯರಿಗೆ ಹಂಚಿದ್ದ. ಆದರೆ ಹಣವನ್ನು ಸಕಾಲದಲ್ಲಿ ಸಫ್ವಾನ್‌ಗೆ ವಾಪಸ್‌ ಮಾಡಲು ಸಾಧ್ಯವಾಗದ ಕಾರಣ ಅವರೊಳಗೆ ವೈರತ್ವ ಹುಟ್ಟಿಕೊಂಡಿತ್ತು. ಇದು ಮುಂದುವರಿದು ಇಲ್ಯಾಸ್‌ ಕೊಲೆಗೆ ಸಫ್ವಾನ್‌ ತಂಡ ಎರಡು ಬಾರಿ ಪ್ರಯತ್ನಿಸಿತ್ತು ಎಂದು ಹೇಳಲಾಗಿದೆ.

ಗಾಂಜಾ, ಹಫ್ತಾ ವಿವಾದ: ಉಳ್ಳಾಲದಲ್ಲಿ ಗಾಂಜಾ ದಂಧೆ ಮತ್ತು ಹಫ್ತಾ ವಸೂಲಿ ವಿಚಾರದಲ್ಲಿ ಟಾರ್ಗೆಟ್‌ ಮತ್ತು ದಾವುದ್‌ ತಂಡಗಳ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು. ಕೆಲವು ವರ್ಷಗಳ ಹಿಂದೆ ಅಮಾಯಕ ಯುವಕನೋರ್ವ ಟಾರ್ಗೆಟ್‌ ತಂಡದ ಹಫ್ತಾ ವಿರುದ್ಧ ಧ್ವ‌ನಿ ಎತ್ತಿದ್ದ. ಇದು ದಾವುದ್‌ ತಂಡಕ್ಕೆ ಗೊತ್ತಾಗಿ ಟಾರ್ಗೆಟ್‌ ತಂಡದವನ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ವಿದೇಶಕ್ಕೆ ತೆರಳಿದ್ದ ಅಮಾಯಕ ಯುವಕ  ವಾಪಸಾಗುವಷ್ಟರಲ್ಲಿ ವಿಮಾನ ನಿಲ್ದಾಣದಲ್ಲೇ ಯುವಕನಿಗೆ ಎಚ್ಚರಿಕೆ ನೀಡಿದ್ದ ಇಲ್ಯಾಸ್‌ ತಂಡ, ಉಳ್ಳಾಲದಲ್ಲಿ ಆತನ ಕೊಲೆಗೆ ಯತ್ನಿಸಿತ್ತು. ಇದರಿಂದ ದಾವುದ್‌ ಮತ್ತು ಇಲ್ಯಾಸ್‌ ತಂಡಗಳ ನಡುವೆ ದ್ವೇಷ ಬೆಳೆದು, 2017ರ ಸಪ್ಟೆಂಬರ್‌ನಲ್ಲಿ ದಾವೂದ್‌ ಕೊಲೆಗೆ ಇಲ್ಯಾಸ್‌ ಯತ್ನಿಸಿದ ಪ್ರಕರಣವೂ ನಡೆದಿತ್ತು. ಆದರೆ ಪ್ರಕರಣ ಸಂಬಂಧ ವಾರೆಂಟ್‌ ಆದ ಅನಂತರವಷ್ಟೇ ಇಲ್ಯಾಸ್‌ನನ್ನು ಪೊಲೀಸರು ಬಂಧಿಸಿದ್ದರು.

ಹಫ್ತಾ ವಸೂಲಿ, ರೋಲ್‌ಕಾಲ್‌, ಹನಿ ಟ್ರ್ಯಾಪ್‌… ರಾಜಕಾರಣ !
ಉಳ್ಳಾಲ: ಶನಿವಾರ ಬೆಳಗ್ಗೆ ಹತ್ಯೆಗೀಡಾದ ಇಲ್ಯಾಸ್‌ ಯು.ಎಸ್‌. ಯಾನೆ ಟಾರ್ಗೆಟ್‌ ಇಲ್ಯಾಸ್‌ (32) ಉಳ್ಳಾಲದಲ್ಲಿ ಹುಟ್ಟಿದವನು. ಪ್ರಾಥಮಿಕ ಶಿಕ್ಷಣವನ್ನು ಮೊಟಕುಗೊಳಿಸಿದ ಬಳಿಕ ಮಾಸ್ತಿಕಟ್ಟೆಯಲ್ಲಿ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಣ್ಣಪುಟ್ಟ ಗಲಾಟೆ, ಗಾಂಜಾ ದಂಧೆ, ಹಫ್ತಾ ವಸೂಲಿಯಂತಹ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಈತನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ 2010ರಲ್ಲಿ ಪ್ರಥಮ ಪ್ರಕರಣ ದಾಖಲಾಗಿತ್ತು. 

 ಹಫ್ತಾ ವಸೂಲಿಗೆ ಕಾರ್ಪೊರೇಟ್‌ ಟಚ್‌: ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡ ಎರಡೇ ವರ್ಷಗಳಲ್ಲಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡಿದ್ದ ಇಲ್ಯಾಸ್‌, ಉಳ್ಳಾಲ ಮಾಸ್ತಿಕಟ್ಟೆಯಲ್ಲಿ “ಟಾರ್ಗೆಟ್‌ ಟೂರ್ ಆ್ಯಂಡ್‌ ಟ್ರಾವೆಲ್ಸ್‌’ ಎನ್ನುವ ಸಂಸ್ಥೆಯನ್ನು ಆರಂಭಿಸಿದ್ದ. ಹೊರಜಗತ್ತಿಗೆ ವಾಹನಗಳನ್ನು ಬಾಡಿಗೆ ನೀಡುವ ಸಂಸ್ಥೆಯಾಗಿದ್ದ ಟಾರ್ಗೆಟ್‌ನ ಮುಖ್ಯ ಅಜೆಂಡಾ ದೊಡ್ಡ ದೊಡ್ಡ ಬಿಲ್ಡರ್‌ಗಳು, ಉದ್ಯಮಿಗಳು ಸೇರಿದಂತೆ ಹುಡುಗಿ / ಹುಡುಗರ (ಸಲಿಂಗ ಕಾಮ) ಖಯಾಲಿ ಇರುವ ಶ್ರೀಮಂತರನ್ನು ಗುರುತಿಸಿ ಅವರನ್ನು ಟಾರ್ಗೆಟ್‌ ಮಾಡುವುದಾಗಿತ್ತು. ಈ ಮೂಲಕ ಇಲ್ಯಾಸ್‌, “ಟಾರ್ಗೆಟ್‌ ಇಲ್ಯಾಸ್‌’ ಆಗಿ ಕುಖ್ಯಾತನಾಗಿದ್ದ.

ಹನಿಟ್ರ್ಯಾಪ್‌ ಮೂಲಕ ಟಾರ್ಗೆಟ್‌ ಕಾರ್ಯ: ಇಲ್ಯಾಸ್‌ ನೇತೃತ್ವದ ತಂಡ 2012ರಿಂದ 2013ರವರೆಗೆ ಶ್ರೀಮಂತ ಉದ್ಯಮಿಗಳು, ಬಿಲ್ಡರ್‌ಗಳ ಪಟ್ಟಿ ಮಾಡಿ ಅವರ ದೌರ್ಬಲ್ಯದ ಲಾಭ ಪಡೆಯುವ ಕಾರ್ಯ ನಿರ್ವಹಿಸುತ್ತಿತ್ತು. ಹನಿಟ್ರ್ಯಾಪ್‌ಗೆ ತಮ್ಮದೇ ಸಮುದಾಯದ ಯುವತಿಯರನ್ನು ಬಳಸುತ್ತಿದ್ದದ್ದು ಇಲ್ಯಾಸ್‌ ವಿಶೇಷತೆಯಾಗಿತ್ತು. 

ಆರೋಪಿಗಳ ಸುಳಿವು ಪತ್ತೆ: ಕಮಿಷನರ್‌
 ಉಳ್ಳಾಲದ ಟಾರ್ಗೆಟ್‌ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಇಲ್ಯಾಸ್‌ ವಿರುದ್ಧ 23ಕ್ಕೂ ಅಧಿಕ ವಿವಿಧ ಪ್ರಕರಣಗಳು ದಾಖಲಾಗಿವೆ. ಕೊಲೆ ಯತ್ನ ಪ್ರಕರಣವೊಂದರಲ್ಲಿ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇಲ್ಯಾಸ್‌, ಮೂರು ದಿನಗಳ ಹಿಂದೆ ಜಾಮೀನಿನಲ್ಲಿ ಹೊರಬಂದಿದ್ದ. ಆತ ರೌಡಿಶೀಟರ್‌ ಆಗಿದ್ದು, ಈತನ ವಿರುದ್ಧ ಗೂಂಡಾ ಕಾಯಿದೆ ಕೂಡ ದಾಖಲಾಗಿತ್ತು. ಇಲ್ಯಾಸ್‌ನನ್ನು ಟಾರ್ಗೆಟ್‌ ಗುಂಪಿನ ವಿರೋಧಿ  ತಂಡದ ದಾವೂದ್‌ ಮತ್ತು ಸಫಾÌನ್‌ ಹತ್ಯೆ ಮಾಡಿರುವ ಸಾಧ್ಯತೆಯ ಬಗ್ಗೆ ಆತನ ಪತ್ನಿ ದೂರು ನೀಡಿದ್ದಾರೆ. ಇದೊಂದು ಗ್ಯಾಂಗ್‌ವಾರ್‌ ಆಗಿದ್ದು, ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಸುದ್ದಿಗಾರರಿಗೆ ತಿಳಿಸಿದರು.

ಹತ್ಯೆಯಾದ ಇಲ್ಯಾಸ್‌ ಹಪ್ತಾ ವಸೂಲಿ, ರೋಲ್‌ಕಾಲ್‌, ಹನಿಟ್ರ್ಯಾಪ್‌, ದರೋಡೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ಗ್ಯಾಂಗ್‌ವಾರ್‌ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದನು. ಮೂಲತಃ ಉಳ್ಳಾಲ ಮಾಸ್ತಿಕಟ್ಟೆ ಬಳಿಯ ಸುಂದರಿಬಾಗ್‌ ನಿವಾಸಿಯಾಗಿದ್ದು, ಆತನ ವಿರುದ್ಧ ಉಳ್ಳಾಲ ಸೇರಿದಂತೆ ಮಂಗಳೂರು ತಾಲೂಕಿನ ವಿವಿಧ ಠಾಣೆಗಳಲ್ಲಿ, ಬೆಂಗಳೂರು, ಯಲ್ಲಾಪುರ ಠಾಣೆಗಳಲ್ಲಿ ಸುಮಾರು 25ರಷ್ಟು ಪ್ರಕರಣಗಳು ದಾಖಲಾಗಿದ್ದವು. 

ತನಿಖೆಗೆ ಮೂರು ತಂಡ
ಇಲ್ಯಾಸ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಆರೋಪಿಗಳ ಪತ್ತೆಗಾಗಿ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ದಾವೂದ್‌ ಮತ್ತು ಸಫ್ವಾನ್‌ ವಿರುದ್ಧ ಕಾರ್ಯಾಚರಣೆ ನಡೆಸಲಿದೆ. ಇನ್ನೊಂದು ತಂಡ ಮಂಗಳೂರು ಜೈಲಿನಲ್ಲಿ ಟಾರ್ಗೆಟ್‌ ತಂಡದ ತನಿಖೆ ನಡೆಸಲಿದೆ. ಇನ್ನೊಂದು ತಂಡ ಟಾರ್ಗೆಟ್‌ ತಂಡದ ಕ್ರಿಮಿನಲ್‌ಗ‌ಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ