ಕೃಷ್ಣಾಪುರ: ಶಾಲಾ ಪ್ರಾರಂಭೋತ್ಸವ

Team Udayavani, May 30, 2019, 6:00 AM IST

ಕೃಷ್ಣಾಪುರ: ಶಾಲಾ ಮಕ್ಕಳ ಭ‌ವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದು. ಪೋಷಕರೂ ಮಕ್ಕಳ ವಿದ್ಯಾಭ್ಯಾಸವನ್ನು ಗಮನಿಸಿ ಅವಶ್ಯ ವಿದ್ದಲ್ಲಿ ಶಾಲೆಗೆ ಭೇಟಿಯಿತ್ತು ವಿಚಾರಿಸಿ ಅವರ ಬಗ್ಗೆ ಕಾಳಜಿ ವಹಿಸಿ ವಿದ್ಯಾ ಸಂಪನ್ನ ರಾಗುವಂತೆ ನೋಡಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ತಿಲಕ್‌ರಾಜ್‌ ಕೃಷ್ಣಾಪುರ ಹೇಳಿದರು.

ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢ‌ ಶಾಲೆ ಕೃಷ್ಣಾಪುರ – ಕಾಟಿಪಳ್ಳ ಇಲ್ಲಿ ಜಂಟಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಏರ್ಪಡಿಸಿದ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಸುಧಾಕರ ಕಾಮತ್‌ ಮಾತನಾಡಿ ಮಕ್ಕಳು ತನ್ನ ವಿದ್ಯಾಭ್ಯಾಸದೊಂದಿಗೆ ಇತರ ಚಟುವಟಿಕೆಗಳಲ್ಲೂ ತನ್ನ ಗಮನವನ್ನು ಕೇಂದ್ರೀಕರಿಸಿ ವಿದ್ಯೆಯೊಂದಿಗೆ ಮಾನಸಿಕ ವಿಕಸನವನ್ನು, ದೈಹಿಕ ಸದೃಢತೆಯನ್ನು ಮೈಗೂಡಿಸಿಕೊಂಡು ಸತøಜೆಯಾಗಿ ಬಾಳಬೇಕು. ಶಾಲಾ ಜೀವನ ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ ಎಂದು ಹೇಳಿದರು.

ವೇದಿಕೆಯಲ್ಲಿ ಎಸ್‌ ಡಿ ಎಂ ಸಿ ಅಧ್ಯಕ್ಷ ಕರುಣಾಕರ್‌, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ್‌, ಉಪಾಧ್ಯಕ್ಷ ಮಾಧವ ದೇವಾಡಿಗ, ಮಾಧವ ಬಂಗೇರ, ಭಾಸ್ಕರ್‌ ಆಚಾರ್ಯ, ಪ್ರಶಾಂತ್‌ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಝಾಹಿದ ಮುತಹØರ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ