Udayavni Special

ಕೂಳೂರು ಸೇತುವೆಗೆ ಮತ್ತೆ ‘ತೇಪೆ ಭಾಗ್ಯ’! :ವಾಹನ ಸವಾರರ ಸಂಚಾರಕ್ಕೆ ಸಂಚಕಾರ!


Team Udayavani, Jun 14, 2021, 10:56 AM IST

ಕೂಳೂರು ಸೇತುವೆಗೆ ಮತ್ತೆ ‘ತೇಪೆ ಭಾಗ್ಯ’! :ವಾಹನ ಸವಾರರ ಸಂಚಾರಕ್ಕೆ ಸಂಚಕಾರ!

ಮಂಗಳೂರು: ಕಳೆದ ಲಾಕ್ ಡೌನ್ ವೇಳೆಯಲ್ಲಿ ಸುಣ್ಣ ಬಣ್ಣ ಬಳಿದುಕೊಂಡು ಸಿಂಗಾರಗೊಂಡಿದ್ದ ಕೂಳೂರು ಕಮಾನು ಸೇತುವೆಯಲ್ಲಿ ಮತ್ತೆ ಗುಂಡಿಗಳದ್ದೇ ರಾಜ್ಯಭಾರ ಎಂಬಂತಾಗಿದೆ. ಇಂದು ಗುಂಡಿಗಳಿಗೆ ಯಥಾಪ್ರಕಾರ ತೇಪೆ ಕಾರ್ಯ ನಡೆಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು ಇದರಿಂದ ಮುಂಜಾನೆ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬ್ಲಾಕ್ ಉಂಟಾಗಿತ್ತು. ವಾಹನಗಳು ಪಣಂಬೂರು ತನಕ ಮುಂದಕ್ಕೆ ಚಲಿಸಲಾರದೇ ಬಾಕಿಯಾಗಿದ್ದು ವಾಹನ ಸವಾರರು ಹೈರಾಣಾಗುವಂತಾಯಿತು.

ಕೂಳೂರು ಕಮಾನು ಸೇತುವೆ ಮೇಲಿನ ರಸ್ತೆ ಕೆಲವರ್ಷಗಳ ಹಿಂದೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಸ್ತೆಗೆ ಕಳೆದ ವರ್ಷ ತೇಪೆ ಕಾರ್ಯ ಮಾಡಿದ್ದಲ್ಲದೆ ಮುರಿದ ಸೇತುವೆಯ ಇಕ್ಕೆಲದ ತಡೆಗೋಡೆಗಳಿಗೆ ಸುಣ್ಣ ಬಳಿದು ಉದ್ಘಾಟನೆ ನೆರವೇರಿಸಲಾಗಿತ್ತು. ಸೇತುವೆ ಕಾಮಗಾರಿಗೆಂದು ಹಲವು ತಿಂಗಳುಗಳ ಕಾಲ ರಸ್ತೆಯನ್ನು ಮುಚ್ಚಿ ಹೊಸ ಸೇತುವೆಯಲ್ಲಿ ಒನ್ ವೇ ಕೊಟ್ಟಿದ್ದರಿಂದ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡಿದ್ದರು. ಆದರೆ ಇಷ್ಟೆಲ್ಲ ಆಗಿಯೂ ಹಳೇ ಸೇತುವೆಗೆ ಟಚ್ ಅಪ್ ನೀಡಿದ್ದು ಈ ಬಾರಿಯ ಮಳೆಗಾಲಕ್ಕೂ ಮುನ್ನವೇ ರಾಡಿ ಎದ್ದು ಹೋಗಿತ್ತು. ಇಂದು ಮತ್ತೆ ಸೇತುವೆಗೆ ತೇಪೆ ಕಾರ್ಯ ನಡೆಸುತ್ತಿದ್ದು ವಾಹನ ಸವಾರರಿಗೆ ಕಂಟಕ ಎದುರಾಗಿದೆ. ಮುಂಜಾನೆ ಲಾಕ್ ಡೌನ್ ಸಡಿಲಿಕೆ ವೇಳೆ ತುರ್ತು ಕಾರ್ಯಗಳಿಗೆ ಧಾವಿಸುವ ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದರು.

ಇದನ್ನೂ ಓದಿ: ಕಿಮ್ಸ್ ಚಿಕಿತ್ಸಾ ಕೊಠಡಿಯ ಶೌಚಾಲಯದಲ್ಲಿ ಕೋವಿಡ್ ಸೋಂಕಿತ ಆತ್ಮಹತ್ಯೆ

ಲಾಕ್ ಡೌನ್ ಪ್ರಾರಂಭದಲ್ಲೇ ಮಾಡಬಹುದಿತ್ತು!:

ಕೂಳೂರು ಸೇತುವೆಗೆ ತೇಪೆ ಹಚ್ಚಲು ಲಾಕ್ ಡೌನ್ ಮುಗಿಯುವವರೆಗೆ ಕಾಯುವ ಬದಲು ಪ್ರಾರಂಭದಲ್ಲೇ ಮಾಡಬಹುದಿತ್ತು. ಬೆಳಗ್ಗೆ 10 ಗಂಟೆಯ ನಂತರ ವಾಹನ ಸಂಚಾರ ಕಡಿಮೆಯಾಗುತ್ತಿದ್ದು ಈ ವೇಳೆ ಕಾಮಗಾರಿ ನಡೆಸುತ್ತಿದ್ದರೆ ಯಾರಿಗೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಬೆಳ್ಳಂಬೆಳಗ್ಗೆ ರಸ್ತೆ ತಡೆ ಮಾಡಿ ಗುಂಡಿ ಮುಚ್ಚಲು ಮುಂದಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕೂಡ ನಿಧಾನಗತಿಯಲ್ಲಿ ಸಾಗುತ್ತಿದ್ದು ಮಳೆಗಾಲ ಮುಗಿಯುವವರೆಗೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಒಟ್ಟಾರೆ ಕೂಳೂರು ಸೇತುವೆ ಎಂದರೆ ವಾಹನ ಸವಾರರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

tyy5654

ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ

DK

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಜತೆ ಡಿಕೆಶಿ ಚರ್ಚೆ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ftt

ಕೋವಿಡ್ : ರಾಜ್ಯದಲ್ಲಿಂದು 1785 ಹೊಸ ಪ್ರಕರಣ ಪತ್ತೆ, 25 ಜನರ ಸಾವು

5-13

ಮಣ್ಣು ಮುಕ್ಕಿದ ಮುಂಗಾರು ಬೆಳೆ!

centre-sending-vaccines-to-bjp-states-bengal-deprived-mamata-banerjee-shoots-letter-to-pm-modi

ಕೇಂದ್ರ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಲಸಿಕೆಯನ್ನು ಪೂರೈಸುತ್ತಿದೆ : ದೀದಿ

DK-SURESH

ಜಮೀರ್ ಅವರ ಮೇಲಿನ ಇ.ಡಿ. ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ. ಸುರೇಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

surathkal

ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ

Untitled-1

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

Ramasamudra

ರಾಮಸಮುದ್ರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಮೇಲ್ಚಾವಣಿ ಕುಸಿತ: ಇಬ್ಬರು ಸಿಬ್ಬಂದಿಗೆ ಗಾಯ

t8u658j67j

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ

tyy5654

ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ

Socialist-Unity

ಸಮಾಜದ ಮುನ್ನೆಡೆಗೆ ಮಾರ್ಕ್ಸ್ ವಾದ ಚಿಂತನೆ ಅತ್ಯಗತ್ಯ: ಎಸ್‌ಯುಸಿಐ

DK

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಜತೆ ಡಿಕೆಶಿ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.