ಕ್ರಿಕೆಟ್ ಟರ್ಫ್ ಪಿಚ್ ನಿರ್ಮಾಣಕ್ಕೆ ಭೂಮಿಪೂಜೆ
Team Udayavani, Feb 1, 2018, 1:59 PM IST
ಮಹಾನಗರ: ಮಂಗಳೂರು ವಿ.ವಿ. ಕಾಲೇಜು, ಕರಾವಳಿ ಕ್ರಿಕೆಟ್ ಅಕಾಡೆಮಿ ಇದರ ಆಶ್ರಯದಲ್ಲಿ ಕ್ರಿಕೆಟ್ ಟರ್ಫ್ ಪಿಚ್
ನಿರ್ಮಾಣದ ಭೂಮಿಪೂಜೆಯನ್ನು ಬುಧವಾರ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಕ್ರಿಕೆಟ್ ಆಟದತ್ತ ಹೆಚ್ಚಿನ ಒಲವು ತೋರುತ್ತಿದ್ದು, ಈ ನಿಟ್ಟಿನಲ್ಲಿ ಟರ್ಫ್ ಪಿಚ್ ಉಪಯೋಗವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ. ಉಪಪ್ರಾಂಶುಪಾಲ ಉದಯ ಕುಮಾರ್, ಕರಾವಳಿ ಕ್ರಿಕೆಟ್ ತಂಡದ ಸಂತೋಷ್, ಸಬಿತಾ ಸಹಿತ ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಾಣಿ ನಿರೂಪಿಸಿ, ವಂದಿಸಿದರು.