ಮಂಗಳೂರು ಡಿಸಿ ಕಚೇರಿಯ ಲಿಫ್ಟ್ ಜಾಮ್ ಆಗಿ ಪರದಾಡಿದ ಮಹಿಳೆ!
Team Udayavani, Jul 19, 2021, 9:33 AM IST
ಮಂಗಳೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ಬಾಗಿಲು ಜಾಮ್ ಆಗಿ ಮಹಿಳೆಯೊಬ್ಬರು ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಲಿಫ್ಟ್ ಜಾಮ್ ಆದ ಕಾರಣ ಕಚೇರಿಯ ಕೆಲಸದಾಳು ಮಹಿಳೆ ಸುಮಾರು 15 ನಿಮಿಷ ಕಾಲ ಲಿಫ್ಟ್ ನೊಳಗೆ ಬಾಕಿಯಾದರು. ಕೂಡಲೇ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.
ಇದನ್ನೂ ಓದಿ:ಉತ್ತರಾಖಂಡ್: ಉತ್ತರಕಾಶಿಯಲ್ಲಿ ಮೇಘಸ್ಫೋಟಕ್ಕೆ ಮೂವರ ಸಾವು, ನಾಲ್ಕು ಮಂದಿ ನಾಪತ್ತೆ
ಇತ್ತೀಚೆಗೆ ನಗರದ ಮಿನಿ ವಿಧಾನ ಸೌಧದ ಲಿಫ್ಟ್ ಜಾಮ್ ಆಗಿ ಅದರೊಳಗೆ ಸಿಲುಕಿದ್ದ ಮೂವರನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ್ದರು.