ಗಂಭೀರ ಸ್ಥಿತಿಯಲ್ಲಿರುವ H1N1 ಪೀಡಿತೆಗೆ ನೌಕರರ ಸಂಘದ ಸಹಾಯ ಹಸ್ತ
Team Udayavani, Jul 29, 2017, 8:40 AM IST
– ಎಚ್1ಎನ್1 ಪೀಡಿತೆ ಪಂಚಾಯತ್ ನೌಕರರ ಸ್ಥಿತಿ ಗಂಭೀರ
ವೇಣೂರು: ಹೇಳಲು ಈಕೆ ಪಂಚಾಯತ್ ನೌಕರೆ. ಸರಕಾರದ ಹತ್ತು ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸೇವಾನಿಷ್ಠೆ ಈಕೆಯದು. ಆದರೆ ಪಂಚಾಯತ್ ನೌಕರರ ಪಾಲಿಗೆ ಸಿಗುವ ಸವಲತ್ತುಗಳಲ್ಲಿ ಕಿಂಚಿತ್ತು ಸಂಬಳ ಬಿಟ್ಟರೆ ಬೇರೆ ಯಾವ ಸವಲತ್ತೂ ಈಕೆಯ ಪಾಲಿಗಿಲ್ಲ. ಪ್ರಸುತ ಈಕೆ ಎಚ್1ಎನ್1ನಿಂದಾಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.
ವೇಣೂರು ಗಾ.ಪಂ.ನಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆಯ ಸ್ಥಳಿಯಾಡಳಿತ ಅಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಷ್ಪಾವತಿಯವರ ನೋವಿನ ಕತೆಯಿದು. ತುಂಬು ಗರ್ಭಿಣಿಯಾಗಿದ್ದ ಪುಷ್ಪಾವತಿ ಅವರನ್ನು ಜು.21ರಂದು ತುರ್ತುಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಗುವನ್ನು ಹೊರತೆಗೆಯಲಾಗಿದೆ. ಆದರೆ ಪುಷ್ಪಾವತಿ ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಸೂಕ್ತ ಚಿಕಿತ್ಸೆಗಾಗಿ ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ. ಪಂಚಾಯತ್‌ನಲ್ಲಿ ತಾತ್ಕಾಲಿಕ ನೌಕರರಿಗೆ ಯಾವುದೇ ವೈದ್ಯಕೀಯ ಭದ್ರತೆ (ಇಎಸ್‌ಐ) ಸೌಲಭ್ಯವಿಲ್ಲ. ಈಕೆಯದ್ದು ತುಂಬಾ ಬಡತನದ ಕುಟುಂಬ. ಹಾಗಾಗಿ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದೆ ಅಸಹಾಯಕವಾಗಿದ್ದಾರೆ.
ನೆರವಿಗೆ ಮುಂದಾದ ಸಂಘ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಗ್ರಾ.ಪಂ. ನೌಕರರಿಂದ ಒಟ್ಟು 1.50 ಲ.ರೂ. ಸಂಗ್ರಹಿಸಲಾಗಿದ್ದು ಪುಷ್ಪಾವತಿ ಮತ್ತು ಅವರ ಮಗುವಿನ ಜೀವ ಉಳಿಸುವ ಪ್ರಯತ್ನ ಮುಂದುವರಿದಿದೆ.
ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಲಿ
ಇದು ಕೇವಲ ಪುಷ್ಪಾವತಿಯೊಬ್ಬರ ನೋವಾಗಿರದೆ ಇಡೀ ರಾಜ್ಯದ ಗ್ರಾ.ಪಂ. ನೌಕರರ ನೋವು ಮತ್ತು ಸಮಸ್ಯೆಯಾಗಿದೆ. ಇನ್ನಾದರೂ ರಾಜ್ಯ ಸರಕಾರ ಗ್ರಾ.ಪಂ. ನೌಕರರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವರಿಗೂ ಸೇವಾ ಭದ್ರತೆ, ಆರೋಗ್ಯ ಮತ್ತು ಕುಟುಂಬದ ಭದ್ರತೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಸಲಿ.
– ದೇವಿಪ್ರಸಾದ್ ಬೊಳ್ಮ, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್
ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್
ಪಠ್ಯ ವಿಚಾರದಲ್ಲಿ ರಾಜಕೀಯ ದುರ್ಲಾಭಕ್ಕೆ ಕಾಂಗ್ರೆಸ್ ಯತ್ನ: ಸಚಿವ ನಾಗೇಶ್
ಅಪಘಾತಕ್ಕೀಡಾದರೂ ಪರೀಕ್ಷೆ ಬರೆದು ಗೆದ್ದಳು
ಬಂಟ್ವಾಳ: ಅಪ್ರಾಪ್ತ ವಯಸ್ಕ ಬಾಲಕಿಯ ಜತೆ ದೈಹಿಕ ಸಂಪರ್ಕ; ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ