ನೌಕಾಪಡೆ ವಿಮಾನ ತುರ್ತು ಭೂಸ್ಪರ್ಶ

Team Udayavani, Mar 1, 2017, 3:43 PM IST

mig.jpg

- ಚಕ್ರ ಸ್ಫೋಟಗೊಂಡು ರನ್‌ವೇಯಲ್ಲಿ  ಬಾಕಿ
- ವಿಮಾನಗಳ ಪಥ ಬದಲು; ಸಂಚಾರ ವ್ಯತ್ಯಯ
ಮಂಗಳೂರು
: ನೌಕಾಪಡೆಗೆ ಸೇರಿದ ಯುದ್ಧ ವಿಮಾನ ತಾಂತ್ರಿಕ ಕಾರಣಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತುರ್ತು ಭೂ ಸ್ಪರ್ಶ ಮಾಡಿದೆ. ಅದೇ ವೇಳೆಗೆ ವಿಮಾನದ ಚಕ್ರ ಸ್ಫೋಟಗೊಂಡಿದ್ದರಿಂದ ರನ್‌ವೇಯಲ್ಲೇ ಬಾಕಿಯಾಗಿ ಇತರ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಯಿತು.

ರಕ್ಷಣಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಸಾಗುತ್ತಿದ್ದ ನೌಕಾಪಡೆಯ ವಿಮಾನ (ಮಿಗ್‌-29ಕೆ) ಸಂಜೆ ಸುಮಾರು 5 ಗಂಟೆಗೆ ತಾಂತ್ರಿಕ ಕಾರಣಗಳಿಂದ ರನ್‌ವೇಯಲ್ಲಿ ಇಳಿಯುತ್ತಿದ್ದಂತೆ ಇದರ ಹಿಂದಿನ ಚಕ್ರ ಸ್ಫೋಟಗೊಂಡು ಆತಂಕ ಸೃಷ್ಟಿಯಾಯಿತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ವಿಮಾನವನ್ನು ಹತೋಟಿಗೆ ತರುವಲ್ಲಿ ಪೈಲಟ್‌ಗಳು ಸಫಲರಾಗಿದ್ದರು. ಚಕ್ರ ಸ್ಫೋಟಗೊಂಡು ವಿಮಾನ ರನ್‌ವೇಯಲ್ಲಿ ಬಾಕಿಯಾಗಿದ್ದರಿಂದ ಇತರ ಪ್ರಯಾಣಿಕ ವಿಮಾನಗಳು ಇಳಿಯಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ವಿಮಾನಗಳ ದಿಕ್ಕು ಬದಲಾಯಿಸಿ, ಇನ್ನೂ ಕೆಲವು ವಿಮಾನಗಳ ಸಮಯದಲ್ಲಿ ವ್ಯತ್ಯಯ ಮಾಡಲು ಸೂಚಿಸಲಾಯಿತು.

ಬಳಿಕ ಹೆಲಿಕಾಪ್ಟರ್‌ ಮೂಲಕ ಗೋವಾದಿಂದ ವಿಮಾನದ ಟೈರ್‌ ಅನ್ನು ತರಿಸಲಾಯಿತು. ತಂತ್ರಜ್ಞರ ಸಹಾಯದಿಂದ ರನ್‌ವೇಯಿಂದ ವಿಮಾನವನ್ನು ಸರಿಸಿ ಹಳೇ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗಿದೆ. ಚಕ್ರ ಸ್ಫೋಟಗೊಂಡಿದ್ದ ವಿಮಾನವನ್ನು ಸರಿಸಿದ್ದರಿಂದ 9 ಗಂಟೆಯ ಬಳಿಕ ವಿಮಾನಗಳ ಆಗಮನ ಹಾಗೂ ನಿರ್ಗಮನ ಸುಸ್ಥಿತಿಗೆ ಬಂದಿದೆ.

3 ವಿಮಾನಗಳ ಪಥ ಬದಲು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಜೆ 5 ಗಂಟೆಯ ವೇಳೆಗೆ ಇಳಿಯಬೇಕಿದ್ದ ದುಬಾೖಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರಸ್ಸನ್ನು ಕೊಚ್ಚಿಗೆ ಕಳುಹಿಸಿದ್ದು, 5.15ಕ್ಕೆ ದಿಲ್ಲಿಯಿಂದ ಬಂದ ಜೆಟ್‌ ಏರ್‌ವೆàಸ್‌ ವಿಮಾನ ಹಾಗೂ 5.30ಕ್ಕೆ ದುಬಾೖಯಿಂದ ಬಂದ ಸ್ಪೈಸ್‌ ಜೆಟ್‌ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು.
ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿವಿಧ ಸಮಯಕ್ಕೆ ಅನುಗುಣವಾಗಿ ಬರಬೇಕಿದ್ದ ವಿಮಾನಗಳನ್ನು ತಡವಾಗಿ ಬರುಧಿವಂತೆ ಸೂಚಿಸಲಾಗಿದ್ದರಿಂದ, ಕೆಲವು ವಿಮಾನಧಿಗಳ ಸಮಯದಲ್ಲಿ ವ್ಯತ್ಯಯವಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಅವರು ತಿಳಿಸಿದ್ದಾರೆ.

ಹೈಡ್ರಾಲಿಕ್‌ ಸಮಸ್ಯೆ
ನೌಕಾಪಡೆಗೆ ಸೇರಿದ ಮಿಗ್‌ 29 ಕೆ. ಫೈಟರ್‌ ಜೆಟ್‌ನಲ್ಲಿ ಹೈಡ್ರಾಲಿಕ್‌ ಸಮಸ್ಯೆ ಕಾಣಿಸಿದ್ದರಿಂದ ಪೈಲಟ್‌ ಪಥ ಬದಲಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ನಿರ್ಧರಿಸಿದರು. ಈ ಯುದ್ಧ ವಿಮಾನ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಿಂದ ಹೊರಟಿತ್ತು.

2ನೇ ದಿನವೂ ತುರ್ತು ಭೂಸ್ಪರ್ಶ!
ಮುಂಬಯಿಯಿಂದ ಕೊಚ್ಚಿಯತ್ತ 58 ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿದ್ದ ಏರ್‌ಇಂಡಿಯಾ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಸೋಮವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ರಾತ್ರಿ 7.30ರ ವೇಳೆಗೆ ಇಳಿದ ವಿಮಾನದ ಸಮಸ್ಯೆ ಬಗೆಹರಿಸಲು ರಾತ್ರಿ ವರೆಗೂ ಪ್ರಯತ್ನ ನಡೆಸಲಾಗಿತ್ತು. ಬಳಿಕ ರಾತ್ರಿ 11.30ಕ್ಕೆ ಕೊಚ್ಚಿಯಿಂದ ಏರ್‌ಇಂಡಿಯಾ ವಿಮಾನವೊಂದು ಬಂದು 12 ಗಂಟೆಯ ವೇಳೆಗೆ ಪ್ರಯಾಣಿಕರೊಂದಿಗೆ ತೆರಳಿತ್ತು. ತಾಂತ್ರಿಕ ತೊಂದರೆಗೊಳಗಾಗಿದ್ದ ಈ ವಿಮಾನವೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ ಎನ್ನಲಾಗಿದ್ದು, ಬುಧವಾರ ಹಾರಾಟ ನಡೆಸಲಿದೆ.

ಟಾಪ್ ನ್ಯೂಸ್

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweq-eeqw

Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.