Udayavni Special

ನೂತನ ಸೇತುವೆ ನಿರ್ಮಾಣ ಅಗತ್ಯ


Team Udayavani, Aug 2, 2021, 3:40 AM IST

ನೂತನ ಸೇತುವೆ ನಿರ್ಮಾಣ ಅಗತ್ಯ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವ ಸ್ಥಾನದ ಸಮೀಪ ಇರುವ ಕಟೀಲು- ಬಜಪೆ- ಮಂಗಳೂರು ಸಂಪರ್ಕ ಕಲ್ಪಿಸುವ ಸೇತುವೆಗೆ ಈಗ 82 ವರುಷ. ಈ ಮಾರ್ಗವಾಗಿ ದಿನಂಪ್ರತಿ ಓಡಾಡುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾ ಗುತ್ತಿದೆ. ಈ ಕಾರಣಕ್ಕಾಗಿ ಸೇತುವೆಯನ್ನು ವಿಸ್ತರಿಸುವ ಅಥವಾ ನೂತನ ಸೇತುವೆ ನಿರ್ಮಿಸುವ ಕಾರ್ಯ ಅಗತ್ಯವಿದೆ.

ಸ್ಥಳೀಯವಾಗಿ ಅತ್ಯಂತ ಹಳೆಯ ಸೇತುವೆಯಾಗಿದೆ. 1939 ಅಕ್ಟೋಬರ್‌ 9ರಂದು ಅಂದಿನ ಮೈಸೂರು ಸರಕಾರ ದಲ್ಲಿ ದಿವಾನರಾಗಿದ್ದ ಮಿರ್ಜಾ ಮಹಮ್ಮದ್‌ ಇಸ್ಮಾಯಿಲ್‌ ಲೋಕಾ ರ್ಪಣೆಗೊಳಿಸಿದ್ದರು. ಸುಮಾರು 73,000 ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.

ಮಂಗಳೂರು ಬಜಪೆಯಿಂದ ಕಟೀಲಿ ಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ವಿಮಾನ ನಿಲ್ದಾಣ, ಕಟೀಲು ಕ್ಷೇತ್ರಗಳಿಗೆ ಈ ಹಾದಿ ಪ್ರಾಮುಖ್ಯವಾಗಿದೆ.

ಮರವೂರು ಸಂಕ ಆಗಿದ್ದರೂ 1969 ರಲ್ಲಿ ಉಪಯೋಗ ಆರಂಭವಾಯಿತು. ಆ ತನಕ ಮರವೂರಿಗೆ ಒಂದು ದೋಣಿಯಲ್ಲಿ ಈ ಕಡೆಗೆ ಬಂದು ಬರಬೇಕಾಗಿತ್ತು. 1944ರಲ್ಲಿ ನೆರೆ ಬಂದಾಗ ಎಕ್ಕಾರು ಸೇತುವೆ ಹೋಗಿತ್ತು. 1950ರಲ್ಲಿ ಹೊಸದಾಗಿ ನಿರ್ಮಾಣವಾಯಿತು. ಕಟೀಲಿನಲ್ಲಿ ಸೇತುವೆ ನಿರ್ಮಾಣ ಆಗುವ ಮೊದಲು ವಯಾ ಸುರತ್ಕಲ್‌ ಅಥವಾ ಮೂಡುಬಿದಿರೆ ಆಗಿ ಹೋಗುತ್ತಿದ್ದರು. ಆ ಕಾಲದಲ್ಲಿ ಹನ್ನೆರಡೂ ತಿಂಗಳು ನೀರು ಹರಿಯುತ್ತಿತ್ತಂತೆ. ಈಗ ಆ ಅವಧಿ ಕಡಿಮೆ ಆಗಿದೆ. ಆದರೂ ಸೇತುವೆ ಇಲ್ಲದೆ ಇಲ್ಲಿ ಸಂಚಾರ ಅಸಾಧ್ಯ ಎಂಬ ಸ್ಥಿತಿ ಇದೆ. ಕೈಕಂಬ-ಬಿ.ಸಿ. ರೋಡ್‌ ಊರುಗಳಿಗೂ ಇತ್ತ ಬೆಳ್ಮಣ್‌, ಸುರತ್ಕಲ್‌, ಕಿನ್ನಿಗೋಳಿ, ಮೂಲ್ಕಿ, ಉಡುಪಿಗಳಿಗೂ ಈ ಸೇತುವೆ ಅತಿ ಮುಖ್ಯ ಸಂಪರ್ಕ ಸೇತುವೆಯಾಗಿದೆ.

ಕಟೀಲು ದೇಗುಲದ ಎದುರಿನಿಂದ ಹೋಗುವ ರಾಜ್ಯ ಹೆದ್ದಾರಿಯನ್ನು ಬೈಪಾಸ್‌ ರಸ್ತೆ ರಚಿಸುವ ಪ್ರಸ್ತಾವ ಇತ್ತು. ಈ ಸೇತುವೆಯನ್ನು ಗಟ್ಟಿಗೊಳಿಸುವ, ವಿಸ್ತರಿಸುವ ಅನಿವಾರ್ಯವಿದೆ.

ಹೆಚ್ಚಿದ ವಾಹನ ಸಂಚಾರ :

ಈ ಹೆದ್ದಾರಿ ಕಟೀಲು ಬ್ರಹ್ಮ ಕಲಶ ಸಂದರ್ಭ ಸಾಕಷ್ಟು ವಿಸ್ತರಣೆ ಗೊಂಡಿದ್ದು, ರಸ್ತೆ ಚೆನ್ನಾಗಿರು ವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಮರವೂರು ಸೇತುವೆ ಗಿಂತ ಹಳೆಯ ದಾಗಿರುವ ಕಟೀಲು ಸೇತುವೆ ಬಗ್ಗೆ ಜನ ಪ್ರತಿನಿಧಿ ಗಳು ಅಧಿಕಾರಿಗಳು ಗಮನ ಹರಿಸಬೇ ಕಾಗಿದೆ. ಸೇತುವೆಯ ಧಾರುಣ ಸಾಮರ್ಥ್ಯವನ್ನು ಹೆದ್ದಾರಿ ಇಲಾಖೆ ಯವರು ಪರೀಕ್ಷಿಸುವಂತೆ ಸ್ಥಳೀಯರ ಆಗ್ರಹವಾಗಿದೆ.

ಕಟೀಲು ಸೇತುವೆ ಬಗ್ಗೆ ಇಲಾಖೆಯ ಮೂಲಕವಾಗಿ ಧಾರಣ ಸಾಮರ್ಥ್ಯ ಹಾಗೂ ಅದರ ಗಟ್ಟಿಮುಟ್ಟಿದ ಬಗ್ಗೆ ಪರಿಶೀಲನೆ ಆಗಬೇಕಾಗಿದೆ. ಇಲ್ಲಿನ ಬೈಪಾಸ್‌ ರಸ್ತೆಯ ಬಗ್ಗೆ ಪ್ರಸ್ತಾವನೆಯಿದ್ದು, ಇಲಾಖೆಯು ಈ ಬಗ್ಗೆ ಚಿಂತನೆ ನಡೆಸಿದೆ. ಜನ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ವಿಸ್ತರಿಸುವ, ಬೈಪಾಸ್‌ ರಸ್ತೆ ನಿರ್ಮಿಸುವುದು ಅತೀ ಅಗತ್ಯ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಗಮನ ಸೆಳೆಯಲಾಗುವುದು. -ಉಮಾನಾಥ ಕೋಟ್ಯಾನ್‌, ಶಾಸಕರು

 

-ರಘುನಾಥ ಕಾಮತ್‌ ಕೆಂಚನಕೆರೆ

 

ಟಾಪ್ ನ್ಯೂಸ್

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸ್ತಿಕಟ್ಟೆ : ಶ್ರೀ ಪಾಡಂಗರ ಭಗವತಿ ದೈವಸ್ಥಾನಕ್ಕೆ ನುಗ್ಗಿ ಪಂಚಲೋಹದ ಮೊಗ ದೋಚಿದ ಕಳ್ಳರು

ಮಾಸ್ತಿಕಟ್ಟೆ : ಶ್ರೀ ಪಾಡಂಗರ ಭಗವತಿ ದೈವಸ್ಥಾನಕ್ಕೆ ನುಗ್ಗಿ ಪಂಚಲೋಹದ ಮೊಗ ದೋಚಿದ ಕಳ್ಳರು

ಉಳ್ಳಾಲ : ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದ ಬಾಲಕ ಪವಾಡಸದೃಶ ಪಾರು

ಉಳ್ಳಾಲ : ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದ ಬಾಲಕ ಪವಾಡಸದೃಶ ಪಾರು

Untitled-1

ಮಕ್ಕಳಲ್ಲಿ ವೈರಲ್‌ ಜ್ವರ: ನಿರ್ಲಕ್ಷ್ಯ ಬೇಡ 

ಉಷ್ಣಾಂಶ ಏರಿಕೆ; ಮಳೆ ಮತ್ತಷ್ಟು ದೂರ ಸಾಧ್ಯತೆ

ಉಷ್ಣಾಂಶ ಏರಿಕೆ; ಮಳೆ ಮತ್ತಷ್ಟು ದೂರ ಸಾಧ್ಯತೆ

Untitled-1

ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.