Oct. 19: ಹೈದರಾಬಾದ್ಗೆ ವಿಮಾನ ಸೇವೆ ಆರಂಭ
Team Udayavani, Oct 11, 2023, 11:46 PM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ ನಡುವೆ ಅ.19ರಿಂದ ಇಂಡಿಗೋ ಸಣ್ಣ ವಿಮಾನ ಸಂಚಾರ ಆರಂಭವಾಗಲಿದೆ. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಸಂಚರಿಸುವ ಮೂರನೇ ನಿತ್ಯ ವಿಮಾನ ಇದಾಗಿದೆ.
ಮಂಗಳೂರಿಗೆ ಮಧ್ಯಾಹ್ನ 2.15ಕ್ಕೆ ಇಂಡಿಗೋ ವಿಮಾನ (6ಇ 7536) ಆಗಮಿಸಲಿದ್ದು, ಮಧ್ಯಾಹ್ನ 2.35ಕ್ಕೆ(6ಇ 7538) ಹೈದರಾಬಾದ್ಗೆ ತೆರಳಲಿದೆ. ಈಗಾಗಲೇ ಇಂಡಿಗೋ ವಿಮಾನ ಬೆಳಗ್ಗೆ 7.40ಕ್ಕೆ ಮಂಗಳೂರಿಗೆ ಆಗಮಿಸಿ, 20 ನಿಮಿಷ ಬಳಿಕ ಹೈದರಾಬಾದ್ಗೆ ತೆರಳುತ್ತದೆ. ಇನ್ನೊಂದು ವಿಮಾನ ತಡರಾತ್ರಿ 10.15ಕ್ಕೆ ಮಂಗಳೂರಿಗೆ ಆಗಮಿಸಿ 10.35ಕ್ಕೆ ಹೈದರಾಬಾದ್ಗೆ ಮರಳುತ್ತದೆ. ಈ ವೇಳಾಪಟ್ಟಿ ಅ. 28ರ ವರೆಗೆ ಇರಲಿದೆ.
ಇಂಡಿಗೋದ ಏರ್ಬಸ್ ನಿಯೋ ವಿಮಾನ
ಮಂಗಳೂರು ಸೇರಿದಂತೆ ಪ್ರಮುಖ ಕಡೆಗಳಿಗೆ ಸಂಚರಿಸುತ್ತಿದೆ. ಇಂಡಿಗೋದ ಸಣ್ಣ ವಿಮಾನಗಳು ಚೆನ್ನೈ-ಹೈದರಾಬಾದ್, ಬೆಂಗಳೂರು, ದಿಲ್ಲಿ, ಮುಂಬಯಿ, ಪುಣೆ ನಡುವೆ ನೇರ ಯಾನ, ಕೋಲ್ಕತ್ತಾ ಮತ್ತು ಪಾಟ್ನಾಕ್ಕೆ ವಯಾ ಬೆಂಗಳೂರು ಮೂಲಕ ಹಾಗೂ ರಾಂಚಿಗೆ ವಯಾ ಪುಣೆ ಮೂಲಕ ದೇಶಿ ಸಂಚಾರ ನಡೆಸುತ್ತಿವೆ. ದುಬೈಗೂ ಇಂಡಿಗೋ ಯಾನ ಇದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ