ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ
ಮೀನುಗಾರಿಕೆ ಇಲಾಖೆಯ ಯೋಜನೆ
Team Udayavani, Jan 20, 2022, 8:05 AM IST
ಸಾಂದರ್ಭಿಕ ಚಿತ್ರ.
ಪುತ್ತೂರು: ಹೊಳೆ, ತೋಡು, ಕೆರೆಗಳಲ್ಲಿ ಕಂಡುಬರುವ ಹೇರಳ ಔಷಧೀಯ ಗುಣ ಹೊಂದಿರುವ ಮೊಡೆಂಜಿ, ಮಲೆಜಿ ಮೀನು ತಳಿ ಸಾಕಣೆಗೆ ಪ್ರೋತ್ಸಾಹ ನೀಡಿ ಕರಾವಳಿ ಬ್ರ್ಯಾಂಡ್ ಆಗಿ ರಾಷ್ಟ್ರ ಮಟ್ಟ ದಲ್ಲಿ ಪರಿಚಯಿಸುವ ಪ್ರಯತ್ನ ವೊಂದು ಮೀನುಗಾರಿಕೆ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೃಷಿಕರಿಗೆ ಕಾರ್ಯಾಗಾರದ ಮೂಲಕ ಈ ಮಾಹಿತಿ ನೀಡಿ ಮೀನು ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಗತಿಯಲ್ಲಿದೆ.
ಸಮುದ್ರ ಮೀನುಗಾರಿಕೆ ಪರಿಚಿತ ಗೊಳ್ಳುವ ಮೊದಲು ಗ್ರಾಮೀಣ ಭಾಗದಲ್ಲಿ ಹೊಳೆ ಮೀನುಗಳನ್ನೇ ಬಳಸಲಾಗುತ್ತಿತ್ತು. ಹಲವು ಕಾಯಿಲೆ ಗಳಿಗೆ ಮೊಡೆಂಜಿ, ಮಲೆಜಿ ಮೀನು ರಾಮಬಾಣವಾಗಿರುವ ಕಾರಣ ಅವು ಗಳನ್ನು ಸೇವಿಸುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಬೇಸಗೆಯಲ್ಲಿ ಮೀನು ಬೇಟೆ ಪರಿಣಾಮ ಹಾಗೂ ಸಾಕಣೆಗೆ ಉತ್ತೇಜನ ಸಿಗದೆ ಅವು ಈಗ ಅಳಿಯುವ ಅಂಚಿ ನಲ್ಲಿವೆ. ಆದ್ದರಿಂದ ಈ ತಳಿಗೆ ಉತ್ತೇಜ® ನೀಡಿ ಪ್ರಮುಖ ಆದಾಯದ ಮಾರ್ಗವಾಗಿಸಲು ನಿರ್ಧರಿಸಲಾಗಿದೆ.
ಎಕರೆಗೆ 15 ಲಕ್ಷ ರೂ. ಆದಾಯ
ಹಾಸನ ಸೇರಿದಂತೆ ವಿವಿಧೆಡೆ ಮೊಡೆಂಜಿ ಮೀನು ಸಾಕಣೆ ಸಾಕಷ್ಟು ಮನ್ನಣೆ ಪಡೆದಿದೆ. ಹಾಸನದ ಕೃಷಿಕನೋರ್ವ ಒಂದು ಎಕರೆ ಕೆರೆಯಲ್ಲಿ ಮೊಡೆಂಜಿ ಸಾಕಿ 15 ಲಕ್ಷ ರೂ. ಆದಾಯ ಸಂಪಾದಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 600ರಿಂದ 700 ರೂ. ತನಕ ಬೇಡಿಕೆ ಇದೆ.
ಕೆರೆಗಳಲ್ಲಿ ಸಾಕಣೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಅಡಿಕೆ ತೋಟಗಳಲ್ಲಿ ಕೆರೆಗಳಿದ್ದು ಅವುಗಳಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ. ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಡಿ ಸಬ್ಸಿಡಿ ಒದಗಿಸಿ ಮೊಡೆಂಜಿ, ಮಲೆಜಿ ತಳಿ ಸಾಕಣೆಗೆ ಚಾಲನೆ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಮರಿಗಳನ್ನು ತಂದು ಕೃಷಿಕರಿಗೆ ಪೂರೈಸಲಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನ ಪ್ರಮಾಣ ಹೆಚ್ಚಾದಲ್ಲಿ ಇಲ್ಲೇ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟಿನಲ್ಲಿ ಪರ್ಯಾಯ ಅಥವಾ ಉಪ ಬೆಳೆಯಾಗಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಿ ಉದ್ಯೋಗಾವಕಾಶ ಕಲ್ಪಿಸುವುದು ಇಲಾಖೆಯ ಗುರಿ.
ತೋಟದ ಕೆರೆಗಳಲ್ಲಿ ಮೀನು ಕೃಷಿಗೆ ಹೇರಳ ಅವಕಾಶ ಇದೆ. ಔಷಧೀಯ ಗುಣವುಳ್ಳ ಮೊಡೆಂಜಿ, ಮಲೆಜಿ ತಳಿಗಳನ್ನು ರಾಷ್ಟ್ರ ಮಟ್ಟದಲ್ಲಿ ಕರಾವಳಿ ಬ್ರಾÂಂಡ್ ಆಗಿ ರೂಪಿಸುವ ಚಿಂತನೆ ನಡೆದಿದೆ.
– ಎಸ್. ಅಂಗಾರ, ಬಂದರು ಮತ್ತು ಮೀನುಗಾರಿಕೆ ಸಚಿವ
ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ಮೀನಿನ ಬೇಡಿಕೆ ಇದ್ದು 2.5 ಲಕ್ಷ ಮೆಟ್ರಿಕ್ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಉತ್ತಮ ಅವಕಾಶ ಇರುವ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಿ ಮೊಡೆಂಜಿ, ಮಲೆಜಿ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುವುದು. ಅಂತೆಯೇ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ನೀಡಲಾಗುವುದು.
– ರಾಮಚಾರ್ಯ, ಜಂಟಿ ನಿರ್ದೇಶಕ, ಮೀನುಗಾರಿಕೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್ ತ್ಯಾಜ್ಯವಾಗಿ ಪತ್ತೆ
ರೈತರಿಗೆ ಕುಮ್ಕಿ, ಬಾಣೆ ಜಮೀನು ಹಕ್ಕು ವಿತರಣೆ: ಸಂಪುಟ ಉಪಸಮಿತಿ ರಚನೆ : ಸಚಿವ ಸುನಿಲ್
ಸೆಪ್ಟಂಬರ್ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್ ಸೆಂಟರ್: ಸಚಿವ ಸುನಿಲ್
ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್ ಆದೇಶ
ಕಬಕ: ರೈಲು ಢಿಕ್ಕಿ ಹೊಡೆದು ಯುವಕ ಸಾವು