ಅಭಿವೃದ್ಧಿಗಳಿಗೆ 1 ಕೋ. ರೂ. ಅನುದಾನ

ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆ

Team Udayavani, May 5, 2019, 5:05 AM IST

13

ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಅನುದಾನದಲ್ಲಿ ಆಗಿರುವ ಕಾಮಗಾರಿಗಳು.

ಬೆಳ್ತಂಗಡಿ: ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯಿಂದ ರಾಜ್ಯದಲ್ಲಿ ನಡೆಯು ತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸ್ಥೆ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅವರ ಶಿಫಾರಸಿನೊಂದಿಗೆ 1 ಕೋ. ರೂ. ಮೊತ್ತವನ್ನು ಮಂಜೂರು ಮಾಡಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘ, ಹಿಂದೂ ರುದ್ರಭೂಮಿ, ಸಭಾಭವನ, ಶಾಲಾ ಕೊಠಡಿ ನಿರ್ಮಾಣ, ಭಜನ ಮಂದಿರ ನಿರ್ಮಾಣ, ಶೌಚಾಲಯ ನಿರ್ಮಾಣ ಇತ್ಯಾದಿ 115 ವಿವಿಧ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ.

ಹಾಲು ಉತ್ಪಾದಕರ ಸ. ಸಂಘಗಳ ಕಟ್ಟಡ ನಿರ್ಮಾಣ
ದ.ಕ. ಜಿಲ್ಲೆಯ ನರಿಮೊಗರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘ, ಉಡುಪಿ ಜಿಲ್ಲೆಯ ಮಾಂಟ್ರಾಡಿ, ದರೇಗುಡ್ಡೆ, ಕುರ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ, ಹಾಸನ ಜಿಲ್ಲೆಯ ಗುರಿಗಾನಹಳ್ಳಿ, ಚೌಳಗಾಲ, ವಾರನಹಳ್ಳಿ, ಆನಂದೂರು, ಹಂಚಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ, ಶಿವಮೊಗ್ಗದ ಅರಳಸುರುಳಿ, ಕಿತ್ತನಗದ್ದೆ, ಹಂಚಿ, ಅರೇಹಳ್ಳಿ, ಕಲ್ಮನೆ, ಮಂಡ್ಯದ ಬಿ. ಬಳ್ಳೇಕೆರೆ, ಸಾಹಳ್ಳಿ, ಎಂ. ಕಾಗೇಪುರ, ಚೌಡಗೋನಹಳ್ಳಿ, ಹೆತ್ತಗೋನಹಳ್ಳಿ, ಬೈರನಹಳ್ಳಿ ಸಂಘಗಳಿಗೆ, ಮೈಸೂರು ಗಾಂಧಿನಗರ, ರಾಂಪುರ, ಹೊನ್ನೇನಹಳ್ಳಿ, ಕನ್ನಹಳ್ಳಿ, ಹೊಸಹಳ್ಳಿ, ಎಂ.ಮಲ್ಲಹಳ್ಳಿ, ಉದೂºರು ಸಂಘಗಳಿಗೆ, ಬೆಂಗಳೂರು ಗ್ರಾಮಾಂತರದ ಬಿದಿರೆಗೆರೆ, ಮಹಾಂತಲಿಂಗಪುರ, ಚಾಗಲೇಟಿ, ತಿಮ್ಮ ಸಂದ್ರ, ಸಿಂಗರಹಳ್ಳಿ, ರಾಮನಗರದ ಕೆಂಬತ್ತಹಳ್ಳಿ, ಚಿಕ್ಕೇನಹಳ್ಳಿ, ತಿಮ್ಮೇ ಗೌಡನಹಳ್ಳಿ, ಪೆಮ್ಮನಹಳ್ಳಿ, ಕೋಡಿ ಹಳ್ಳಿ, ಮೂಡೇನಹಳ್ಳಿ, ಕೋಲಾರದ ತಿಮ್ಮಾಪುರ, ಒಂಬತ್ತುಗುಳಿ, ದೊಡ್ಡಿಗಾನ ಹಳ್ಳಿ, ಚೀಕೂರು, ಕಾಡುಕಚ್ಚನಹಳ್ಳಿ, ತುಮಕೂರಿನ ಜವನ್ನಹಳ್ಳಿ, ಮಾರಿ ಪಾಳ್ಯ, ಪಳವಲ್ಲಿ, ಮಲ್ಲಘಟ್ಟ, ಮದನ ಮಡು, ಕೆಬ್ಬಳ್ಳಿ, ಚಿಕ್ಕಬಳ್ಳಾಪುರದ ಬೈರ ನಾಯಕನಹಳ್ಳಿ, ಪಸುಪಲೋಡು, ಕರಿಗಾನ ತಮ್ಮನಹಳ್ಳಿ, ಪರಗೋಡು, ನೀಲಪ್ಪಳ್ಳಿ, ಚಿಂತಮಾಕಳಹಳ್ಳಿ, ಹಾವೇರಿ ನಾಗವಂದ, ಕಡೂರು, ಕರಗುದರಿ, ಧಾರವಾಡದ ಸಂಶಿ ಹಾಲು ಉತ್ಪಾ ದಕರ ಸಹಕಾರ ಸಂಘ, ಕೊಪ್ಪಳದ ಕಾಟ್ರ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸಹಿತ 14 ಜಿಲ್ಲೆಗಳ 61 ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 54 ಲಕ್ಷ ರೂ. ಅನು ದಾನ ಮಂಜೂರು ಮಾಡಲಾಗಿದೆ.

ಗ್ರಾಮಕಲ್ಯಾಣ ಕಾರ್ಯಕ್ರಮ
ದ.ಕ. ಜಿಲ್ಲೆಯ ಮಂಗಳೂರಿನ ಕುಂಜತ್ತಬೈಲು ಶ್ರೀ ಚಾಮುಂಡೇಶ್ವರೀ ಸಭಾಭವನ, ಸಂಪಾಜೆಯ ಸ.ಹಿ.ಪ್ರಾ. ಶಾಲೆಯ ಶಾಲಾ ಕೊಠಡಿ ರಚನೆ, ವನಿತಾ ಸಮಾಜ ಪಂಜ ಇದರ ಕಟ್ಟಡ ರಚನೆ, ಬೆಳ್ತಂಗಡಿ ಆರಂಬೋಡಿಯ ಶ್ರೀ ಮಂಜುನಾಥೇಶ್ವರ ಭಜನ ಮಂದಿರ, ಕಾಸರಗೋಡಿನ ವಿಟ್ಟಲ ಸ್ವಾಮಿ ಭಜನ ಮಂದಿರ, ಶಾರದಾ ಕೃಪಾ ವೀರಾಂಜ ನೇಯ ವ್ಯಾಯಾಮ ಶಾಲೆ, ಮಂಜೇಶ್ವರದ ಮಹಾವಿಷ್ಣು ಅಯ್ಯಪ್ಪ ಸ್ವಾಮಿ ಭಜನ ಮಂದಿರ, ಕೊಡಗು ಚೆಂಡುಮಾಣಿಕೇರಿ ಸಮುದಾಯ ಭವನ, ಕುಮಟಾ ಸ.ಹಿ.ಪ್ರಾ. ಶಾಲೆಯ ಸಭಾಭವನ, ಮೈಸೂರು ವಿದ್ಯಾಗಣಪತಿ ದೇವಸ್ಥಾನದ ಸಮುದಾಯ ಭವನ, ಗುರುಮಲ್ಲೇಶ್ವರ ಟ್ರಸ್ಟ್‌ನ ವಿದ್ಯಾರ್ಥಿ ನಿಲಯ, ಗದಗದ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ, ಜ್ಞಾನಸಿಂಧು ಅಂಧ ಮಕ್ಕಳ ಶಾಲಾ ಕೊಠಡಿ ರಚನೆ, ಬಾಗಲಕೋಟೆ ಜಿಲ್ಲೆಯ ಬರಗಿ ಗ್ರಾ.ಪಂ. ಸಾರ್ವಜನಿಕ ಶೌಚಾಲಯ ನಿರ್ಮಾಣ, ಬೀದರ್‌ಜಿಲ್ಲೆಯ ಗುರು ಶಂಭುಲಿಂಗಾಶ್ರಮದ ಪ್ರಸಾದ ನಿಲಯ ನಿರ್ಮಾಣ, ಹುಬ್ಬಳ್ಳಿಯ ಸಿದ್ದಾರಾಮೇಶ್ವರ ಕಲ್ಯಾಣ ಸೇವಾ ಟ್ರಸ್ಟ್‌ ನ ಕಲ್ಯಾಣ ಮಂಟಪ, ಸೋಮವಾರ ಪೇಟೆ ಚೆನ್ನಿಗರಾಯ ದೇವಸ್ಥಾನದ ಜೀರ್ಣೋದ್ಧಾರ, ಕುಂದಾಪುರದ ದುರ್ಗಾಪರಮೇಶ್ವರೀ ದೇವಸ್ಥಾನದ ಸಮುದಾಯ ಭವನ, ಶಿಕಾರಿಪುರದ ಬಸವ ಸೇವಾ ಟ್ರಸ್ಟ್‌ನ ಸಭಾಭವನ, ಹೊಸನಗರ ವಿಘ್ನೇಶ್ವರ ಸೇವಾ ಸಮಿತಿಯ ಸಮುದಾಯ ಭವನ, ಯಲ್ಲಾಪುರ ಇಡಗುಂದಿ ರಾಮಲಿಂಗೇಶ್ವರ ದೇವ ಸ್ಥಾನದ ಸಮುದಾಯ ಭವನ, ಮಳವಳ್ಳಿ ಬೀರೇಶ್ವರ ದೇವಸ್ಥಾನದ ಸಮುದಾಯ ಭವನ, ಮಾಲೂರು ಗಂಗಮ್ಮದೇವಿ ದೇವಸ್ಥಾನದ ಕಲ್ಯಾಣ ಮಂಟಪ,

ಬಸವ ಕಲ್ಯಾಣ ಮಹರ್ಷಿ ವಾಲ್ಮೀಕಿ ಸೋಶಿಯಲ್‌ ವೆಲ್ಫೆàರ್‌ ಟ್ರಸ್ಟ್‌ನ ಸಮುದಾಯ ಭವನ, ರೋಣ ಕೊಡೇಕಲ್‌ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ, ಭಾವಕ್ಷತ್ರೀಯ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟು 26 ಕಾಮಗಾರಿಗಳಿಗೆ 25 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.

ಜ್ಞಾನದೀಪ ಕಾರ್ಯಕ್ರಮ
ಜ್ಞಾನದೀಪ ಕಾರ್ಯಕ್ರಮದಂತೆ ಬೆಳ್ತಂಗಡಿ ತಾ|ನ ಕಡಿರುದ್ಯಾವರ ಕೊಡಿಯಾಲಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದ ದೇವರಕಾನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಾಪುರ ಸ್ಪಂದನಾ ರೂರಲ್‌ ಚಿಲ್ಡ್ರನ್‌ಎಜುಕೇಶನಲ್‌ಟ್ರಸ್ಟ್‌ನ ಶಾಲಾ ಶೌಚಾಲಯ ರಚನೆಗೆ, ಕುಂದಾಪುರ ಅಮಾಸೆಬೈಲು ಕಿರಿಯ ಪ್ರಾಥಮಿಕ ಶಾಲೆ, ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆ, ಬಾರಂದಾಡಿಕಿರಿಯ ಪ್ರಾಥಮಿಕ ಶಾಲೆ, ಕನಕಮಜಲಿನ ರಾಮಣ್ಣ ಗೌಡ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಮೆಡೊನ್ನಾ ಎ.ಯು.ಪಿ. ಶಾಲೆ, ಚಿಪ್ಪಾರು ಅಮ್ಮೇರಿಯ ಎ.ಯು.ಪಿ. ಶಾಲೆ, ಸೋಮವಾರಪೇಟೆ ಮದಲಾಪುರ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ರಚನೆ ಹಾಗೂ ಶಾಲಾ ರಂಗಮಂದಿರ ನಿರ್ಮಾಣಕ್ಕೆ 5.60 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.

ಇತರ ಅಭಿವೃದ್ಧಿ
ಇತರ ಅಭಿವೃದ್ಧಿ ಕಾರ್ಯಕ್ರಮದಡಿ ಗದಗ ಜಿಲ್ಲೆಯ ಕುಡು ಒಕ್ಕಲಿಗರ ಸಂಘದ ಕೇಂದ್ರ ಕಚೇರಿ ನಿರ್ಮಾಣ, ಚೆನ್ನರಾಯಪಟ್ಟಣ ವಂದೇ ಮಾತರಂ ವೃದ್ಧಾಶ್ರಮ ನಿರ್ವಹಣೆಗೆ, ಸೋಮವಾರ ಪೇಟೆ ಯಡವಾರೆ ಗ್ರಾಮದ ಚೆನ್ನಿಗರಾಯ ಸಮುದಾಯ ಭವನ ನಿರ್ಮಾಣ, ಸುಳ್ಯ ಕಳೆಂಜ ಯುವಕ ಮಂಡಲ ನಿರ್ಮಾಣ ಮುಂತಾದ ಕಾಮಗಾರಿಗೆ 6 ಲಕ್ಷ ರೂ. ಮೊತ್ತ ಮಂಜೂರು ಮಾಡಲಾಗಿದೆ.
ಚೆನ್ನಗಿರಿ ತಾ| ಕಂಚಿಗನಾಳ್‌ ಓಂಕಾರಪ್ಪ ಅವರ ದಾಸ್ತಾನು ಕೊಠಡಿ ಬೆಂಕಿ ಅವಘಡಕ್ಕೆ, ಗಂಗಾವತಿ ತಾಲೂಕು ಸಿದ್ದಾಪುರದ ದೇವಪ್ಪ ಅವರಿಗೆ ಪ್ರಾಕೃತಿಕ ವಿಕೋಪಕ್ಕೆ ಸಹಾಯಧನ ಹಾಗೂ ಉಡುಪಿ ತಾ| ಕೊಕ್ಕರ್ಣೆಯ ಸುಬ್ಬರಾವ್‌ ಅವರಿಗೆ ಮತ್ತು ಬೆಳ್ತಂಗಡಿ ತಾ| ನಾರ್ಯದ ಕೃಷ್ಣಪ್ಪ ಅವರಿಗೆ ಮಾಸಾಶನವನ್ನು ಮಂಜೂರು ಮಾಡಲಾಗಿದೆ.

ರಾಜ್ಯದ ಒಟ್ಟು 111 ಕಾಮಗಾರಿಗಳಿಗೆ 1.04 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಅವರು ತಿಳಿಸಿರುತ್ತಾರೆ.

ಹಿಂದೂ ರುದ್ರಭೂಮಿ ಕಾರ್ಯಕ್ರಮ
ಬಂಟ್ವಾಳ ತಾ|ನ ಚೆನ್ನೈತ್ತೋಡಿ ಗ್ರಾ.ಪಂ. ಹಿಂದೂ ರುದ್ರಭೂಮಿ, ಮಂಗಳೂರು ದೇಲಂತಬೆಟ್ಟು ಹಿಂದೂ ರುದ್ರಭೂಮಿ, ಉಡುಪಿ ಕುತ್ಯಾರು ಗ್ರಾ.ಪಂ., ಚಿಂತಾಮಣಿ ಶ್ರೀಕ್ಷೇತ್ರ ಕೈವಾರದ ಹಿಂದೂ ರುದ್ರಭೂಮಿ, ಸುಳ್ಯ ಕಲ್ಮಡ್ಕ ಗ್ರಾ.ಪಂ. ಹಿಂದೂ ರುದ್ರಭೂಮಿ, ತೀರ್ಥಹಳ್ಳಿ ತಾ|ನ ಅರಳಸುರುಳಿ ಗ್ರಾ.ಪಂ. ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ 12 ಲಕ್ಷ ರೂ. ಮೊತ್ತ ಮಂಜೂರು ಮಾಡಲಾಗಿದೆ.

ಟಾಪ್ ನ್ಯೂಸ್

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.