ವಿಷಯಗಳ ಆಯ್ಕೆಯ ಜತೆಗೆ ಆಸಕ್ತಿಯೂ ಪ್ರಧಾನವಾಗಿರಲಿ

ಪಿಯುಸಿ ಬಳಿಕ ಮುಂದೇನು ?

Team Udayavani, May 5, 2019, 5:50 AM IST

15

ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣ ಅವಕಾಶಗಳ ಆಯ್ಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಕೆರಿಯರ್‌ ಮಾರ್ಗದರ್ಶನ ನೀಡುವ ಸದುದ್ದೇಶದಿಂದ “ಉದಯವಾಣಿ’ ಪತ್ರಿಕೆಯು ಶನಿವಾರ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ “ಶ್ರೀ ಭುವನೇಂದ್ರ’ ಸಭಾಭವನದಲ್ಲಿ “ಪಿಯುಸಿ ಬಳಿಕ ಮುಂದೇನು’ ಎಂಬ ವಿಷಯವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣತರ ಬಳಿ ಕೇಳಿ ಬಗೆಹರಿಸಿಕೊಂಡರು.

ಕಲಾ
ಕಲಾ ವಿಭಾಗ: ಇಷ್ಟಪಟ್ಟು ಕಲಿತರೆ ಅಪರಿಮಿತ ಅವಕಾಶ
ಶೇ. 75ರಷ್ಟು ಉದ್ಯೋಗಾವಕಾಶಗಳಿಗೆ ಮಾನವ ಕೌಶಲ, ಸಂವಹನ ಸಾಮರ್ಥ್ಯ, ಸಂಘಟನಾ ಚತುರತೆ ಇದ್ದರೆ ಸಾಕು. ಕಲಾ ವಿಭಾಗದಲ್ಲಿ ಅವಕಾಶವಿಲ್ಲ. ಬಿ.ಎ. ಕೋರ್ಸ್‌ಗೆ ಭವಿಷ್ಯ ಇಲ್ಲ ಎಂಬ ಮಾತುಗಳು ಸರಿಯಲ್ಲ. ಕಲಾ ವಿಷಯದಲ್ಲಿ ಅಪರಿಮಿತ ಅವಕಾಶಗಳಿವೆ. ಅದನ್ನು ಇಷ್ಟಪಟ್ಟು ಕಲಿಯಬೇಕು. ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು.

ಅವಕಾಶಗಳ ಬಗ್ಗೆ ಅರಿವಿರಲಿ
ಕಲಾ ವಿಭಾಗದಲ್ಲಿ ದೇಶದಲ್ಲಿ 30ಕ್ಕೂ ಅಧಿಕ ವಿಷಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ವಿದೆ. ಮಂಗಳೂರು ವಿಶ್ವವಿದ್ಯಾನಿಯಲದಲ್ಲಿ 54 ಬೇರೆ, ಬೇರೆ ಕಾಂಬಿನೇಶನ್‌ಗಳಿವೆ. ಪಿಯುಸಿ ಮಾಡಿದ ಬಳಿಕ 5 ವರ್ಷಗಳ ಎಲ್‌ಎಲ್‌ಬಿ ಶಿಕ್ಷಣ ಪಡೆದರೆ ನ್ಯಾಯವಾದಿ, ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಕ್ಷೇತ್ರವನ್ನು ಸೇರಬಹುದು. ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಬಹುದು. ಬಿಎ ಪದವಿ ಬಿಎಡ್‌ ಮಾಡಿ ಶಿಕ್ಷಕ ವೃತ್ತಿ ಅಥವಾ ಎಂಎ ಪದವಿ ಪೂರೈಸಿ ಕಾಲೇಜು ಉಪನ್ಯಾಸಕರಾಗಬಹುದು, ಯುಪಿಎಸ್‌ಸಿ, ಕೆಎಎಸ್‌, ಕೆಪಿಎಸ್‌ ಸಹಿತ ಸರಕಾರಿ ಸೇವೆಗೆ ಸೇರ್ಪಡೆಯಾಗಬಹುದು. ಬಿಎಸ್‌ಡಬ್ಲು  ಎಂಎಸ್‌ಡಬ್ಲು , ಬಿಬಿಎ, ಬಿಎಚ್‌ಎಂ,ಬಿಎ ಎಚ್‌ಆರ್‌ಡಿ ಸೇರಿದಂತೆ ಉದ್ಯೋಗಾವಕಾಶಗಳನ್ನು ಹೊಂದಿರುವ ವಿವಿಧ ಕೋರ್ಸುಗಳಿವೆ. ಬಿ.ವಿಒಸಿ ಎಂಬ ಹೊಸ ಕೋರ್ಸ್‌ ಪರಿಚಯಿಸಲಾಗಿದೆ.

ಬೇಡಿಕೆಗಳು
ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅದರಲ್ಲಿರುವ ಅವಕಾಶಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕು. ಇದು ಮುಂದಕ್ಕೆ ಆಯ್ಕೆ ಮತ್ತು ಭವಿಷ್ಯದ ಬಗ್ಗೆ ನಿರ್ಧರಿಸಲು ಅನು ಕೂಲವಾಗುತ್ತದೆ. ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರ, ಆಪ್ತ ಸಮಾಲೋಚನೆ, ವಕೀಲಿ ವೃತ್ತಿ, ನ್ಯಾಯಾಂಗ, ಮಾನವ ಸಂಪನ್ಮೂಲ ಕ್ಷೇತ್ರ, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಸರಕಾರಿ ಸೇವೆ, ಗ್ರಂಥಾಲಯ ವಿಜ್ಞಾನ,ಮತ್ತಿತರ ಕ್ಷೇತ್ರಗಳಲ್ಲಿ ಕಲಾ ವಿಭಾಗದ ಪದವೀಧರರಿಗೆ ವಿಪುಲ ಅವಕಾಶಗಳಿವೆ. ತಮಿಳುನಾಡು ಮತ್ತು ಹೊಸದಿಲ್ಲಿ, ಕೇರಳ ರಾಜ್ಯಗಳಲ್ಲಿ ಕಲಾವಿಭಾಗದ ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಕನಿಷ್ಠ ಶೇ.93 ಅಂಕಗಳು ಬೇಕು. ಇದು ಕಲಾವಿಭಾಗಕ್ಕಿರುವ ಪ್ರಾಮುಖ್ಯವನ್ನು ಹೇಳುತ್ತದೆ.

ಸ್ಪಷ್ಟ ಗುರಿ ಇರಲಿ
ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಪಷ್ಟ ಗುರಿ ಇರಬೇಕು. ಏನು ಕಲಿಯಬೇಕು, ಯಾಕೆ ಕಲಿಯಬೇಕು, ಹೇಗೆ ಕಲಿಯಬೇಕು ಮತ್ತು ಎಷ್ಟು ಕಲಿಯಬೇಕು ಎಂಬುದರ ಅರಿವು ಇರಬೇಕು. ಬಲ್ಲವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು.ಆಗ ಮುಂದಿನ ದಾರಿ ಸುಲಲಿತವಾಗುತ್ತದೆ.
ಡಾ| ನೋರ್ಬರ್ಟ್‌ ಲೋಬೋ, 
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ,. ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

ವಾಣಿಜ್ಯ
ಆಸಕ್ತಿ ಆಧಾರದಲ್ಲಿ ವಿಷಯಗಳ ಆಯ್ಕೆ ಇರಲಿ

2002ರಲ್ಲಿ ವಿಜ್ಞಾನ ವಿಷಯಕ್ಕೆ ಬೇಡಿಕೆ ಇತ್ತು. 2008 ರ ಬಳಿಕ ವಾಣಿಜ್ಯ ಕೋರ್ಸ್‌ಗಳು ಜನಪ್ರಿಯತೆ ಪಡೆದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ವಾಣಿಜ್ಯ ಪದವಿ ಶಿಕ್ಷಣದಲ್ಲಿ ಅನೇಕ ವಿಭಾಗಗಳು ಬಂದಿವೆ. ಅನೇಕ ಹೊಸ ವಿಷಯಗಳು ಬರುತ್ತಿವೆ. ಆಯ್ಕೆ ಮಾಡಿಕೊಳ್ಳುವಾಗ ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು. ಇತರರ ಅನುಕರಣೆ ಬದಲು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಯಶಸ್ವಿಯಾಗಬಹುದು.

ಕೋರ್ಸ್‌ಗಳು
ಬಿ.ಕಾಂ, ಬಿ.ಕಾಂ. ಆನರ್ಸ್‌, ಎಂ.ಕಾಂ., ಬಿಬಿಎಂ, ಎಂಬಿಎ, ಬಿಸಿಎ, ಸಿಎ, ಐಸಿಡಬ್ಲುಎ, ಸಿಐಎಂಎ, ಎಸಿಸಿಎ, ಸಿಪಿಎ, ಸಿಐಎಂಎ, ಬಿ.ಎಡ್‌, ಎಂಎಡ್‌ ಹೀಗೆ ಅನೇಕ ಕೋರ್ಸ್‌ಗಳಿವೆ. ಇವುಗಳ ಶಿಕ್ಷಣ ಸ್ವರೂಪ, ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಸ್ಪಷ್ಟ ಮಾಹಿತಿ ಪಡೆದು ಆಯ್ಕೆ ಮಾಡಿಕೊಳ್ಳಬೇಕು.

ಅವಕಾಶಗಳು
ವಾಣಿಜ್ಯ ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಮುಖ್ಯವಾಗಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇರುವ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆಕೌಂಟೆಂಟ್‌, ಆರ್ಥಿಕ ಸಲಹೆಗಾರ, ಮರ್ಚಂಟ್‌ ಬ್ಯಾಂಕಿಂಗ್‌, ಇಂಟರಲ್‌ ಆಡಿಟ್‌, ಕಂಪೆನಿ ಸೆಕ್ರೆಟರಿ, ಶಿಕ್ಷಣ , ಹೊಟೇಲ್‌ ಮ್ಯಾನೇಜ್‌ಮೆಂಟ್‌, ಚಾರ್ಟರ್ಡ್‌ ಅಕೌಂಟೆಂಟ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳಿವೆ.

ಜಿಎಸ್‌ಟಿಯಿಂದ ಉದ್ಯೋಗಾವಕಾಶ ವಿಸ್ತರಣೆ
ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಜಿಎಸ್‌ಟಿಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಚಾರ್ಟರ್ಡ್‌ ಆಕೌಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎ ಶಿಕ್ಷಣಕ್ಕೂ ಆದ್ಯತೆ ಹೆಚ್ಚಾಗತೊಡಗಿದೆ. ಪಿಯುಸಿ ಕಾಮರ್ಸ್‌ ಶಿಕ್ಷಣ ಪೂರ್ಣಗೊಂಡ ಬಳಿಕ ಎಂಟ್ರೆನ್ಸ್‌ ಪರೀಕ್ಷೆ ಬರೆಯಬಹುದು. ಸಿಎ ಶಿಕ್ಷಣ ಪಡೆದವರಿಗೆ ವಿದೇಶದಲ್ಲೂ ಹೆಚ್ಚಿನ ಅವಕಾಶಗಳಿವೆ.
ಸುಧೀರ್‌ ಎಸ್‌. ಶೆಣೈ
ಚಾರ್ಟರ್ಡ್‌ ಅಕೌಂಟೆಂಟ್‌ ಹಾಗೂ ಮಾಹೆ ಅತಿಥಿ ಉಪನ್ಯಾಸಕ

ವಿಜ್ಞಾನ
ನ್ಯೂ ಜನರೇಷನ್‌ ಕೋರ್ಸ್‌ಗಳಲ್ಲಿವೆ ಅವಕಾಶಗಳು
ತಮ್ಮನ್ನು ಇನ್ನೊಬ್ಬರ ಜತೆ ಹೋಲಿಕೆ, ಅನುಕರಣೆ ಸಲ್ಲದು. ಪ್ರತಿಯೋರ್ವರ ಬೌದ್ಧಿಕ ಸಾಮರ್ಥ್ಯ ವಿಭಿನ್ನ. ಆದುದರಿಂದ ಮತ್ತೂಬ್ಬ ಏನು ಆಯ್ಕೆ ಮಾಡಿಕೊಂಡಿದ್ದಾನೆ ಎಂಬುದನ್ನು ಗಮನಿಸಿ ನಾವು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಅದರ ಬದಲು ತನಗೆ ಯಾವುದು ಆಸಕ್ತಿ ಮತ್ತು ಕಾರ್ಯಸಾಧ್ಯವಾದ ವಿಷಯ ಎಂಬುದನ್ನು ಅರಿತು ಮುಂದಿನ ಶಿಕ್ಷಣ ಪಥವನ್ನು ನಿರ್ಧರಿಸಬೇಕು.

ನ್ಯೂಜನರೇಶನ್‌ ಕೋರ್ಸ್‌ಗಳು
ವಿಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಅನೇಕ ಕೋರ್ಸ್‌ ಗಳಿವೆ. ಜತೆಗೆ ಎರೋನಾಟಿಕಲ್‌ ಎಂಜಿನಿಯರಿಂಗ್‌, ಎರೋಸ್ಪೇಸ್‌ ಎಂಜಿನಿರಿಂಗ್‌ , ರೋಬೋಕ್ಸ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ, ತ್ರಿಡಿ ಪ್ರಿಂಟಿಂಗ್‌, ಸೈಬರ್‌ ಲಾ, ಗ್ರೀನ್‌ ಆರ್ಕಿಟೆಕ್ಚರ್‌, ಫಿಸಿಯೋಥೆರಪಿ ಸೇರಿದಂತೆ ಹಲವು ನ್ಯೂ ಜನರೇಶನ್‌ ಕೋರ್ಸುಗಳು ಮುಂದಿನ ಹತ್ತು ವರ್ಷಗಳಲ್ಲಿ ಬಹು ಬೇಡಿಕೆಯ ಕ್ಷೇತ್ರಗಳಾಗಲಿವೆ.

ಸಾಧ್ಯತೆಗಳು
ಪಿಸಿಎಂಬಿ, ಪಿಸಿಬಿ ಹಾಗೂ ಪಿಸಿಎಂ ಕಾಂಬಿನೇಶನ್‌ಗಳನ್ನು ಆಯ್ಕೆ ಮಾಡಿಕೊಂಡು ಪಿಯುಸಿ ಯಲ್ಲಿ ವ್ಯಾಸಂಗ ಮಾಡಿದವರಿಗೆ ಎಂಜಿನಿಯರ್‌, ವೈದ್ಯಕೀಯ, ದಂತ ವೈದ್ಯಕೀಯ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮೀನುಗಾರಿಕಾ ವಿಜ್ಞಾನ, ಬಿಎಸ್ಸಿ, ಎಂಎಸ್ಸಿ , ನರ್ಸಿಂಗ್‌, ಪೊರೋನ್ಸಿಕ್‌, ಬಿಎಎಂಎಸ್‌, ಬಿಫಾರ್ಮಾ, ಎಂಫಾರ್ಮಾ, ಪೈಲೆಟ್‌ ಲೈಸನ್ಸ್‌-ಎಸ್‌ಪಿಎಲ್‌, ಪಿಪಿಎಲ್‌, ಸಿಪಿಎಲ್‌, ಸಂಶೋಧನೆ, ಹೋಮ್‌ ಸೈನ್ಸ್‌ ಸೇರಿದಂತೆ ಆನೇಕ ಕೋರ್ಸ್‌ಗಳಿವೆ. ಸಿಇಟಿ, ನೀಟ್‌ಗಳಲ್ಲಿ ಇರುವ ಸೀಟುಗಳು ಹಾಗೂ ಪ್ರಸ್ತುತ ಹೊಂದಿರುವ ಉದ್ಯೋಗ ಅವಕಾಶಗಳ ಮಾಹಿತಿ ಪಡೆದುಕೊಂಡು ತಮ್ಮ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬೇಕು.

ಸಿದ್ಧತೆ ಅಗತ್ಯ
ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಸಿಇಟಿ, ವೈದ್ಯಕೀಯ ಶಿಕ್ಷಣಕ್ಕೆ ನೀಟ್‌ ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಮಾಡುವ ನಿರ್ವಹಣೆ ಮೂಲಕ ಸೀಟುಗಳ ಪಡೆಯುವ ಅವಕಾಶವಿರುತ್ತದೆ. ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಪಡೆದರೆ ಸರಕಾರಿ ಸೀಟು, ಇಲ್ಲದಿದ್ದರೆ ಪಾವತಿ ಸೀಟು ಅಥವಾ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಸೀಟು ಪಡೆಯಲು ಅವಕಾಶವಿದೆ. ಆದುದರಿಂದ ವಿದ್ಯಾರ್ಥಿಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನವಿರಲಿ
ಪ್ರಸುತ್ತ ಐಎಎಸ್‌, ಐಪಿಎಸ್‌, ಕೆಪಿಎಸ್‌ ಕೆಎಎಸ್‌,ಐಆರ್‌ಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾಗವಹಿಸುವಿಕೆ ಅತ್ಯಂತ ಕಡಿಮೆ. ಇತ್ತೀಚಿನ ವರ್ಷಗಳ ಉದಾಹರಣೆ ತೆಗೆದುಕೊಂಡರೆ ಜಿಲ್ಲೆಯ ಇಬ್ಬರು ಮಾತ್ರ ಐಪಿಎಸ್‌ ಹುದ್ದೆಗೇರಿದ್ದಾರೆ. ಆದುದರಿಂದ ಜಿಲ್ಲೆಯ ಯುವಜನತೆ ಇಂತಹ ಸ್ಪರ್ಧಾತ್ಮಕ ಪರೀಕ್ಷಗಳತ್ತಲೂ ಗಮನ ಹರಿಸಬೇಕು.

ಡಾ| ಅನಂತ ಪ್ರಭು
ಪ್ರೊ| ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್‌

ಯಾವುದೇ ಕ್ಷೇತ್ರದಲ್ಲಿ ಉದ್ಯೋಗ
ಗಳಿಸುವುದಕ್ಕಿಂತ ಮುನ್ನ ಆಯಾ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳು ಪ್ರತಿದಿನ ಅಪ್‌ಡೇಟ್‌ ಆಗುತ್ತಿರಬೇಕು. ಆಗ ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ.
-ಡಾ| ಅನಂತ್‌ ಪ್ರಭು ಜಿ.

ಕಳೆದ ಕೆಲವು ವರ್ಷಕ್ಕೆ ಹೋಲಿಸಿದರೆ ವಾಣಿಜ್ಯ
ವಿಭಾಗಕ್ಕೆ ಹೆಚ್ಚಿನ ಅವಕಾಶಗಳು ಒದಗಿಬರುತ್ತಿವೆ. ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಮುಂದೇನು? ಎಂದು ಆಲೋಚನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗಗಳನ್ನು ಆಯ್ಕೆ ಮಾಡಿದರೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು.
-ಸುಧೀರ್‌ ಎಸ್‌. ಶೆಣೈ

ಕಲಾವಿಭಾಗವನ್ನು ಆಯ್ಕೆಮಾಡಿಕೊಂಡು
ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದಿನ ಹೆಜ್ಜೆ ಬಗ್ಗೆ ಗೊಂದಲಕೀRಡಾಗಿರುತ್ತಾರೆ. ಇದರಿಂದಾಗಿ ಅವರು ಸೂಕ್ತ ಆಯ್ಕೆ ಮಾಡುವಲ್ಲಿ ಎಡವುತ್ತಾರೆ. ಹಾಗಾಗಿ ಭವಿಷ್ಯವನ್ನೇ ನಿರ್ಧರಿಸುವ ಕಾಲಘಟ್ಟದಲ್ಲಿ ಉತ್ತಮ ಹಾಗೂ ಅರ್ಹ ಕೋರ್ಸ್‌ ಆಯ್ಕೆ ಪ್ರತಿಯೊಬ್ಬರ ಹೊಣೆ
-ಡಾ| ನೋರ್ಬರ್ಟ್‌ ಲೋಬೋ

ಪ್ರಯೋಜನಕಾರಿ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದ ಬಳಿಕ ಮುಂದಿನ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವ ಉದಯವಾಣಿಯ ಈ ಕಾರ್ಯಕ್ರಮ ಉಪಯುಕ್ತ ವಾಗಿದೆ. ಸಂಪನ್ಮೂಲ ವ್ಯಕ್ತಿಗಳು ಉತ್ತಮ ಮಾಹಿತಿ ನೀಡಿದ್ದು, ಹೆಚ್ಚು ಯೋಜನಕಾರಿಯಾಗಿದೆ.
ರೇಖಾ, ಪೋಷಕರು ಮಂಗಳೂರು

ಸೂಕ್ತ ಮಾರ್ಗದರ್ಶನ
ಕಾಮರ್ಸ್‌ ಶಿಕ್ಷಣದಲ್ಲಿ ಮುಂದಿನ ಅವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೆ. ಈ ಕಾರ್ಯಕ್ರಮದಲ್ಲಿ ಆವಶ್ಯಕ ಮಾಹಿತಿಗಳುಸಿಕ್ಕಿವೆ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತ.
ಶ್ರವಣ್‌, ವಿದ್ಯಾರ್ಥಿ, ಮೂಡಬಿದಿರೆ

ಹೊಸ ವಿಷಯ ತಿಳಿಯಿತು
ಕಾರ್ಯಕ್ರಮ ತುಂಬಾ ಖುಷಿ ನೀಡಿದೆ. ಪಿಯುಸಿ ಬಳಿಕ ಮುಂದೇನು ಎಂಬ ಬಗ್ಗೆ ವಿದ್ಯಾರ್ಥಿಗಳು ತಜ್ಞರಿಂದ ಮಾರ್ಗದರ್ಶನ ಬಯಸುತ್ತಾರೆ. ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿಗಳು ದೊರಕಿವೆ. ಅನೇಕ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳುವಂತಾಗಿದೆ.
ಶ್ರೇಯಾ, ವಿದ್ಯಾರ್ಥಿನಿ, ಮಂಗಳೂರು

ವಿದ್ಯಾರ್ಥಿಗಳಿಗೆ ಅನುಕೂಲ
ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಒಳ್ಳೆಯ ಮಾಹಿತಿಗಳು ಲಭ್ಯವಾಗಿದೆ. ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ತುಂಬಾ ಅನುಕೂಲವಾಗಿವೆ.
ನಮ್ರತಾ, ವಿದ್ಯಾರ್ಥಿನಿ, ಮಡಿಕೇರಿ

ಒಳ್ಳೆಯ ಕಾರ್ಯಕ್ರಮ
ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಉದಯವಾಣಿ ಆಯೋಜಿಸಿರುವ ಕಾರ್ಯಕ್ರಮದಿಂದ ಸಾಕಷ್ಟು ಮಾಹಿತಿಗಳು ದೊರಕಿದೆ. ಒಳ್ಳೆಯ ಕಾರ್ಯಕ್ರಮ.
ಪ್ರಮೀತಾ, ವಿದ್ಯಾರ್ಥಿನಿ, ಪುತ್ತೂರು

ಮಾಹಿತಿಪೂರ್ಣ ಕಾರ್ಯಕ್ರಮ
ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಯೋಜನೆ ರೂಪಿಸಲು ಇಂತಹ ಕಾರ್ಯಕ್ರಮಗಳು ಅನುಕೂಲ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಒಳ್ಳೆಯ ಮಾಹಿತಿಗಳು ಸಿಕ್ಕಿವೆ.
ರೋನಾಲ್ಡ್‌, ಪೋಷಕರು ಮಂಗಳೂರು

ಬೇಡಿಕೆ ಕೋರ್ಸ್‌ ಬಗ್ಗೆ ತಿಳಿಸಿತು
ಈಗ ಇರುವ ಕೋರ್ಸ್‌ಗಳಲ್ಲದೆ ಮುಂದಕ್ಕೆ ಹೆಚ್ಚು ಬೇಡಿಕೆ ಪಡೆದುಕೊಳ್ಳಲಿರುವ ಕೆಲವು ಕೋರ್ಸ್‌ಗಳ ಬಗ್ಗೆಯೂ ಕಾರ್ಯಕ್ರಮ ಬೆಳಕು ಚೆಲ್ಲಿದೆ. ಉಪಯುಕ್ತ ಮಾಹಿತಿಗಳು ದೊರಕಿವೆ.
ದಾಮೋದರ ನಾೖಕ್‌, ಪೋಷಕರು, ಉರ್ವಸ್ಟೋರ್‌

ಗೊಂದಲ ನಿವಾರಣೆಗೆ ಸಹಕಾರಿ
ಪಿಯುಸಿ ಬಳಿಕ ಮುಂದೇನು ಎಂಬ ಬಗ್ಗೆ ಬಹಳಷ್ಟು ಗೊಂದಲಗಳಿರುತ್ತವೆ. ಇದನ್ನು ನಿವಾರಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಇನ್ನು ಮುಂದಕ್ಕೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ.
ಸೌಮ್ಯಾ ರೈ, ಪೋಷಕರು, ಮಂಗಳೂರು

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.