“ಅಂಬೇಡ್ಕರ್‌ ಅವರ ಸಮಾನತೆಯ ತಣ್ತೀವನ್ನು ಉಳಿಸಿ ಬೆಳೆಸಿ’

ಮಂಗಳೂರು ವಿವಿ ಕಾಲೇಜಿನಲ್ಲಿ ಅಂಬೇಡ್ಕರ್‌ ವಿಚಾರಧಾರೆಗಳು ಉಪನ್ಯಾಸ

Team Udayavani, Apr 18, 2019, 6:54 AM IST

ಮಹಾನಗರ: ಅಸ್ಪೃಶ್ಯತೆಯ ಬಲಿಪಶುವಾಗಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಕೆಳ ವರ್ಗದವರ ಸಾಮಾಜಿಕ ಸಮಾನತೆ ಬಯಸಿದ್ದರು. ದಲಿತರು ಸ್ವಪ್ರಯತ್ನದಿಂದ ಮೇಲ್ಬರಬೇಕು ಎಂದು ಆಶಿಸಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ| ದಯಾನಂದ ನಾಯ್ಕ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ನಡೆದ “ಅಂಬೇಡ್ಕರ್‌ ವಿಚಾರಧಾರೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಅಂಬೇಡ್ಕರ್‌ ಅವರ ಶಿಕ್ಷಣ- ಆಂದೋಲನ ಮತ್ತು ಸಂಘಟನೆ ಎಂಬ ಮೂರು ಅಂಶಗಳು ಜಾರಿಯಾಗಿಲ್ಲ. ಅಂಬೇಡ್ಕರ್‌ ಅವರ ಸಮಾನತೆಯ ತಣ್ತೀವನ್ನು ಉಳಿಸಿ- ಬೆಳೆಸಬೇಕು. ಅರ್ಥಪೂರ್ಣ, ಮುಕ್ತ ಸ್ವಾತಂತ್ರ್ಯ ನಮ್ಮ ದಾಗಬೇಕು ಎಂದರು.

ಪ್ರಾಂಶುಪಾಲ ಡಾ| ಉದಯ ಕುಮಾರ್‌ ಎಂ.ಎ., ಖಾಸಗೀಕರಣದಿಂದ ಸಂವಿಧಾನದತ್ತ ಸ್ವಾತಂತ್ರ್ಯವನ್ನು ಕಳೆದು ಕೊಳ್ಳಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪರಿಶಿಷ್ಟ ಜಾತಿ/ ಪಂಗಡಗಳ ಸೆಲ್‌ ಸಂಚಾಲಕ ಡಾ| ಸಂಜಯ್‌ ಅಣ್ಣಾ ರಾವ್‌ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶಬೀನಾ ವಂದಿಸಿ, ವಿದ್ಯಾರ್ಥಿನಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

ವ್ಯಾಖ್ಯಾನ ಅಗತ್ಯ
ಜಾತಿ ಪದ್ಧತಿ ಈಗಲೂ ಇದೆ, ಭಾಷೆ, ಅಹಾರ ಪದ್ಧತಿಯನ್ನೂ ಆವರಿಸಿಕೊಂಡಿದೆ. ಎಂದು ಪ್ರತಿಪಾದಿಸಿದ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಪ್ರೊ| ಪಟ್ಟಾಭಿರಾಮ ಸೋಮಯಾಜಿ, ಧರ್ಮವನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಸುಧಾರಣೆ ತರುವಂತವರಿರಬೇಕು. ನಮ್ಮ ದೇಶದ ಕುರಿತು ಚಿಂತನೆ ನಡೆಸಿದವರ ಬಗ್ಗೆ ಅರಿಯಬೇಕು. ಅಧಿಕಾರವನ್ನು ಪ್ರಶ್ನಿಸುವ ಛಾತಿಯಿರಬೇಕು, ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ