ಕೊನೆಗೂ ತಾಲೂಕು ಭಾಗ್ಯ: ಮತ್ತೇನು ಮಾಡಬೇಕು ಈಗ?

Team Udayavani, Mar 17, 2017, 3:42 PM IST

1603KDB1.jpg

ಕಡಬ: ಕೊನೆಗೂ ಮತ್ತೂಮ್ಮೆ ಕಡಬಕ್ಕೆ ತಾಲೂಕಾಗುವ ಭಾಗ್ಯ ದೊರಕಿದೆ. ಕದಂಬ ಅರಸರ ಕಾಲದಲ್ಲಿ ಆಡಳಿತ ಕೇಂದ್ರವಾಗಿದ್ದ ಇದು ಮತ್ತೆ ತಾಲೂಕು ಕೇಂದ್ರವಾಗಿದೆ. 

ಇದುವರೆಗೆ ತಾಲೂಕು ಕೇಂದ್ರವಾಗಲು ಪಟ್ಟ ಪರಿಶ್ರಮಕ್ಕೆ ಕೊನೆಯಿಲ್ಲ. ಹಾಗೆಂದು ಈಗ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಸಂಪೂರ್ಣ ಸುಸಜ್ಜಿತ ತಾಲೂಕು ಕೇಂದ್ರವಾಗಿ ಪರಿವರ್ತನೆಗೊಳ್ಳಲು ಒತ್ತಡ ಹೇರಬೇಕಾದ ಕೆಲಸ ಜನಪ್ರತಿನಿಧಿಗಳು, ನಾಗರಿಕರಿಂದ ಆಗಬೇಕಾಗಿದೆ. ಸುಸಜ್ಜಿತ ತಾಲೂಕು ಕೇಂದ್ರವಾಗಲು ಇನ್ನಷ್ಟು ಕಾಲಾವಕಾಶ ಅಗತ್ಯವಿದ್ದರೂ, ವ್ಯವಸ್ಥಿತ ಅಭಿವೃದ್ಧಿ ಕಾಮಗಾರಿ ತತ್‌ಕ್ಷಣ ಆರಂಭವಾಗಬೇಕಿದೆ. 

ಹೇಗಿದೆ ಇತಿಹಾಸ?
ಕಡಬಕ್ಕೆ ಐತಿಹಾಸಿಕ ಹಿನ್ನೆಲೆ ಇದೆ ಅನ್ನುವುದಕ್ಕೆ ಪೂರಕವಾಗಿ ಅಂದಿನ ಕಾಲದ ದೇಗುಲಗಳು, ಕೋಟೆಗಳು ಹಾಗೂ ಕೆರೆಗಳು ಕಾಣಸಿಗುತ್ತವೆ. ಕಡಬ ಸಂಸ್ಥಾನಕ್ಕೆ 38 ಗ್ರಾಮಗಳು ಒಳಪಡುತ್ತಿದ್ದವು ಎನ್ನುವುದಕ್ಕೆ ದಾಖಲೆಗಳಿವೆ. ಪುತ್ತೂರು ತಾಲೂಕಿನ 27, ಸುಳ್ಯ ತಾಲೂಕಿನ 10, ಬೆಳ್ತಂಗಡಿ ತಾಲೂಕಿನ 5 ಗ್ರಾಮಗಳನ್ನೊಳಗೊಂಡ 1,99,572.38 ಎಕ್ರೆ ಭೌಗೋಳಿಕ ವಿಸ್ತೀರ್ಣ ಹೊಂದಿರುವ 1.25 ಲಕ್ಷ ಜನಸಂಖ್ಯೆ ಜನಸಂಖ್ಯೆ ಹೊಂದಿರುವ ಕಡಬವನ್ನು ಕೇಂದ್ರವಾಗಿಸಿಕೊಂಡ ಕಡಬ ತಾಲೂಕನ್ನು ರಚಿಸಬೇಕೆನ್ನುವ ಪ್ರಸ್ತಾವನೆ 60ರ ದಶಕದಲ್ಲಿಯೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು.  2001ರಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರವಿದ್ದಾಗ ವಿಶೇಷ ತಹಶೀಲ್ದಾರ್‌ ನೇಮಿಸಲಾಯಿತು. 2004ರಲ್ಲಿ ಭೂಮಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ನೆಮ್ಮದಿ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್‌ ಠಾಣೆ, ಸರ್ವೆ ಇಲಾಖೆ, ವಿದ್ಯುತ್‌ ಸಬ್‌ ಸ್ಟೇಶನ್‌, ಮೆಸ್ಕಾಂ ಉಪ ವಿಭಾಗ, ಎ.ಪಿ.ಎಂ.ಸಿ.ಉಪಪ್ರಾಂಗಣ, ಬಹುತೇಕ ಎಲ್ಲ  ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಸೇರಿದಂತೆ ಹೆಚ್ಚಿನ ಸವಲತ್ತುಗಳು ಈಗ ಲಭ್ಯವಾಗಿವೆ. 

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡಿದೆ. ಕಡಬ-ಪಂಜ ರಸ್ತೆಯ ಅಗಲೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ. 

ಸದ್ಯಕ್ಕೆ ಏನಾಗಬೇಕು?
ಕಡಬ ತಾಲೂಕು ರಚನೆಯ ಪ್ರಸ್ತಾಪ ಬಂದಾಗ ಶಿರಾಡಿ, ಉದನೆ, ನೆಲ್ಯಾಡಿ ಭಾಗದವರಿಗೆ ಸಂಪರ್ಕ ವ್ಯವಸ್ಥೆಯ ಬಗ್ಗೆ ಸಮಸ್ಯೆ ಇತ್ತು, ಆದರೆ ಇದೀಗ ಹೊಸಮಠ ಸೇತುವೆ ನಿರ್ಮಾಣವಾಗಿದೆ. ಇಚ್ಲಂಪಾಡಿಯಲ್ಲಿ ಸೇತುವೆ ಆಗಿದೆ. ಉದನೆಯಲ್ಲೂ ಹೊಸ ಸೇತುವೆ ನಿರ್ಮಾಣವಾಗಲಿದೆ. ದೋಳ್ಪಾಡಿ, ಎಡಮಂಗಲ ಭಾಗದವರಿಗೆ ಕಡಬ ಇನ್ನೂ ಹತ್ತಿರವಾಗಲು ಪಿಜಕಳದ ಪಾಲೋಳಿ ಯಲ್ಲಿ ಕುಮಾರಧಾರೆಗೆ ಹೊಸ ಸೇತುವೆ ನಿರ್ಮಾಣವಾಗಬೇಕಾಗಿದೆ.

ಕಾದಿರಿಸಿದ ಜಮೀನುಗಳು
ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ 1.60 ಎಕ್ರೆ
ನಾಡ ಕಚೇರಿಗೆ     1.00 ಎಕ್ರೆ, 
ಶಿಕ್ಷಣ ಇಲಾಖೆಗೆ     14.56 ಎಕ್ರೆ, 
ಪೊಲೀಸ್‌ ಇಲಾಖೆಗೆ     2.5 ಎಕ್ರೆ, 
ಲೋಕೋಪಯೋಗಿ ಇಲಾಖೆಗೆ     0.20 ಎಕ್ರೆ 
ಪಂಚಾಯತ್‌ ರಾಜ್‌ ಇಲಾಖೆಗೆ     5.62 ಎಕ್ರೆ 
ನ್ಯಾಯಾಂಗ ಇಲಾಖೆಗೆ     2.50 ಎಕ್ರೆ 
ಕೃಷಿ ಇಲಾಖೆಗೆ     0.10 ಎಕ್ರೆ 
ಮೆಸ್ಕಾಂಗೆ     2.90 ಎಕ್ರೆ 
ಆರೋಗ್ಯ ಇಲಾಖೆಗೆ     2.11 ಎಕ್ರೆ 

 - ನಾಗರಾಜ್‌ ಎನ್‌.ಕೆ. ಕಡಬ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.