ಉಡುಪಿಯಲ್ಲಿ ಪೊಲೀಸರ ಕೊರತೆ: ಚಾಲಕರಿಂದಲೇ ಸಂಚಾರ ನಿಯಂತ್ರಣ !

Team Udayavani, Apr 18, 2019, 6:15 AM IST

ಚಿತ್ರ: ಆಸ್ಟ್ರೋ ಮೋಹನ್‌.

ಉಡುಪಿ: ಚುನಾವಣಾ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರು ನಿಯೋಜಿಸಲ್ಪಟ್ಟಿರುವುದರಿಂದ ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನದ ಅನಂತರ ಉಡುಪಿ ಮತ್ತು ಸುತ್ತಲಿನ ಹಲವು ಪೊಲೀಸ್‌ ಠಾಣೆಗಳಲ್ಲಿ ಸಿಬಂದಿ ಕೊರತೆ ತೀವ್ರವಾಗಿ ಕಾಡಿದೆ.

2 ದಿನ ಕೂಡ ಮಧ್ಯಾಹ್ನದ ಅನಂತರ ವಾಹನ ಸಂಚಾರ ದಟ್ಟಣೆಯ ಕಲ್ಸಂಕ ಜಂಕ್ಷನ್‌ನಲ್ಲಿ ಸಂಚಾರ ಪೊಲೀಸರು ಇರದಿದ್ದ ಕಾರಣ ಸಂಚಾರ ದುಸ್ತರವಾಯಿತು. ಅನಂತರ ಕೆಲವು ರಿಕ್ಷಾ ಚಾಲಕರು ಮತ್ತು ಉತ್ಸಾಹಿ ಯುವಕರು ಸೇರಿದಂತೆ 4-5 ಮಂದಿ ಸಂಚಾರ ನಿಯಂತ್ರಿಸಲು ಆರಂಭಿಸಿದರು. ಆದರೆ ವಾಹನ ಚಾಲಕರು ಸರಿಯಾಗಿ ಸಹಕರಿಸದ ಕಾರಣ ವಾಹನ ದಟ್ಟಣೆ ಅತಿಯಾಯಿತು. ರಾತ್ರಿ 8.30ರ ವೇಳೆಯವರೆಗೂ ಸಿಟಿ ಬಸ್‌ ನಿಲ್ದಾಣದವರೆಗೆ ವಾಹನಗಳ ಸಾಲು ಇತ್ತು. ಉಡುಪಿ ಸಂಚಾರ ಠಾಣೆಯಲ್ಲಿ ಸಂಜೆ ವೇಳೆ ಕೇವಲ ಇಬ್ಬರು ಪೊಲೀಸರು ಮಾತ್ರ ಲಭ್ಯರಿದ್ದರು.

ಲೋಕಸಭಾ ಚುನಾವಣೆ: ಶೇ. 30ರಷ್ಟು ನರ್ಮ್ ಬಸ್‌ ಬಳಕೆ
ಉಡುಪಿ: ಚುನಾವಣಾ ಕಾರ್ಯಕಾಗಿ ನರ್ಮ್ ಬಸ್‌ ಬಳಸಿಕೊಂಡ ಹಿನ್ನೆಲೆಯಲ್ಲಿ ಬಸ್‌ಗಳ ಕೊರತೆಯುಂಟಾಗಿದ್ದು, ನಗರದ ಭಾಗಗಳಿಗೆ ತೆರಳಲು ಪ್ರಯಾಣಿಕರು ಪರ ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಉಡುಪಿ ಚಿಕ್ಕ ಮಗಳೂರು ಲೋಕಸಭಾ ಚುನಾವಣೆ ಕರ್ತವ್ಯದ ಹಿನ್ನಲೆಯಲ್ಲಿ ಶೇ. 30ರಷ್ಟು ನರ್ಮ್ ಬಸ್‌ ಬಳಸಿಕೊಳ್ಳಲಾಗಿದೆ. ಬಸ್‌ ಕೊರತೆಯಿಂದಾಗಿ ಪ್ರಯಾಣಿಕರು ಅನಿರ್ವಾಯವಾಗಿ ಆಟೋ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ