ಮತ್ತೆ ಮಿಂಚಿದ ಶ್ರೀನಿವಾಸ ಗೌಡ: ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಚಾಂಪಿಯನ್

ಇಲ್ಲಿದೆ ವೇಣೂರು ಪೆರ್ಮುಡ ಕಂಬಳದ ಸಂಪೂರ್ಣ ಫಲಿತಾಂಶ

Team Udayavani, Mar 22, 2021, 8:34 AM IST

ಮತ್ತೆ ಮಿಂಚಿದ ಶ್ರೀನಿವಾಸ ಗೌಡ: ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಚಾಂಪಿಯನ್

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ಶನಿವಾರ ಆರಂಭವಾದ “ಸೂರ್ಯ – ಚಂದ್ರ” ಜೋಡುಕರೆ ಬಯಲು ಕಂಬಳ ಭಾನುವಾರ ರಾತ್ರಿ ಸಂಪನ್ನವಾಗಿದೆ. ಹೊಸ ದಾಖಲೆ ಬರೆದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಮೂರು ‘ಪ್ರಥಮ’ ಪದಕ ಪಡೆದು ಮಿಂಚಿದರು.

28ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳದಲ್ಲಿ ಒಟ್ಟು 200 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ನಾಲ್ಕು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಆರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 16 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 24 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 124 ಜೊತೆ ಭಾಗವಹಿಸಿದ್ದವು. ಮೂಡುಬಿದಿರೆ ಮತ್ತು ಮಿಯ್ಯಾರು ಹೊರತುಪಡಿಸಿದರೆ ಅತೀ ಹೆಚ್ಚು ಕೋಣಗಳು ಭಾಗವಹಿಸಿದ ಕೂಟ ಇದಾಗಿತ್ತು.

ಇರುವೈಲು ಪಾಣಿಲ ಚಾಂಪಿಯನ್: ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳು ಇನ್ನೂ ಒಂದು ಕಂಬಳ ಬಾಕಿ ಇರುವಂತೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದವು. ಕಳೆದೊಂದು ದಶಕದಿಂದ ಬೋಳದಗುತ್ತು ಸತೀಶ್ ಶೆಟ್ಟಿ ಮತ್ತು ಇರುವೈಲು ಪಾಣಿಲ ನೇಗಿಲು ಹಿರಿಯ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದೆ. ಕಳೆದ ಸತತ ಆರು ವರ್ಷಗಳಿಂದ ಬೋಳದಗುತ್ತು ಚಾಂಪಿಯನ್ ಪಟ್ಟ ಪಡೆದಿತ್ತು. ಆದರೆ ವೇಣೂರು ಕಂಬಳದಲ್ಲಿ ಸೆಮಿ ಫೈನಲ್ ವಿಭಾಗದಲ್ಲಿ ಬೋಳದಗುತ್ತು ಸೋಲನುಭವಿಸಿದ ಕಾರಣ ಇನ್ನೊಂದು ಕಂಬಳ ಬಾಕಿ ಇರುವಂತೆ ಇರುವೈಲು ಚಾಂಪಿಯನ್ ಪಟ್ಟ ಅಲಂಕರಿಸಿತು.

ಇದನ್ನೂ ಓದಿ:ಬೈಂದೂರು, ಕಾರವಾರದಲ್ಲಿ ಉಡಾನ್‌ ನಿಲ್ದಾಣ: ಶೆಟ್ಟರ್‌

ವೇಣೂರು ಕಂಬಳ 2021 ಫಲಿತಾಂಶ

ಕನೆಹಲಗೆ 

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ. ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್

ಅಡ್ಡ ಹಲಗೆ

ಪ್ರಥಮ: ಕೋಟ ಗಿಳಿಯಾರು ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ “ಎ”.  ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ”.ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ

ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ “ಬಿ” :ಓಡಿಸಿದವರು. ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್ “ಬಿ”. ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ

ಹಗ್ಗ ಕಿರಿಯ

ಪ್ರಥಮ: ಕಾಂತಾವರ ಬಾರಾಡಿ ಬೀಡು ನಿಹಾಲ್ ಜೆ ಬಳ್ಳಾಳ್. ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ. ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ

ಇದನ್ನೂ ಓದಿ: ಕಂಬಳ ಕರೆಯಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ

ನೇಗಿಲು ಹಿರಿಯ

ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ “ಎ”. ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ವೇಣೂರು ಪೆರ್ಮುಡ ಸನತ್ – ಸಂಪತ್ ಅಂಚನ್. ಓಡಿಸಿದವರು: ಬೈಂದೂರು ವಿವೇಕ್

ನೇಗಿಲು ಕಿರಿಯ

ಪ್ರಥಮ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ “ಬಿ”. ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್. ಶೆಟ್ಟಿ

ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ”. ಓಡಿಸಿದವರು: ಮರೋಡಿ ಶ್ರೀಧರ್

ಟಾಪ್ ನ್ಯೂಸ್

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

yatnal

ನಮಗೆ ದಿಲ್ಲಿಗೆ ಹೋಗುವ ಚಟ ಇದೆ;ಯುಗಾದಿ ಹೊತ್ತಿಗೆ ಬದಲಾವಣೆ: ಯತ್ನಾಳ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಈ ಬಾರಿ 50 ಕೋಟಿ ರೂ.ಬಜೆಟ್‌

ಈ ಬಾರಿ 50 ಕೋಟಿ ರೂ.ಬಜೆಟ್‌

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ

 ಹಸ್ತಾಂತರವಾಗದ ಸತ್ಯನಪಲ್ಕೆ ಸಮೀಪದ ನೀರಿನ ಘಟಕ; ವ್ಯರ್ಥವಾಗುತ್ತಿದೆ ಯಂತ್ರೋಪಕರಣ

 ಹಸ್ತಾಂತರವಾಗದ ಸತ್ಯನಪಲ್ಕೆ ಸಮೀಪದ ನೀರಿನ ಘಟಕ; ವ್ಯರ್ಥವಾಗುತ್ತಿದೆ ಯಂತ್ರೋಪಕರಣ

ವಿಟ್ಲ: ತೆಂಗಿನಮರದಿಂದ ಬಿದ್ದು ಕೃಷಿ ಕಾರ್ಮಿಕ ಸಾವು

ವಿಟ್ಲ: ತೆಂಗಿನಮರದಿಂದ ಬಿದ್ದು ಕೃಷಿ ಕಾರ್ಮಿಕ ಸಾವು

MUST WATCH

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಹೊಸ ಸೇರ್ಪಡೆ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.