ರಸ್ತೆ ಬದಿಯಲ್ಲಿ 1,111 ಯೋಗ ಪಟುಗಳಿಂದ ಯೋಗ
Team Udayavani, Jun 22, 2017, 12:12 PM IST
ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ- 2017ರ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ವತಿಯಿಂದ 6 ವಲಯಗಳ ನೇತೃತ್ವ ದಲ್ಲಿ ಮಂಗಳೂರು ಜ್ಯೋತಿ ವೃತ್ತ (ಅಂಬೇಡ್ಕರ್ ವೃತ್ತ)ದಿಂದ ಆರ್ಟಿಒ ವರೆಗೆ ರಸ್ತೆಯ ಒಂದು ಬದಿಯಲ್ಲಿ ಸುಮಾರು 1,111 ಯೋಗ ಪಟುಗಳು 5 ಪ್ರಕಾರಗಳ ಯೋಗ ನಡೆಸಿದರು.
ಸಂಜೆ 6.57ಕ್ಕೆ ಶಾಂತಿ ಮಂತ್ರ ದೊಂದಿಗೆ ಪ್ರಾರಂಭವಾದ ಯೋಗಾ ಸನ ನಮಸ್ಕಾರ ಸ್ಥಿತಿ, ತಾಡಾಸನ, ಉತ್ಕಟಾಸನ, ವೀರ ಭದ್ರಾಸನ, ಸಮಸ್ಥಿತಿ ತಾಡಾಸನದೊಂದಿಗೆ 7.02 ಗಂಟೆಗೆ (5 ನಿಮಿಷಗಳ ಕಾಲ) ಮುಕ್ತಾಯ ಗೊಂಡಿತು. ಯೋಗಪಟುಗಳಿಗೆ ಸೂಕ್ತ ನಿರ್ದೇಶನ ನೀಡಲು ಪ್ರತೀ 15 ಜನರೊಬ್ಬರಂತೆ ಬೋಧಕರನ್ನು ನೇಮಿಸಲಾಗಿತ್ತು. ಪೂರ್ವ, ಪಶ್ಚಿಮ, ದಕ್ಷಿಣ, ಗ್ರಾಮಾಂತರ ಸೇರಿದಂತೆ ಕಿರಿಯರಿಂದ ಹಿಡಿದು ಹಿರಿಯರ ವರೆಗೆ 6 ವಲಯದ ಯೋಗಪಟು ಗಳು ಭಾಗವಹಿಸಿದ್ದರು.
ಯೋಗದ ಬಗ್ಗೆ ಜನರಿಗೆ ಮಾಹಿತಿ ನೀಡುವುದರೊಂದಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಕಾರ್ಯ ಕ್ರಮ ಆಯೋಜಿಲಾಗಿದೆ ಎಂದು ಮಂಗಳೂರು ವಲಯ ಸಂಚಾಲಕ ಅಶೋಕ್ ಕುಮಾರ್ ಹಾಗೂ ಜಿಲ್ಲಾ ಸಂಚಾಲಕ ಶಿವಾನಂದ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ