Udayavni Special

ಸೇತುವೆ ನಿರ್ಮಾಣಕ್ಕೆ ಮುಹೂರ್ತ ಎಂದು?

Team Udayavani, Jun 24, 2021, 9:14 PM IST

24-9

„ಎಂ.ಪಿ.ಎಂ ವಿಜಯಾನಂದಸ್ವಾಮಿ

ಹೊನ್ನಾಳಿ: ಸಮೀಪದ ಗೋವಿನಕೋವಿ ಮತ್ತು ರಾಂಪುರ ಮಧ್ಯೆ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಸುಮಾರು 50 ವರ್ಷಗಳಷ್ಟು ಹಳೆಯದು. ಆದರೂ ಸೇತುವೆ ನಿರ್ಮಾಣವಾಗಿಲ್ಲ. ಮೊದಲು ಹೊನ್ನಾಳಿ ತಾಲೂಕಿನಲ್ಲಿದ್ದ ತುಂಗಭದ್ರಾ ನದಿ ದಂಡೆಯ ಗೋವಿನಕೋವಿ, ಕುರುವ, ಗ್ರಾಮಗಳು ಈಗ ನ್ಯಾಮತಿ ತಾಲೂಕಿಗೆ ಸೇರಿವೆ.

ಈ ಊರುಗಳ ಸಂಪರ್ಕ ಬೇರೆ ತಾಲೂಕು ಹಾಗೂ ಜಿಲ್ಲೆಗಳ ಸಂಪರ್ಕಕ್ಕೆ ಸುಲಭವಾಗಲು ನದಿಗೆ ಸೇತುವೆ ಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇದೆ. ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಮಾಡಲು 1965 ರಲ್ಲಿ ಕೃಷಿ ಮಂತ್ರಿಗಳಾಗಿದ್ದ ಎಚ್‌. ಎಸ್‌. ರುದ್ರಪ್ಪ ಅವರ ಕಾಲದಿಂದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ತನಕ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಇನ್ನೂ ಕಾರ್ಯ ರೂಪಕ್ಕೆ ಬಾರದೇ ಇರುವುದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ.

ಸೇತುವೆ ನಿರ್ಮಾಣವಾದರೆ ಅನುಕೂಲವೇನು?: ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣವಾದರೆ ನ್ಯಾಮತಿಯಿಂದ ರಾಂಪುರ ಮತ್ತು ಗೆಡ್ಡೆ ರಾಮೇಶ್ವರ ಕ್ಷೇತ್ರಕ್ಕೆ ಕೇವಲ 11 ರಿಂದ 13 ಕಿಮೀ ದೂರ ಹಾಗೂ ಸಾಸ್ವೆಹಳ್ಳಿ ಹೋಬಳಿ ಕೇಂದ್ರಕ್ಕೆ 14 ಕಿಮೀ ಅಂತರದಲ್ಲಿ ಕ್ರಮಿಸಬಹುದು. ಸೇತುವೆ ಇಲ್ಲದ ಕಾರಣ ನ್ಯಾಮತಿ ತಾಲೂಕಿನ ಅನೇಕ ಗ್ರಾಮಗಳ ಜನರು ಹೊನ್ನಾಳಿಗೆ ಬಂದು ಬೆನಕನಹಳ್ಳಿ ಗ್ರಾಮದ ಮೂಲಕ ಸುಮಾರು 30 ಕಿಮೀ ಸುತ್ತುವರೆದು ಹೋಗಬೇಕಾಗಿದೆ.

ಇದು ಕೇವಲ ನ್ಯಾಮತಿ ತಾಲೂಕಿನ ಗ್ರಾಮಗಳ ಸಮಸ್ಯೆ ಮಾತ್ರ ಅಲ್ಲ. ಶಿವಮೊಗ್ಗ, ಚಿತ್ರದುರ್ಗ, ಶಿಕಾರಿಪುರ, ಚನ್ನಗಿರಿ, ನ್ಯಾಮತಿ ಮಾರ್ಗದ ಜತೆಗೆ ಸಾಸ್ವೆಹಳ್ಳಿ, ಗೋವಿನಕೋವಿ ಹೋಬಳಿಯ ಗ್ರಾಮಗಳಿಗೂ ಅನ್ವಯಿಸುತ್ತದೆ. ಜನವರಿ ತಿಂಗಳ ಅಂತ್ಯದಿಂದ ಮೇ ತಿಂಗಳ ಅಂತ್ಯದವರಿಗೆ ನದಿ ಇಳಿದಿರುವ ಕಾರಣ ಕಾಲುಹಾದಿಯಲ್ಲಿ ನದಿ ದಾಟಿ ಹೋಗಬಹುದು.

ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ದಾಟಲು ಸಾಧ್ಯವಿಲ್ಲ. ರಾಂಪುರ, ಸಾಸ್ವೆಹಳ್ಳಿ, ಚನ್ನಗಿರಿಗೆ ಹೋಗಬೇಕಾದರೆ ಹೊನ್ನಾಳಿ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಮೇಲೆ ಹೋಗಬೇಕು. ಇಲ್ಲವಾದರೆ ದೋಣಿ, ಹರಿಗೋಲಿನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.

ದ್ವೀಪದಂತಿರುವ ನಡುಗಡ್ಡೆಯಲ್ಲಿ ಗಡ್ಡೆ ರಾಮೇಶ್ವರ ದೇಗುಲ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರ ಮೂಲ ಗುರುಗಳ ಗದ್ದುಗೆಯ ಗವಿ ಇದೆ. ಮಳೆಗಾಲ ಬಂದರೆ ಸುಮಾರು ಆರು ತಿಂಗಳು ಕಾಲ ಸಂಪರ್ಕ ಇಲ್ಲದೇ ಬಂದ್‌ ಆಗುತ್ತದೆ. ವಾರಕ್ಕೊಮ್ಮೆ ಬಂದು ದೇವರ ಅರ್ಚನೆ ನಡೆಸಲಾಗುತ್ತದೆ.

ನದಿ ನೀರು ಜಾಸ್ತಿ ಆದರೆ ಬರುವುದಿಲ್ಲ. ಆದ್ದರಿಂದ ಇಲ್ಲಿಗೊಂದು ಸೇತುವೆ ಅವಶ್ಯಕತೆ ಇದೆ ಎನ್ನುತ್ತಾರೆ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ, ರಾಂಪುರ ಮತ್ತಿತರ ಗ್ರಾಮಗಳ ಜನರು.

ಟಾಪ್ ನ್ಯೂಸ್

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ಭ್ರಷ್ಟಾಚಾರ ಆರೋಪ: ಬಿಎಸ್‌ವೈ ಸೇರಿ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಭ್ರಷ್ಟಾಚಾರ ಆರೋಪ: ಬಿಎಸ್‌ವೈ ಸೇರಿ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

Priyanka Gandhi slams govt over inflation, says stop killing poor

ಹಣದುಬ್ಬರವನ್ನು ಇಳಿಸಿ, ಜನರನ್ನು ಸಾಯಿಸುವುದನ್ನು ನಿಲ್ಲಿಸಿ : ಪ್ರಿಯಾಂಕ ಗಾಂಧಿ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

3-11

ಬಿಜೆಪಿಯಿಂದ ಹಿಂದುಳಿದ ವರ್ಗದ ಕಡೆಗಣನೆ

Udayavani Davanagere News, Bhadhra Dam News

ಭದ್ರೆ ಒಡಲು ಭರ್ತಿಯಾದ್ರೆ ಬದುಕು ಹಸನು

1-18

ಈಶ್ವರಪ್ಪ-ಸೋಮಲಿಂಗಪ್ಪ ಸಚಿವರಾಗಲಿ

1-16

ಮಾರ್ಗಸೂಚಿ ಉಲ್ಲಂಘನೆಗೆ ಕಠಿಣ ಕ್ರಮ

MUST WATCH

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

udayavani youtube

ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

udayavani youtube

ಸಾವಿರಕ್ಕೂ ಅಧಿಕ ಬಾರಿ ದೇವರನ್ನು ಹೊತ್ತ ಈ ಹಿರಿ ಜೀವ

ಹೊಸ ಸೇರ್ಪಡೆ

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

3-15

ಕೋವಿಡ್ ಸಂಕಷ್ಟದಲ್ಲಿಯೂ ಕುವೆಂಒಪು ವಿವಿ ಗಮನಾರ್ಹ ಕಾರ್ಯ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.