ದಾವಣಗೆರೆಯಲ್ಲಿ ಅಪಘಾತ :9 ಶಾಲಾ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Team Udayavani, Feb 3, 2018, 11:20 AM IST

ದಾವಣಗೆರೆ : ಜಗಳೂರಿನ  ಗೋಪಳಾಪುರ ಬಳಿ ಹಾಲಿನ ಕ್ಯಾನ್‌ಗಲನ್ನು ಸಾಗಿಸುತ್ತಿದ್ದ  ವ್ಯಾನ್‌ ಮತ್ತು  ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್‌ ವಾಹನದ ನಡುವೆ  ಶನಿವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು , 9 ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ವಿದ್ಯಾರ್ಥಿಗಳು ಗೋಪಲಾಪುರದಿಂದ ಸೊಕ್ಕೆ ಎಂಬಲ್ಲಿನ ಪ್ರೌಢ ಶಾಲೆಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ. 

ಟಾಟಾ ಏಸ್‌ ಚಾಲಕನ ಅಜಾಗರುಕತೆಯಿಂದಲಾಗಿಯೇ ಅವಘಡ ಸಂಭವಿಸಿದೆ. 

ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ